ಗ್ರಹಗಳ ಸಂಚಾರ ಹಾಗೂ ನಕ್ಷತ್ರಗಳ ಬಲದ ಆಧಾರದ ಮೇಲೆ ಇಂದು ದ್ವಾದಶ ರಾಶಿಗಳ ಫಲಫಲಗಳು ಹೇಗಿರಲಿವೆ? ಯಾವ ರಾಶಿಯವರಿಗೆ ಆರ್ಥಿಕ ಲಾಭ ಕಾಯ್ದಿದೆ, ಯಾರಿಗೆ ಪ್ರಯಾಣದಿಂದ ಶುಭ ಸಿಗಲಿದೆ ಹಾಗೂ ಯಾವ ರಾಶಿಯವರು ಜಾಗ್ರತೆ ವಹಿಸಬೇಕು ಎಂಬ ಸಂಪೂರ್ಣ ದಿನಭವಿಷ್ಯದ ವಿವರ ಇಲ್ಲಿದೆ:
♈ ಮೇಷ ರಾಶಿ (Aries)
ನಾಲ್ಕು ಗ್ರಹಗಳ ಶುಭ ಫಲವಿದೆ. ಆರ್ಥಿಕವಾಗಿ ಒಂದಷ್ಟು ಸಂಕಟಗಳಿದ್ದರೂ, ವ್ಯವಹಾರ, ಕೆಲಸ ಕಾರ್ಯಗಳು ಹಾಗೂ ಆರೋಗ್ಯ ಚೆನ್ನಾಗಿರುತ್ತದೆ. ಮಕ್ಕಳಿಂದ ಶುಭವಾಗಲಿದೆ. ಹೊಸ ವಾಹನ, ಮನೆ ಅಥವಾ ಸೈಟ್ ಖರೀದಿಯ ಯೋಗವಿದೆ. ಒಳ್ಳೆಯ ಸ್ನೇಹಿತರ ಭೇಟಿ, ಹಿರಿಯರ ಮಾರ್ಗದರ್ಶನ ಸಿಗಲಿದೆ. ಉತ್ತರಾಷಾಢ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಉತ್ತಮ ಫಲ ನೀಡುತ್ತದೆ. ಸರ್ಕಾರಿ ನೌಕರರು, ವ್ಯಾಪಾರಸ್ಥರಿಗೆ ತೃಪ್ತಿದಾಯಕ ದಿನ.
ಶುಭ ಬಣ್ಣ: ನೇರಳೆ | ಶುಭ ದಿಕ್ಕು: ಉತ್ತರ | ಅದೃಷ್ಟ ಸಂಖ್ಯೆ: 6
ಮಂತ್ರ: ಓಂ ನಮೋ ಭಗವತೇ ರುದ್ರಾಯ.
♉ ವೃಷಭ ರಾಶಿ (Taurus)
ಐದು ಗ್ರಹಗಳ ಶುಭಫಲವಿದೆ. ಶುಕ್ರ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಸಿಗಲಿದೆ. ಆರ್ಥಿಕ, ಆರೋಗ್ಯ, ವ್ಯವಹಾರಗಳು ಉತ್ತಮವಾಗಿರುತ್ತವೆ. ಸಂಗೀತಗಾರರು, ಕಲಾವಿದರು, ಸಿನಿಮಾ ನಟರು, ಪತ್ರಕರ್ತರಿಗೆ ಶುಭ. ಗೃಹೋಪಯೋಗಿ ವಸ್ತುಗಳ ಖರೀದಿ ಯೋಗ. ಮಕ್ಕಳ ಬಗ್ಗೆ ಚಿಂತೆ, ವಿವಾಹ ಹಾಗೂ ಕಾನೂನು ವಿಷಯಗಳಲ್ಲಿ ಶುಭ. ಆಕಸ್ಮಿಕ ಪ್ರಯಾಣದ ಯೋಗ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ.
ಶುಭ ಬಣ್ಣ: ಕೇಸರಿ | ಶುಭ ದಿಕ್ಕು: ಉತ್ತರ | ಅದೃಷ್ಟ ಸಂಖ್ಯೆ: 5
ಮಂತ್ರ: ಓಂ ವಿರೂಪಾಕ್ಷಾಯ ನಮಃ.
♊ ಮಿಥುನ ರಾಶಿ (Gemini)
ಆರು ಗ್ರಹಗಳ ಶುಭ ಫಲ. ಬುಧ ಕನ್ಯಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಲೇವಾದೇವಿಗಳು ಚೆನ್ನಾಗಿರುತ್ತವೆ. ವಾಹನ ಯೋಗ, ಆರ್ಥಿಕವಾಗಿ, ವ್ಯವಹಾರದಲ್ಲಿ ಉತ್ತಮ. ಪ್ರಯಾಣದಿಂದ ಶುಭ. ಮಹಿಳೆಯರಿಂದ ಮನೆಯಲ್ಲಿ ಕೀರ್ತಿ, ಪ್ರತಿಷ್ಠೆ. ವೈವಾಹಿಕ ಜೀವನ ಉತ್ತಮ. ಆಸ್ತಿ ಕಲಹಗಳು ಇತ್ಯರ್ಥವಾಗಲಿವೆ. ಸರ್ಕಾರಿ ನೌಕರರು, ರೈತರು, ವ್ಯಾಪಾರಸ್ಥರಿಗೆ ಶುಭ. ವಿದೇಶ ಪ್ರಯಾಣ ಯೋಗ. ಪಾಲುದಾರಿಕೆಯಿಂದ ಸಣ್ಣಪುಟ್ಟ ನಷ್ಟ ಸಾಧ್ಯತೆ. ಶಿಕ್ಷಣ, ಕಾನೂನು ಕ್ಷೇತ್ರದಲ್ಲಿರುವವರಿಗೆ ಒಳ್ಳೆಯದಾಗಲಿದೆ.
ಶುಭ ಬಣ್ಣ: ಹಳದಿ | ಶುಭ ದಿಕ್ಕು: ದಕ್ಷಿಣ | ಅದೃಷ್ಟ ಸಂಖ್ಯೆ: 4
ಮಂತ್ರ: ಓಂ ತ್ರಿಲೋಕೇಶಾಯ ನಮಃ.
♋ ಕರ್ಕಾಟಕ ರಾಶಿ (Cancer)
ಆರು ಗ್ರಹಗಳ ಶುಭ ಫಲ. ಹಳೆ ಹೂಡಿಕೆಯಿಂದ ಲಾಭ. ಆರ್ಥಿಕವಾಗಿ ಉತ್ತಮ. ಜವಾಬ್ದಾರಿಗಳ ನಿರ್ವಹಣೆ ಚೆನ್ನಾಗಿರುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ವಾಹನ ಯೋಗ ಉತ್ತಮ. ಉದ್ಯೋಗದಲ್ಲಿ ಪರಿವರ್ತನಾ ಯೋಗ. ಸರ್ಕಾರಿ ನೌಕರರು, ರೈತರು, ವ್ಯಾಪಾರಸ್ಥರಿಗೆ ಶುಭ. ಅತಿಯಾದ ಆಶ್ವಾಸನೆಗಳನ್ನು ನೀಡದಿರಿ.
ಶುಭ ಬಣ್ಣ: ತಿಳಿ ನೀಲಿ | ಶುಭ ದಿಕ್ಕು: ಪಶ್ಚಿಮ | ಅದೃಷ್ಟ ಸಂಖ್ಯೆ: 2
ಮಂತ್ರ: ಓಂ ಶ್ರೀಕಂಠೇಶ್ವರಾಯ ನಮಃ.
♌ ಸಿಂಹ ರಾಶಿ (Leo)
ಆರು ಗ್ರಹಗಳ ಶುಭ ಫಲ. ಆಕಸ್ಮಿಕ ಧನ ಲಾಭ, ಕಾರ್ಯ ಸಿದ್ಧಿ. ಪೆಂಡಿಂಗ್ ಕೆಲಸಗಳು ಪೂರ್ಣಗೊಳ್ಳಲಿವೆ. ಖಾಸಗಿ ಕಂಪನಿಯ ನೌಕರರಿಗೆ ಅಧಿಕಾರಿಗಳ ಜೊತೆ ಸಣ್ಣಪುಟ್ಟ ಕಲಹ ಸಾಧ್ಯತೆ. ವಾಹನ ಯೋಗ ಉತ್ತಮ. ಭೂ ವ್ಯಾಪಾರಿಗಳು, ರೈತರು, ಸಿನಿಮಾ ರಂಗದವರು, ರಾಜಕೀಯ ವ್ಯಕ್ತಿಗಳು, ಔಷಧಿ ವ್ಯಾಪಾರಿಗಳಿಗೆ ಶುಭ. ಕೋಪತಾಪಗಳಿಗೆ ಅವಕಾಶ ನೀಡದಿರಿ.
ಶುಭ ಬಣ್ಣ: ಹಸಿರು | ಶುಭ ದಿಕ್ಕು: ಪೂರ್ವ | ಅದೃಷ್ಟ ಸಂಖ್ಯೆ: 7
ಮಂತ್ರ: ಓಂ ವಿಶ್ವೇಶ್ವರಾಯ ನಮಃ.
♍ ಕನ್ಯಾ ರಾಶಿ (Virgo)
ಐದು ಗ್ರಹಗಳ ಶುಭ ಫಲ. ಗುತ್ತಿಗೆದಾರರಿಗೆ ಉತ್ತಮ. ಸರ್ಕಾರದ ಸವಲತ್ತುಗಳು ಲಭ್ಯ. ಪಾಲುದಾರಿಕೆಯಿಂದ ಶುಭ. ಗೃಹ ನಿರ್ಮಾಣ ಯೋಗ. ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಅತಿಯಾದ ಕೋಪ, ಹಳೆ ವಿಷಯಗಳ ಬಗ್ಗೆ ಚರ್ಚೆಗಳು ಅಷ್ಟು ಶುಭವಲ್ಲ. ಸಾಲಗಾರರ ಕಾಟ ಸಾಧ್ಯತೆ. ವಾಕ್ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ಆಕಸ್ಮಿಕ ಪ್ರಯಾಣ ಯೋಗ.
ಶುಭ ಬಣ್ಣ: ಹಳದಿ | ಶುಭ ದಿಕ್ಕು: ಪೂರ್ವ | ಅದೃಷ್ಟ ಸಂಖ್ಯೆ: 2
ಮಂತ್ರ: ಓಂ ವೀರಭದ್ರಾಯ ನಮಃ.
♎ ತುಲಾ ರಾಶಿ (Libra)
ಐದು ಗ್ರಹಗಳ ಶುಭ ಫಲ. ನಾನು ಎಂಬ ಅಹಂ ಬೇಡ. ಆರ್ಥಿಕವಾಗಿ, ಕೆಲಸ ಕಾರ್ಯಗಳಲ್ಲಿ, ವಿವಾಹ ವಿಷಯಗಳಲ್ಲಿ, ಪಾಲುದಾರಿಕೆಯಲ್ಲಿ ಉತ್ತಮ. ಹೊಸ ಸಂಸ್ಥೆ ಸ್ಥಾಪನೆಗೆ ಪ್ರಯತ್ನ. ಮನೋಕಾಮನೆಗಳು ಈಡೇರಲಿವೆ. ಸಾಹಿತಿಗಳು, ಕಲಾವಿದರು, ಸಿನಿಮಾ ನಟರು, ಪತ್ರಕರ್ತರಿಗೆ ಶುಭ. ಮಹಿಳೆಯರೊಂದಿಗೆ ಉತ್ತಮ ಬಾಂಧವ್ಯ ಮುಖ್ಯ. ಹಣಕಾಸಿನ ವಿಚಾರದಲ್ಲಿ ಮೋಸ ಸಾಧ್ಯತೆ, ಜಾಗ್ರತೆ ವಹಿಸಿ.
ಶುಭ ಬಣ್ಣ: ಕೇಸರಿ | ಶುಭ ದಿಕ್ಕು: ಉತ್ತರ | ಅದೃಷ್ಟ ಸಂಖ್ಯೆ: 4
ಮಂತ್ರ: ಓಂ ಪಶುಪತಯೇ ನಮಃ.
♏ ವೃಶ್ಚಿಕ ರಾಶಿ (Scorpio)
ಐದು ಗ್ರಹಗಳ ಶುಭ ಫಲ. ಕುಟುಂಬ ಸದಸ್ಯರ ಮಧ್ಯೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಾಧ್ಯ. ಬ್ಯಾಂಕಿಂಗ್, ಕಬ್ಬಿಣ, ರಿಯಲ್ ಎಸ್ಟೇಟ್, ಹಾರ್ಡ್‌ವೇರ್, ರೈಲ್ವೇ, ಸೆಂಟ್ರಲ್ ಗವರ್ನಮೆಂಟ್, ಕಂಪ್ಯೂಟರ್, ಸಾಫ್ಟ್‌ವೇರ್ ಕ್ಷೇತ್ರದಲ್ಲಿರುವವರಿಗೆ ಶುಭ. ವೈದ್ಯರು ಜಾಗ್ರತೆ ವಹಿಸಬೇಕು, ಅಪವಾದಗಳು ಸುತ್ತುವರಿಯಬಹುದು. ರಾಜಕೀಯ ವ್ಯಕ್ತಿಗಳು, ರೈತರು, ವ್ಯಾಪಾರಸ್ಥರಿಗೆ ಶುಭ.
ಶುಭ ಬಣ್ಣ: ಕಡುಕೆಂಪು | ಶುಭ ದಿಕ್ಕು: ಉತ್ತರ | ಅದೃಷ್ಟ ಸಂಖ್ಯೆ: 3
ಮಂತ್ರ: ಓಂ ಮಹಾದೇವಾಯ ನಮಃ.
♐ ಧನುಸ್ಸು ರಾಶಿ (Sagittarius)
ಐದು ಗ್ರಹಗಳ ಶುಭ ಫಲ. ಅತಿಯಾದ ಆತ್ಮವಿಶ್ವಾಸವಿರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಸಹೋದರ ಅಥವಾ ಸಹೋದರಿಯರೊಂದಿಗೆ ವಾಗ್ವಾದ ಸಾಧ್ಯ. ಸರ್ಕಾರಿ ಉದ್ಯೋಗಸ್ಥರು, ರೈತರು, ವ್ಯಾಪಾರಸ್ಥರು, ಕಟ್ಟಡ ವ್ಯಾಪಾರಿಗಳು, ರಿಯಲ್ ಎಸ್ಟೇಟ್, ಕಬ್ಬಿಣ ವ್ಯಾಪಾರಿಗಳು, ಕಾಸ್ಮೆಟಿಕ್ಸ್, ಸ್ಟೇಷನರಿ ಅಂಗಡಿಯವರಿಗೆ ಶುಭ.
ಶುಭ ಬಣ್ಣ: ತಿಳಿ ಹಳದಿ | ಶುಭ ದಿಕ್ಕು: ದಕ್ಷಿಣ | ಅದೃಷ್ಟ ಸಂಖ್ಯೆ: 8
ಮಂತ್ರ: ಓಂ ಶೂಲಪಾಣಯೇ ನಮಃ.
♑ ಮಕರ ರಾಶಿ (Capricorn)
ಐದು ಗ್ರಹಗಳ ಶುಭ ಫಲ. ಹೊಸ ಆಲೋಚನೆಗಳು ಮೂಡುತ್ತವೆ. ಆರ್ಥಿಕವಾಗಿ ಉತ್ತಮ. ನಿರ್ಧಾರಗಳಿಗೆ ಮನ್ನಣೆ ಸಿಗಲಿದೆ. ಕೆಲಸ ಕಾರ್ಯಗಳು, ರೈತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಶುಭ. ಸರ್ಕಾರಿ ನೌಕರರಿಗೆ ಉತ್ತಮ. ಉದ್ಯೋಗದ ಭರವಸೆಯ ಪತ್ರ ಸಾಧ್ಯತೆ. ವಿವಾಹ ವಿಷಯಗಳಲ್ಲಿ ಶುಭ. ಬೇಕಾದವರ ಅಗಲಿಕೆ ನೋವನ್ನುಂಟು ಮಾಡಬಹುದು.
ಶುಭ ಬಣ್ಣ: ಆರೆಂಜ್ (ಕಿತ್ತಳೆ) | ಶುಭ ದಿಕ್ಕು: ಪೂರ್ವ | ಅದೃಷ್ಟ ಸಂಖ್ಯೆ: 8
ಮಂತ್ರ: ಓಂ ಭೂತಪತಯೇ ನಮಃ.
♒ ಕುಂಭ ರಾಶಿ (Aquarius)
ಆರು ಗ್ರಹಗಳ ಶುಭ ಫಲ. ಧಾರ್ಮಿಕ ವಿಷಯಗಳಲ್ಲಿ ಒಲವು. ಆರ್ಥಿಕವಾಗಿ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ. ರೈತರು, ಸಂಗಾತಿಯಿಂದ ಶುಭ. ಪ್ರೇಮ ವ್ಯವಹಾರಗಳಿಗೆ ಮನ್ನಣೆ. ಆರೋಗ್ಯ ಉತ್ತಮ. ಇತರರ ಮಾತುಗಳಿಗೆ ಕಿವಿಗೊಡದೆ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಶುಭ ಬಣ್ಣ: ಕಪ್ಪು | ಶುಭ ದಿಕ್ಕು: ಉತ್ತರ | ಅದೃಷ್ಟ ಸಂಖ್ಯೆ: 7
ಮಂತ್ರ: ಓಂ ಸಹಸ್ರಾಕ್ಷಾಯ ನಮಃ.
♓ ಮೀನ ರಾಶಿ (Pisces)
ಐದು ಗ್ರಹಗಳ ಶುಭ ಫಲ. ಅತಿಯಾಸೆಗೆ ಬಲಿಯಾಗಿ ಹಣ ಕಳೆದುಕೊಳ್ಳುವ ಸಾಧ್ಯತೆ, ಜಾಗ್ರತೆ. ವ್ಯಾಪಾರ, ರೈತರು, ಕೆಲಸ ಕಾರ್ಯಗಳಲ್ಲಿ ಶುಭ. ಆಕಸ್ಮಿಕ ಪ್ರಯಾಣ ಯೋಗ. ಮನೆ ಅಥವಾ ಸೈಟ್ ಖರೀದಿ ಯೋಗ. ಮಕ್ಕಳ ಬಗ್ಗೆ ಚಿಂತೆ ಕಾಡಬಹುದು. ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳು, ರೈತರು, ವ್ಯಾಪಾರಸ್ಥರು, ಕಾನೂನು ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಶುಭ.
ಶುಭ ಬಣ್ಣ: ಹಳದಿ | ಶುಭ ದಿಕ್ಕು: ಪೂರ್ವ | ಅದೃಷ್ಟ ಸಂಖ್ಯೆ: 5
ಮಂತ್ರ: ಓಂ ದತ್ತಾತ್ರೇಯಾಯ ನಮಃ.

