Breaking News

ಸಿಂಹದ ಜೊತೆ ಸ್ಟಂಟ್‌ಗೆ ಹೋದ ಕನ್ನಡ ನಟ ಕಿರಣ್ ರಾಜ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೋ

ಬೆಂಗಳೂರು: ಕನ್ನಡ ಕಿರುತೆರೆ ಹಾಗೂ ಬೆಳ್ಳಿಪರದೆಯ ಖ್ಯಾತ ನಟ ಕಿರಣ್ ರಾಜ್ ಸಿಂಹ ತರಬೇತಿ ಪಡೆಯುವ ಸಾಹಸಕ್ಕೆ ಕೈಹಾಕಿದ್ದು, ಸಫಾರಿ ವೇಳೆ ಸಿಂಹವೊಂದು ಅವರ ಮೇಲೆ ಎರಗಿ ದಾಳಿ ಮಾಡಿದಂತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಅಭಿಮಾನಿಗಳು ನಟನ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನಟ ಕಿರಣ್ ರಾಜ್ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು, “ಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿಯುವ ಮೊದಲ ದಿನ” (First day of learning how to train a lion) ಎಂದು ಕ್ಯಾಪ್ಷನ್ ನೀಡಿದ್ದಾರೆ. ವೀಡಿಯೋದಲ್ಲಿ ‘ರೋಜರ್’ ಮತ್ತು ‘ರಾಕಿ’ ಎಂಬ ಹೆಸರಿನ ಎರಡು ಸಿಂಹಗಳಿದ್ದು, ಅವುಗಳ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದಾಗಿ ಕಿರಣ್ ರಾಜ್ ಹೇಳಿದ್ದಾರೆ.

ತರಬೇತಿಯ ಸಂಭಾಷಣೆಯ ನಡುವೆಯೇ ಇದ್ದಕ್ಕಿದ್ದಂತೆ ಒಂದು ಸಿಂಹ ಕಿರಣ್ ರಾಜ್ ಅವರ ಮೇಲೆ ಜಿಗಿದು ಕೆಳಗೆ ಕೆಡವಿದಂತೆ ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನು ಕಂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಆತಂಕಗೊಂಡಿದ್ದರು.

ಇದನ್ನೂ ಓದಿ: ನಟ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ದಾಂಪತ್ಯ ಅಂತ್ಯ: ವಿಚ್ಛೇದನ ಮಂಜೂರು, 2 ಕೋಟಿ ರೂ. ಜೀವನಾಂಶ ಪಾವತಿಗೆ ಹೈಕೋರ್ಟ್ ಆದೇಶ

ವೀಡಿಯೋ ವೈರಲ್ ಆಗಿ ಅಭಿಮಾನಿಗಳಿಂದ ಆತಂಕದ ಸಂದೇಶಗಳು ಹರಿದುಬಂದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ನಟ ಕಿರಣ್ ರಾಜ್, “ನಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಸುರಕ್ಷಿತವಾಗಿರದಿದ್ದರೆ ಈ ವೀಡಿಯೋವನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿ ಅಭಿಮಾನಿಗಳ ಆತಂಕ ದೂರ ಮಾಡಿದ್ದಾರೆ. ಆದಾಗ್ಯೂ, ಕಾಡುಪ್ರಾಣಿಗಳ ಜೊತೆ ಈ ರೀತಿಯ ಅಪಾಯಕಾರಿ ಸ್ಟಂಟ್‌ಗಳು ಹಾಗೂ ಸಾಹಸಕ್ಕೆ ಇಳಿಯಬೇಡಿ ಎಂದು ಹಲವು ನೆಟ್ಟಿಗರು ಮತ್ತು ಅಭಿಮಾನಿಗಳು ಅವರಿಗೆ ಕಮೆಂಟ್ ಮೂಲಕ ಸಲಹೆ ನೀಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *