ಬೆಂಗಳೂರು : ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ತಮ್ಮ ಕಾರನ್ನು ಅಕ್ರಮವಾಗಿ ಮಾರ್ಪಾಡು ಮಾಡಿಸಿ, ನಗರ ರಸ್ತೆಗಳ ಮೇಲೆ ಗದ್ದಲ ಸೃಷ್ಟಿಸಿದ್ದಕ್ಕಾಗಿ ರೂ. 1.11 ಲಕ್ಷ ದಂಡವನ್ನು ಕಟ್ಟಬೇಕಾದ ಸ್ಥಿತಿಗೆ ತಲುಪಿದ್ದಾನೆ. ಜನವರಿ ಮೊದಲ ವಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳಿಂದ ಈ ವಿಷಯ ಬೆಳಕಿಗೆ ಬಂದಿದ್ದು, ವೀಡಿಯೊಗಳಲ್ಲಿ ಕಾರು ಭಾರೀ ಶಬ್ದ ಮಾಡುತ್ತಾ ಸಂಚರಿಸುವುದು, ಎಕ್ಸಾಸ್ಟ್ ಪೈಪ್‌ನಿಂದ ಬೆಂಕಿ ಚಿಮ್ಮುವುದು ಕಂಡುಬಂದಿದ್ದು, ಇತರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಪಾಯ ಉಂಟುಮಾಡುವಂತಿತ್ತು ಎಂಬುವುದು ವರದಿಯಾಗಿದೆ. ಈ ಕಾರು ಈಶಾನ್ಯ ಬೆಂಗಳೂರಿನ ಹೆನ್ನೂರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಸಾರ್ವಜನಿಕರು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
Fire from the exhaust? Expect the cost. Public roads aren’t stunt posts.
ಸಾರ್ವಜನಿಕ ರಸ್ತೆಗಳು ಸ್ಟಂಟ್ ಮಾಡುವ ಜಾಗವಲ್ಲ. ನಿಮ್ಮ ವಾಹನದ ಎಕ್ಸಾಸ್ಟ್ (Exhaust) ಮಾರ್ಪಡಿಸಿ ಕಿಡಿ ಅಥವಾ ಬೆಂಕಿ ಹೊರಬರುವಂತೆ ಮಾಡುವುದು ಕಾನೂನುಬಾಹಿರ. ನಿಮ್ಮ ಸಾಹಸಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿರಲಿ.#NoStunts… pic.twitter.com/c6cJOShJaW
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 15, 2026
ಪೊಲೀಸ್ ಕ್ರಮ ಮತ್ತು ತನಿಖೆ ;
ಸಾರ್ವಜನಿಕ ದೂರುಗಳು ಹಾಗೂ ಆನ್‌ಲೈನ್ ವೀಡಿಯೊಗಳ ಆಧಾರದ ಮೇಲೆ ಹೆನ್ನೂರು ಟ್ರಾಫಿಕ್ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ, ಪ್ರಕರಣವನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗೆ ಒಪ್ಪಿಸಿದರು. ತನಿಖೆಯಲ್ಲಿ, ಸುಮಾರು ₹70,000 ಮೌಲ್ಯದ 2002ರ ಮಾದರಿಯ ಈ ಕಾರಿನಲ್ಲಿ ಗಂಭೀರ ಅಕ್ರಮ ಮಾರ್ಪಾಡುಗಳನ್ನು ಮಾಡಲಾಗಿರುವುದು ಪತ್ತೆಯಾಗಿದೆ. ವಿಶೇಷವಾಗಿ ಸೈಲೆನ್ಸರ್‌ನಲ್ಲಿ ಕೈಚಳಕ ಮಾಡಿ, ಅತಿಯಾದ ಶಬ್ದ ಮತ್ತು ಸ್ಪಾರ್ಕ್ (ಚಿಂಗರಿ) ಹೊರಬರುವಂತೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವು ಸಣ್ಣ ಅಲಂಕಾರಿಕ ಬದಲಾವಣೆಗಳಲ್ಲ, ಬದಲಾಗಿ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವಂತಹ ಮೋಟಾರು ವಾಹನ ಕಾಯ್ದೆಯ ಗಂಭೀರ ಉಲ್ಲಂಘನೆಗಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನು ಸಾಮಾನ್ಯ ಟ್ರಾಫಿಕ್ ಉಲ್ಲಂಘನೆಯಂತೆ ಪರಿಗಣಿಸದೆ, ಕಾನೂನಿನಡಿಯಲ್ಲಿ ಸಾಧ್ಯವಿರುವ ಗರಿಷ್ಠ ದಂಡ ವಿಧಿಸಲು ಅಧಿಕಾರಿಗಳು ತೀರ್ಮಾನಿಸಿದರು. ಕಾರಿನ ಮೌಲ್ಯಕ್ಕಿಂತಲೂ ಹೆಚ್ಚಿನ ದಂಡ ವಿಧಿಸಿರುವುದು, ಇತರರು ಇಂತಹ ಅಕ್ರಮ ಮಾರ್ಪಾಡುಗಳಿಗೆ ಮುಂದಾಗದಂತೆ ಎಚ್ಚರಿಕೆಯ ಸಂದೇಶ ನೀಡುವ ಉದ್ದೇಶದಿಂದಲೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Belthangady: ಶಾಲೆಗೆ ಹೊರಟ ಬಾಲಕನಿಗೆ ಎದುರಾದ ಚಿರತೆ!
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com


