ಜೌನ್ಪುರ : ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿಯೊಬ್ಬರು ಅತಿಯಾಗಿ ಮದ್ಯಪಾನ ಮಾಡಿ, ರಸ್ತೆಬದಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿರುವ ನಾಚಿಕೆಗೇಡಿನ ಘಟನೆಯೊಂದು ಉತ್ತರ ಪ್ರದೇಶದ ಜೌನ್ಪುರದಲ್ಲಿ ಬೆಳಕಿಗೆ ಬಂದಿದೆ. ಜೌನ್ಪುರ ಪೋಲಿಸ್ ಲೈನ್ಸ್ನಲ್ಲಿ ನಿಯೋಜಿತರಾಗಿದ್ದ ಕಾನ್ಸ್ಟೇಬಲ್ ಉಮಾಶಂಕರ್ ಎಂಬುವವರೇ ಈ ಕೃತ್ಯ ಎಸಗಿದ ಪೊಲೀಸ್ ಸಿಬ್ಬಂದಿ. ತೀವ್ರ ಕುಡಿತದ ಮತ್ತಿನಲ್ಲಿದ್ದಾಗ ಈ ಕಾನ್ಸ್ಟೇಬಲ್ ತಮ್ಮನ್ನು ತಾವು ‘ಡಿಎಂ ಮಗ’ (ಜಿಲ್ಲಾಧಿಕಾರಿಗಳ ಪುತ್ರ) ಎಂದು ಹೇಳಿಕೊಳ್ಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖಿಲಾ ರಸ್ತೆ (Kila Road) ಸಮೀಪ ಈ ಘಟನೆ ನಡೆದಿದೆ. ಕಾನ್ಸ್ಟೇಬಲ್ ಉಮಾಶಂಕರ್ ಸಮವಸ್ತ್ರದಲ್ಲೇ ಅತಿಯಾಗಿ ಮದ್ಯ ಸೇವಿಸಿ, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರು. ಇದನ್ನು ಕಂಡು ಸ್ಥಳೀಯ ಸಾರ್ವಜನಿಕರು ಹಾಗೂ ಹಾದಿಹೋಕರು ಅವರನ್ನು ವಿಚಾರಿಸಲು ಯತ್ನಿಸಿದಾಗ, ಸಂಪೂರ್ಣವಾಗಿ ಮದ್ಯದ ಮತ್ತಿನಲ್ಲಿದ್ದ ಉಮಾಶಂಕರ್, “ನಾನು ಡಿಎಂ ಮಗ!” ಎಂದು ಹೇಳುತ್ತಾ ಲೇಪಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರವೇ ಈ ಕಾನ್ಸ್ಟೇಬಲ್ ಆ ಸಮಯದಲ್ಲಿ ಅಧಿಕೃತ ಕರ್ತವ್ಯದಲ್ಲಿದ್ದರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಾಲೇಜು ಕಾರ್ಯಕ್ರಮದಲ್ಲಿ ಸಂಭವಿಸಿದ ಘೋರ ದುರಂತ: ಮಂಗಳೂರಿನಲ್ಲಿ ಬಾಲ್ಕನಿ ಕುಸಿದು 5 ವಿದ್ಯಾರ್ಥಿಗಳಿಗೆ ಗಾಯ
ಇಲ್ಲಿದೆ ನೋಡಿ ವಿಡಿಯೋ:
सिपाही बोल रहे हैं DM का बेटा हूँ
जौनपुर पुलिस लाइन में तैनात सिपाही उमाशंकर नशे में धुत होकर सड़क किनारे सो गया
वीडियो वायरल हुआ तो पता चला सिपाही ड्यूटी पर था. वीडियो में सिपाही खुद को DM का बेटा बता रहा है
वीडियो कोतवाली थाना क्षेत्र के किला रोड के पास का बताया जा रहा है pic.twitter.com/6JqWItqOZB
— ragini (@Raginiyadav5438) September 26, 2026
ಸ್ಥಳೀಯರು ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಖಾಕಿ ಸಮವಸ್ತ್ರಕ್ಕೆ ಧಕ್ಕೆ ತಂದಿರುವ ಈ ಕಾನ್ಸ್ಟೇಬಲ್ ವಿರುದ್ಧ ತಕ್ಷಣವೇ ಇಲಾಖಾ ಮಟ್ಟದ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

