ಕರಾವಳಿ ಜಿಲ್ಲೆಗಳಿಗೆ ಮುಂದಿನ 3 ದಿನ ಭಾರಿ ಮಳೆ ಮುನ್ನೆಚ್ಚರಿಕೆ: ಉಡುಪಿಯಾದ್ಯಂತ ಧಾರಾಕಾರ ಮಳೆ; ಹೆಬ್ರಿಯಲ್ಲಿ ಗರಿಷ್ಠ ದಾಖಲೆ

ಉಡುಪಿ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಹಾಗೂ ಬಿರುಗಾಳಿ ಸಹಿತ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.

ಹವಾಮಾನ ವರದಿಯ ಪ್ರಕಾರ, ಜಿಲ್ಲೆಯ ಕೆಲವೆಡೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೋಡಕವಿದ ವಾತಾವರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕಳೆದ ರಾತ್ರಿಯಿಂದ ಹಾಗೂ ಸೋಮವಾರ ಬೆಳಗಿನ ಜಾವದಿಂದ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾದ ವರದಿಯಾಗಿದೆ. ಸುಮಾರು ಅರ್ಧ ಗಂಟೆಯಿಂದ 45 ನಿಮಿಷಗಳ ಕಾಲ ಸುರಿದ ತೀವ್ರ ಮಳೆಯು ಜನಜೀವನವನ್ನು ತಂಪಾಗಿಸಿದೆ.

ಸೋಮವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 4.2 ಮಿ.ಮೀ ಮಳೆ ದಾಖಲಾಗಿದೆ.

ಇದನ್ನೂ ಓದಿ: ಅಂಗನವಾಡಿ ಮಕ್ಕಳ ಆಹಾರ ಸುರಕ್ಷತೆಗೆ ಸಚಿವ ಯು.ಟಿ. ಖಾದರ್ ಸೂಚನೆ: ಮೂಡುಶೆಡ್ಡೆ MSPC ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು

ಹೆಬ್ರಿ: 10.1 ಮಿ.ಮೀ (ಜಿಲ್ಲೆಯಲ್ಲೇ ಗರಿಷ್ಠ)

ಉಡುಪಿ: 8.2 ಮಿ.ಮೀ

ಬ್ರಹ್ಮಾವರ: 6.2 ಮಿ.ಮೀ

ಕಾಪು: 3.7 ಮಿ.ಮೀ

ಕಾರ್ಕಳ: 2.7 ಮಿ.ಮೀ

ಬೈಂದೂರು: 2.2 ಮಿ.ಮೀ

ಕುಂದಾಪುರ: 1.6 ಮಿ.ಮೀ

ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ಮೀನುಗಾರರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *