Breaking News

ಇಂದಿನ ದ್ವಾದಶ ರಾಶಿ ಫಲ: ನಿಮ್ಮ ರಾಶಿಗೆ ಧನಲಾಭವಿದೆಯೇ? ಇಲ್ಲಿದೆ ಸಂಪೂರ್ಣ ವಿವರ

ಇಂದು ಪಂಚ ಗ್ರಹಗಳ ಶುಭ ಯೋಗ ಹಾಗೂ ದ್ವಾದಶ ರಾಶಿಗಳ ಮೇಲೆ ಚಂದ್ರ ಮತ್ತು ಗ್ರಹಗಳ ಸಂಚಾರದ ಪ್ರಭಾವ ಪ್ರಮುಖವಾಗಿ ಬೀರಲಿದೆ. ಖ್ಯಾತ ಜ್ಯೋತಿಷಿಗಳ ಪ್ರಕಾರ, ಇಂದಿನ ಗ್ರಹಗತಿಗಳ ಪ್ರಕಾರ 12 ರಾಶಿಗಳ ಜಾತಕ ಫಲ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.

♈ ಮೇಷ ರಾಶಿ (Aries):
ಐದು ಗ್ರಹಗಳ ಶುಭಫಲದಿಂದ ಉತ್ಸುಕತೆ ಹಾಗೂ ಶ್ರದ್ಧೆ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ವೃತ್ತಿಯಲ್ಲಿ ಕೀರ್ತಿ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಯೋಗವಿದ್ದು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಫಲತೆ ಲಭಿಸಲಿದೆ.

ಶುಭ ಬಣ್ಣ: ಹಳದಿ | ಅದೃಷ್ಟ ಸಂಖ್ಯೆ: 5 | ಮಂತ್ರ: ಓಂ ಜಟಾಧರಾಯ ನಮಃ.

♉ ವೃಷಭ ರಾಶಿ (Taurus):
ಆರು ಗ್ರಹಗಳ ಶುಭಬಲದಿಂದ ಹಳೆಯ ಬಾಕಿ ವಸೂಲಿಯಾಗಿ ಧನಯೋಗ ಪ್ರಾಪ್ತಿಯಾಗಲಿದೆ. ವ್ಯಾಪಾರಸ್ಥರಿಗೆ ಮಧ್ಯಾಹ್ನದ ನಂತರ ಯಶಸ್ಸು. ಡಾಕ್ಟರ್, ಶಿಕ್ಷಕರು, ಸರ್ಕಾರಿ ನೌಕರರಿಗೆ ಲಾಭದಾಯಕ ದಿನ.

ಶುಭ ಬಣ್ಣ: ಗುಲಾಬಿ | ಅದೃಷ್ಟ ಸಂಖ್ಯೆ: 2 | ಮಂತ್ರ: ಓಂ ಬೃಹಸ್ಪತಯೇ ನಮಃ.

♊ ಮಿಥುನ ರಾಶಿ (Gemini):
ಧನಿಷ್ಠ ನಕ್ಷತ್ರದಲ್ಲಿ ಚಂದ್ರ ಸಂಚಾರದಿಂದ ಮಿತ್ರರ ಸಲಹೆ ಉಪಯುಕ್ತವಾಗಲಿದೆ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಹಾಗೂ ದುಂದುವೆಚ್ಚ ಬೇಡ. ವಾಹನ ಯೋಗ ಉತ್ತಮವಾಗಿದೆ.

ಶುಭ ಬಣ್ಣ: ಹಸಿರು | ಅದೃಷ್ಟ ಸಂಖ್ಯೆ: 6 | ಮಂತ್ರ: ಓಂ ಶಿವದತ್ತಾಯ ನಮಃ.

♋ ಕಟಕ ರಾಶಿ (Cancer):
ಅನುಮಾನಗಳಿಗೆ ಆಸ್ಪದ ನೀಡಬೇಡಿ. ಕುಟುಂಬದ ಆರೋಗ್ಯ (BP, Sugar) ಹಾಗೂ ಆರ್ಥಿಕ ವೆಚ್ಚಗಳ ಮೇಲೆ ನಿಗಾ ಇರಲಿ. ಔಷಧಿ ವ್ಯಾಪಾರಿಗಳಿಗೆ ಯಶಸ್ಸು ಹಾಗೂ ವಿವಾಹ ಕಾರ್ಯಗಳಲ್ಲಿ ಶುಭ ಫಲ ಲಭಿಸಲಿದೆ.

ಶುಭ ಬಣ್ಣ: ನೀಲಿ | ಅದೃಷ್ಟ ಸಂಖ್ಯೆ: 7 | ಮಂತ್ರ: ಓಂ ಅತ್ರಿ ದತ್ತಾಯ ನಮಃ.

♌ ಸಿಂಹ ರಾಶಿ (Leo):
ವ್ಯವಹಾರದಲ್ಲಿ ಭಾರಿ ಲಾಭ ಸಿಗಲಿದ್ದು, ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರಿಯಲ್ ಎಸ್ಟೇಟ್ ಹಾಗೂ ವ್ಯಾಪಾರಿಗಳಿಗೆ ಆಸ್ತಿ ಮಾರಾಟದಿಂದ ಶುಭ ಸುದ್ದಿ ಸಿಗಲಿದೆ. ಶತ್ರುಗಳು ಮಿತ್ರರಾಗಲಿದ್ದಾರೆ.

ಶುಭ ಬಣ್ಣ: ಬೂದು | ಅದೃಷ್ಟ ಸಂಖ್ಯೆ: 4 | ಮಂತ್ರ: ಓಂ ವಾಚಸ್ಪತಯೇ ನಮಃ.

♍ ಕನ್ಯಾ ರಾಶಿ (Virgo):
ಮಾತಿನಲ್ಲಿ ಮೃದುತ್ವ ಕಾಪಾಡಿಕೊಳ್ಳಿ. ಆಕಸ್ಮಿಕ ಧನಯೋಗ ಹಾಗೂ ವಾಹನ ಯೋಗ ಉತ್ತಮವಾಗಿದೆ. ಶಿಕ್ಷಕರು, ಲಾಯರ್ ಹಾಗೂ ಸರ್ಕಾರಿ ನೌಕರರ ಆಸೆಗಳು ಈಡೇರುತ್ತವೆ.

ಶುಭ ಬಣ್ಣ: ಹಸಿರು | ಅದೃಷ್ಟ ಸಂಖ್ಯೆ: 2 | ಮಂತ್ರ: ಓಂ ಬ್ರಹ್ಮಪುತ್ರಾಯ ನಮಃ.

♎ ತುಲಾ ರಾಶಿ (Libra):
ಆದಾಯ ಉತ್ತಮವಾಗಿದ್ದರೂ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು. ಮೇಲಧಿಕಾರಿಗಳ ಸಹಕಾರದಿಂದ ವೃತ್ತಿಯಲ್ಲಿ ಪ್ರಗತಿ ಹಾಗೂ ಹೊಸ ವಾಹನ ಖರೀದಿ ಯೋಗವಿದೆ.

ಶುಭ ಬಣ್ಣ: ಬೂದು | ಅದೃಷ್ಟ ಸಂಖ್ಯೆ: 4 | ಮಂತ್ರ: ಓಂ ಚಿತ್ತಶುದ್ಧೀಕರಾಯ ನಮಃ.

♏ ವೃಶ್ಚಿಕ ರಾಶಿ (Scorpio):
ಆದಾಯ ಹೆಚ್ಚಾಗಲಿದ್ದು, ಸಾಲ ತೀರಿಸಿ ಋಣಮುಕ್ತರಾಗುವ ಯೋಗವಿದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳು, ವೈದ್ಯರು ಹಾಗೂ ವಕೀಲರಿಗೆ ಶುಭ ಫಲ. ಆದಾಯದ ಗುಟ್ಟು ಕಾಪಾಡುವುದು ಒಳಿತು.

ಶುಭ ಬಣ್ಣ: ಕೇಸರಿ | ಅದೃಷ್ಟ ಸಂಖ್ಯೆ: 7 | ಮಂತ್ರ: ಓಂ ದಿಗಂಬರಾಯ ನಮಃ.

🏹 ಧನುಸ್ಸು ರಾಶಿ (Sagittarius):
ಕಾರ್ಯಕ್ಷೇತ್ರದಲ್ಲಿ ಜಯ ಸಿಗಲಿದ್ದು, ಉದ್ಯೋಗದಲ್ಲಿ ಬಡ್ತಿ ಲಭಿಸಲಿದೆ. ಬಾಕಿ ಬರಬೇಕಿದ್ದ ಹಣ ನಿಮ್ಮ ಕೈಸೇರಲಿದೆ. ಸಿವಿಲ್ ಇಂಜಿನಿಯರ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಶಸ್ಸು.

ಶುಭ ಬಣ್ಣ: ಗುಲಾಬಿ | ಅದೃಷ್ಟ ಸಂಖ್ಯೆ: 3 | ಮಂತ್ರ: ಓಂ ಸದಾನಂದಾಯ ನಮಃ.

♑ ಮಕರ ರಾಶಿ (Capricorn):
ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕ ಪ್ರಗತಿ, ವಾಹನ ಖರೀದಿ ಯೋಗ ಹಾಗೂ ಅಪವಾದಗಳಿಂದ ಮುಕ್ತಿ ಸಿಗಲಿದೆ. ಐಟಿ ಹಾಗೂ ಐಎಎಸ್/ಐಪಿಎಸ್ ಅಧಿಕಾರಿಗಳಿಗೆ ಅತ್ಯುತ್ತಮ ದಿನ.

ಶುಭ ಬಣ್ಣ: ಕಪ್ಪು | ಅದೃಷ್ಟ ಸಂಖ್ಯೆ: 5 | ಮಂತ್ರ: ಓಂ ಧನುರ್ಧರಾಯ ನಮಃ.

♒ ಕುಂಭ ರಾಶಿ (Aquarius):
ಕುಂಭ ರಾಶಿಯಲ್ಲಿ ಚಂದ್ರ ಸಂಚಾರದಿಂದ ಭಯ, ಅನುಮಾನಗಳು ತೊಲಗಲಿವೆ. ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಯೋಗವಿದೆ. ರಿಯಲ್ ಎಸ್ಟೇಟ್ ಹಾಗೂ ಕೃಷಿಕರಿಗೆ ಶುಭ ವಾರ್ತೆ ಸಿಗಲಿದೆ.

ಶುಭ ಬಣ್ಣ: ಕಂದು | ಅದೃಷ್ಟ ಸಂಖ್ಯೆ: 6 | ಮಂತ್ರ: ಓಂ ಸುರಾಚಾರ್ಯಾಯ ನಮಃ.

♓ ಮೀನ ರಾಶಿ (Pisces):
ಆರೋಗ್ಯ ಚೇತರಿಕೆ ಕಾಣಲಿದ್ದು, ಭೂ ವಿವಾದಗಳು ಇತ್ಯರ್ಥವಾಗಲಿವೆ. ನೂತನ ಸಂಸ್ಥೆ ಸ್ಥಾಪನೆಗೆ ಶುಭ ಕಾಲ. ವಾಹನ ಚಾಲನೆ ಮಾಡುವಾಗ ಕೊಂಚ ಜಾಗ್ರತೆ ವಹಿಸುವುದು ಕಡ್ಡಾಯ.

ಶುಭ ಬಣ್ಣ: ಬಿಳಿ | ಅದೃಷ್ಟ ಸಂಖ್ಯೆ: 2 | ಮಂತ್ರ: ಓಂ ದಿವ್ಯ ಭೂಷಣಾಯ ನಮಃ.

Leave a Reply

Your email address will not be published. Required fields are marked *