ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಪ್ರಭಾವದಿಂದಾಗಿಂದಿನ ದಿನವು ಕೆಲ ರಾಶಿಗಳಿಗೆ ಭಾರಿ ಯಶಸ್ಸು ಹಾಗೂ ಧನಲಾಭವನ್ನು ತರಲಿದ್ದರೆ, ಇನ್ನು ಕೆಲವು ರಾಶಿಗಳವರು ಆತುರದ ನಿರ್ಧಾರಗಳನ್ನು ತಪ್ಪಿಸಿ ಎಚ್ಚರಿಕೆಯಿಂದಿರಬೇಕಾದ ದಿನವಾಗಿದೆ. ಇಂದು ದ್ವಾದಶ ರಾಶಿಗಳ ಫಲಫಲಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಹಾಗೂ ಪರಿಹಾರ ಮಂತ್ರಗಳ ಸಂಪೂರ್ಣ ವಿವರ ಇಲ್ಲಿದೆ.
♈ ಮೇಷ ರಾಶಿ (Aries):
ನಾಲ್ಕು ಗ್ರಹಗಳ ಶುಭ ಫಲದಿಂದಾಗಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸುಧಾರಿಸಲಿದೆ. ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಸರ್ಕಾರಿ ನೌಕರರಿಗೆ ಲಾಭದಾಯಕ ದಿನ. ಕುಟುಂಬದಲ್ಲಿ ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ.
ಪ್ರಯಾಣ: ಪೂರ್ವ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 7 | ಶುಭ ಬಣ್ಣ: ಹಸಿರು
ಮಂತ್ರ ಜಪ: ‘ಓಂ ಸೋಮನಾಥಾಯ ನಮಃ’
♉ ವೃಷಭ ರಾಶಿ (Taurus):
ಐದು ಗ್ರಹಗಳ ಅನುಕೂಲಕರ ಬಲದಿಂದ ಆದಾಯ ಹೆಚ್ಚಾಗಲಿದೆ. ವ್ಯಾಪಾರ, ವೃತ್ತಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಪ್ರಗತಿ ದೋರೆಯಲಿದೆ. ಸಾಮಾಜಿಕ ಗೌರವ ಹೆಚ್ಚಾಗಲಿದ್ದು, ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.
ಪ್ರಯಾಣ: ದಕ್ಷಿಣ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 6 | ಶುಭ ಬಣ್ಣ: ಹಳದಿ
ಮಂತ್ರ ಜಪ: ‘ಓಂ ಮಲ್ಲಿಕಾರ್ಜುನಾಯ ನಮಃ’
♊ ಮಿಥುನ ರಾಶಿ (Gemini):
ಆರು ಗ್ರಹಗಳ ಬಲದಿಂದ ಅನಿರೀಕ್ಷಿತ ಅದೃಷ್ಟ ನಿಮಗಿದೆ! ಹೊಸ ಯೋಜನೆಗಳಿಗೆ ಮನ್ನಣೆ ದೊರೆತು, ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಶತ್ರುಗಳು ಮಿತ್ರರಾಗಲಿದ್ದಾರೆ. ವಿವಾಹ ಯೋಗ ಕೂಡಿಬರಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ.
ಪ್ರಯಾಣ: ಪಶ್ಚಿಮ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 5 | ಶುಭ ಬಣ್ಣ: ಹಳದಿ
ಮಂತ್ರ ಜಪ: ‘ಓಂ ಮಹೇಶ್ವರಾಯ ನಮಃ’
♋ ಕರ್ಕಾಟಕ ರಾಶಿ (Cancer):
ನಾಲ್ಕು ಗ್ರಹಗಳ ಬೆಂಬಲವಿದ್ದು, ಆತುರದ ನಿರ್ಧಾರಗಳನ್ನು ತಡೆ ಹಿಡಿಯುವುದು ಒಳಿತು. ಶ್ರಮಕ್ಕೆ ತಕ್ಕಂತೆ ಆರ್ಥಿಕ ಫಲ ಸಿಗಲಿದೆ. ಆಪ್ತರಿಂದ ಸಹಾಯ ಲಭಿಸಲಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.
ಪ್ರಯಾಣ: ಉತ್ತರ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 2 | ಶುಭ ಬಣ್ಣ: ಬೂದು
ಮಂತ್ರ ಜಪ: ‘ಓಂ ಕೇದಾರೇಶ್ವರಾಯ ನಮಃ’
♌ ಸಿಂಹ ರಾಶಿ (Leo):
ಆರು ಗ್ರಹಗಳ ಶುಭ ಪ್ರಭಾವದಿಂದ ಮನಸ್ಸಿಗೆ ಸಂತಸ ತರಲಿದೆ. ವಿವಾಹ ಯೋಗ, ರಾಜಕೀಯವಾಗಿ ಅಭಿವೃದ್ಧಿ ಹಾಗೂ ಹಳೆಯ ಹೂಡಿಕೆಗಳಿಂದ ಭಾರಿ ಲಾಭವಿದೆ. ಯಾರನ್ನೂ ಅತಿಯಾಗಿ ನಂಬಬೇಡಿ. ಆದಾಯದಲ್ಲಿ ಏರಿಕೆಯಾಗಲಿದೆ.
ಪ್ರಯಾಣ: ಪೂರ್ವ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 9 | ಶುಭ ಬಣ್ಣ: ಕೆಂಪು
ಮಂತ್ರ ಜಪ: ‘ಓಂ ಶಶಿಶೇಖರಾಯ ನಮಃ’
♍ ಕನ್ಯಾ ರಾಶಿ (Virgo):
ಐದು ಗ್ರಹಗಳ ಶುಭ ಫಲದಿಂದ ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯಜಯ ಸಾಧಿಸುವಿರಿ. ಉದ್ಯೋಗ, ವ್ಯಾಪಾರ ಹಾಗೂ ರಾಜಕೀಯ ರಂಗದಲ್ಲಿ ಶುಭ. ಹೆಣ್ಣುಮಕ್ಕಳಿಂದ ಶುಭ ಸುದ್ದಿ. ವಾಹನ ಖರೀದಿ ಯೋಗವಿದೆ. ಅನಗತ್ಯ ಖರ್ಚು ನಿಯಂತ್ರಿಸಿ.
ಪ್ರಯಾಣ: ಪಶ್ಚಿಮ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 3 | ಶುಭ ಬಣ್ಣ: ನೀಲಿ
ಮಂತ್ರ ಜಪ: ‘ಓಂ ಭೀಮಾಶಂಕರಾಯ ನಮಃ’
♎ ತುಲಾ ರಾಶಿ (Libra):
ಆರೋಗ್ಯ ಉತ್ತಮವಾಗಿದ್ದರೂ ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಪವಾದ ಹಾಗೂ ಆರ್ಥಿಕ ಮಂದಗತಿ ಎದುರಾಗಬಹುದು. ಇತರರ ಬೆಂಬಲ ಸಿಗಲಿದೆ. ಆಸ್ತಿ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಿರಿ. ಪ್ರಯಾಣಗಳು ರದ್ದಾಗುವ ಸಾಧ್ಯತೆಯಿದೆ.
ಪ್ರಯಾಣ: ಪಶ್ಚಿಮ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 4 | ಶುಭ ಬಣ್ಣ: ಗುಲಾಬಿ
ಮಂತ್ರ ಜಪ: ‘ಓಂ ವಿಶ್ವೇಶ್ವರಾಯ ನಮಃ’
♏ ವೃಶ್ಚಿಕ ರಾಶಿ (Scorpio):
ಆರು ಗ್ರಹಗಳ ಅನುಗ್ರಹವಿದ್ದು ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಸವರ್ಣಾವಕಾಶಗಳು ಎದುರಾಗಲಿವೆ. ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ. ಗೃಹೋಪಯೋಗಿ ವಸ್ತುಗಳ ಖರೀದಿ ಯೋಗವಿದೆ.
ಪ್ರಯಾಣ: ಉತ್ತರ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 8 | ಶುಭ ಬಣ್ಣ: ಕೆಂಪು
ಮಂತ್ರ ಜಪ: ‘ಓಂ ನಾಗೇಶ್ವರಾಯ ನಮಃ’
🏹 ಧನಸ್ಸು ರಾಶಿ (Sagittarius):
ಐದು ಗ್ರಹಗಳ ಬಲದಿಂದ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಸಿಗಲಿದೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಹಾಗೂ ಸರ್ಕಾರಿ ಸವಲತ್ತುಗಳು ದೊರೆಯಲಿವೆ. ಮಹಿಳೆಯರು, ಕ್ರೀಡಾಪಟುಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಅತ್ಯಂತ ಯಶಸ್ವಿ ದಿನ.
ಪ್ರಯಾಣ: ಪೂರ್ವ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 6 | ಶುಭ ಬಣ್ಣ: ನೇರಳೆ
ಮಂತ್ರ ಜಪ: ‘ಓಂ ವಿಶ್ವೇಶ್ವರಾಯ ನಮಃ’
♑ ಮಕರ ರಾಶಿ (Capricorn):
ಆತುರದ ನಿರ್ಧಾರಗಳನ್ನು ತಪ್ಪಿಸಿ. ಗೃಹ ನಿರ್ಮಾಣ, ವಾಹನ ಖರೀದಿ ಯೋಗವಿದೆ. ಹಳೆಯ ಬಾಕಿ ಹಣ ವಸೂಲಿಯಾಗಲಿದ್ದು, ಆರ್ಥಿಕ ಯೋಜನೆಗಳು ಸಫಲವಾಗಲಿವೆ. ಆರೋಗ್ಯ ಸುಧಾರಿಸಲಿದ್ದು, ಮಕ್ಕಳಿಂದ ಸಂತಸದ ವಾತಾವರಣ ಇರಲಿದೆ.
ಪ್ರಯಾಣ: ದಕ್ಷಿಣ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 7 | ಶುಭ ಬಣ್ಣ: ನೀಲಿ
ಮಂತ್ರ ಜಪ: ‘ಓಂ ಮೃತ್ಯುಂಜಯಾಯ ನಮಃ’
♒ ಕುಂಭ ರಾಶಿ (Aquarius):
ಐದು ಗ್ರಹಗಳ ಶುಭ ಬಲದಿಂದ ಕುಟುಂಬ ವಾತಾವರಣ ಪ್ರಸನ್ನವಾಗಿರಲಿದೆ. ವಾಕ್ ಚತುರತೆಯಿಂದ ಕಾರ್ಯಸಾಧನೆ ಮಾಡುವಿರಿ. ರೈತರು, ರಿಯಲ್ ಎಸ್ಟೇಟ್, ಕಬ್ಬಿಣ ಹಾಗೂ ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಬಂಧುಗಳ ಭೇಟಿ ಸಾಧ್ಯತೆ.
ಪ್ರಯಾಣ: ಪಶ್ಚಿಮ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 4 | ಶುಭ ಬಣ್ಣ: ಕಪ್ಪು
ಮಂತ್ರ ಜಪ: ‘ಓಂ ಕಪರ್ದಿನೇ ನಮಃ’
♓ ಮೀನ ರಾಶಿ (Pisces):
ಮಾನಸಿಕ ಸಮಾಧಾನ ಇರಲಿದೆ. ಹಳೆಯ ಅಪೂರ್ಣ ಕೆಲಸಗಳು ಮುಕ್ತಾಯಗೊಳ್ಳಲಿವೆ. ರಾಜಕೀಯ ನಾಯಕರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಮಾಜ ಸೇವಕರಿಗೆ ಅತ್ಯುತ್ತಮ ಫಲ. ಪ್ರೇಮ ವಿಷಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು.
ಪ್ರಯಾಣ: ಉತ್ತರ ದಿಕ್ಕು ಶುಭ.
ಅದೃಷ್ಟ ಸಂಖ್ಯೆ: 6 | ಶುಭ ಬಣ್ಣ: ಹಳದಿ
ಮಂತ್ರ ಜಪ: ‘ಓಂ ವೀರಭದ್ರಾಯ ನಮಃ’

