ಮನುಷ್ಯರಂತೆ ಕಿವಿ ತುರಿಸಿಕೊಳ್ಳುತ್ತಿರುವ ಆನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ ಬುದ್ಧಿವಂತಿಕೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಕಿವಿಯಲ್ಲಿ ತುರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆನೆಯೊಂದು ಸಣ್ಣ ಕಡ್ಡಿಯನ್ನು ಸೊಂಡಿಲಿನಿಂದ ಹಿಡಿದುಕೊಂಡು ತನ್ನ ಕಿವಿಯ ಬಳಿ ತಂದು ತುರಿಸಿಕೊಂಡಿದೆ. ಸೊಂಡಿಲಿನ ಸಹಾಯದಿಂದ ಕಡ್ಡಿಯನ್ನು ಹಿಡಿದುಕೊಂಡು ಕಿವಿಯ ತುರಿಕೆಯನ್ನು ಶಮನ ಮಾಡಿಕೊಳ್ಳುತ್ತಿರುವ ಆನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಮಾನ್ಯವಾಗಿ ಆಹಾರ ಸೇವಿಸಲು, ನೀರು ಕುಡಿಯಲು ಹಾಗೂ ವಿವಿಧ ವಸ್ತುಗಳನ್ನು ಹಿಡಿಯಲು ಸೊಂಡಿಲನ್ನು ಬಳಸುವ ಆನೆ, ಕಿವಿ ತುರಿಸಿಕೊಳ್ಳಲೂ ಸೊಂಡಿಲನ್ನೇ ‘ಕೈ’ಯಂತೆ ಬಳಸಿಕೊಂಡಿರುವುದು ವಿಡಿಯೋದಲ್ಲಿನ ವಿಶೇಷ ಆಕರ್ಷಣೆಯಾಗಿದೆ.
ಇದನ್ನೂ ಓದಿ: ವೈರಲ್ ಟ್ರೆಂಡ್ ಚೇಸ್ ಮಾಡಿ ಪಜೀತಿಗೆ ಸಿಲುಕಿದ ಪ್ರೇಮಿಗಳು: ಕಾರಿಗೆ 3,400 ‘ಕಿಸ್’ ನೀಡಿ 5,500 ರೂ. ದಂಡ ತೆತ್ತ ಯುವಕ
ಆನೆಯ ಈ ವಿಭಿನ್ನ ವರ್ತನೆ ಕಂಡ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವೇ ಕ್ಷಣಗಳ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಆನೆಯ ಚತುರತೆ ಹಾಗೂ ಸೊಂಡಿಲಿನ ಬಹುಮುಖ ಬಳಕೆಗೆ ಮತ್ತೊಂದು ಉದಾಹರಣೆ ಎಂಬಂತೆ ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಕಿವಿ ತುರಿಕೆಗೆ ಸಣ್ಣ ಕಡ್ಡಿಯನ್ನು ಬಳಸಿಕೊಂಡ ಆನೆಯ ‘ದೇಸಿ ಟ್ರೀಟ್‌ಮೆಂಟ್’ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

