ಉನ್ನಾವ್ : ಶಿವಲಿಂಗದ ಮೇಲಿದ್ದ ಹಾವಿನ ಕಿರೀಟವನ್ನು ಯುವಕನೊಬ್ಬ ಬ್ಯಾಗ್‌ಗೆ ಹಾಕಿ ಕೊಂಡೊಯ್ದಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಗಂಗಾ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ದೇವಾಲಯದಲ್ಲಿ ಸಂಭವಿಸಿದೆ. ದೇವಾಲಯಕ್ಕೆ ಆಗಮಿಸಿದ ಯುವಕ, ಶಿವಲಿಂಗದ ಮೇಲಿದ್ದ ಹಾವಿನ ಕಿರೀಟ ತೆಗೆಯುವ ಮೊದಲು ಶಿವಲಿಂಗವನ್ನು ಸ್ಪರ್ಶಿಸಿ 6 ಬಾರಿ ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದ್ದಾನೆ.
उन्नाव के मंदिर से शिवलिंग पर चढ़े नाग को बैग में डालकर ले गया युवक
उन्नाव के गंगाघाट कोतवाली क्षेत्र के एक शिव मंदिर में पूजा करने के बाद एक युवक शिवलिंग पर चढ़े नाग को बैग में डालकर ले गया. बताया जा रहा है कि युवक ने नाग को ले जाने से पहले 6 बार शिवलिंग को छूकर प्रार्थना की.… pic.twitter.com/KU71j5HbBQ
— zingabad (@zingabad) August 31, 2026
ಪ್ರಾರ್ಥನೆ ಮುಗಿಸಿದ ತಕ್ಷಣ, ಶಿವಲಿಂಗದ ಮೇಲಿದ್ದ ಹಾವಿನ ಕಿರೀಟವನ್ನು ನಿಧಾನವಾಗಿ ತೆಗೆದು ತನ್ನ ಬಳಿಯಿದ್ದ ಚೀಲಕ್ಕೆ (Bag) ಹಾಕಿ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾನೆ. ಈ ಸಂಪೂರ್ಣ ಪ್ರಸಂಗವು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಸ್ಪೆನ್ಸ್ ಸಿನಿಮಾದಂತೆ ಸೆರೆಯಾಗಿದೆ.
ಇದನ್ನೂ ಓದಿ: ಕಿವಿ ತುರಿಕೆಗೆ ಆನೆಯ ‘ದೇಸಿ ಟ್ರೀಟ್‌ಮೆಂಟ್’: ಸಣ್ಣ ಕಡ್ಡಿಯನ್ನೇ ಬಳಸಿಕೊಂಡು ಆರಾಮ ಕಂಡ ಆನೆಯ ವಿಡಿಯೋ ವೈರಲ್
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ಹಾವನ್ನು ಏಕೆ ಕೊಂಡೊಯ್ದ ಎಂಬ ಬಗ್ಗೆ ಸ್ಥಳೀಯವಾಗಿ ಹಾಗೂ ಪೊಲೀಸರ ವಲಯದಲ್ಲಿ ಚರ್ಚೆ ಆರಂಭವಾಗಿದೆ.

