ರಾಂಚಿ: ರಾಂಚಿ ಸಮೀಪದ ಓರ್ಮಂಜಿಯಲ್ಲಿರುವ ಮದ್ಯದ ಅಂಗಡಿಯೊಂದರಲ್ಲಿ (Wine Shop) ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮದ್ಯದ ಬಾಟಲಿಯಿಂದ ಲಿಕ್ಕರ್ ಕುಡಿದ ಕೋತಿಯೊಂದು ಅಂಗಡಿಯೊಳಗೇ ನಿದ್ರೆಗೆ ಜಾರಿದ ಪ್ರಸಂಗ ಬೆಳಕಿಗೆ ಬಂದಿದೆ.
ವೈನ್ ಶಾಪ್‌ಗೆ ತೂರಿಬಂದ ಕೋತಿಯು ಅಲ್ಲಿದ್ದ ಮದ್ಯದ ಬಾಟಲಿಯನ್ನು ತೆರೆದು ಕುಡಿದಿದೆ. ಕುಡಿದ ಅಮಲಿನಲ್ಲಿ ಆ ಕೋತಿ ಅಂಗಡಿಯ ಸೂಕ್ತ ಸ್ಥಳದಲ್ಲೇ ಗಾಢ ನಿದ್ರೆಗೆ ಜಾರಿದೆ.
ಇದನ್ನು ಕಂಡು ಗಾಬರಿಗೊಂಡ ಅಂಗಡಿ ಮಾಲೀಕರು ಮತ್ತು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಹಾಗೂ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನಿದ್ರೆಯಲ್ಲಿದ್ದ ಕೋತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಕರೆದೊಯ್ದಿದ್ದಾರೆ. ಈ ವಿಚಿತ್ರ ಘಟನೆಯನ್ನು ನೋಡಲು ಮದ್ಯದ ಅಂಗಡಿಯ ಮುಂದೆ ಅಪಾರ ಸಂಖ್ಯೆಯ ಸಾರ್ವಜನಿಕರು ನೆರೆದಿದ್ದರು.
ಇಲ್ಲಿದೆ ನೋಡಿ ವಿಡಿಯೋ:
VERY UNUSUAL! A monkey entered a wine 🍷shop in Ranchi’s Ormanjhi, allegedly drank alcohol from a bottle and then fell asleep inside the shop 😴
A rescue team arrived and safely removed the unexpected customer. 🐒 pic.twitter.com/Z6xs3vVNGb
— Megh Updates 🚨™ (@MeghUpdates) September 26, 2026

