ಇಂದು ನಿಮ್ಮ ರಾಶಿಫಲ ಹೇಗಿದೆ? ಯಾರಿಗೆ ಧನಯೋಗ? ಯಾರಿಗೆ ಎಚ್ಚರಿಕೆ ಅಗತ್ಯ? – ಇಲ್ಲಿದೆ 12 ರಾಶಿಗಳ ಸಂಪೂರ್ಣ ವಿವರ

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಚಲನೆಯು ನಮ್ಮ ದೈನಂದಿನ ಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಇಂದಿನ ಗ್ರಹಗಳ ಸ್ಥಿತ್ಯಂತರದಂತೆ ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಚಕ್ರಗಳ ದಿನಭವಿಷ್ಯ ಹೇಗಿರಲಿದೆ? ಯಾರಿಗೆ ಆರ್ಥಿಕ ಲಾಭ, ಯಾರಿಗೆ ವಿವಾಹ ಯೋಗ ಹಾಗೂ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

♈ ಮೇಷ ರಾಶಿ (Aries)
ಇಂದು ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಅದೃಷ್ಟ ನಿಮ್ಮ ಪರವಾಗಿದ್ದು, ವ್ಯವಸಾಯ ಮತ್ತು ವ್ಯಾಪಾರ ರಂಗದಲ್ಲಿರುವವರಿಗೆ ಉತ್ತಮ ಲಾಭ ಸಿಗಲಿದೆ. ವಾಹನ ಖರೀದಿಸುವ ಅಥವಾ ಚಾಲನೆ ಮಾಡುವ ವಿಚಾರದಲ್ಲಿ ಕೊಂಚ ಗೊಂದಲಗಳು ಉಂಟಾಗಬಹುದು. ಅವಿವಾಹಿತರಿಗೆ ವಿವಾಹ ಯೋಗವಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 5

♉ ವೃಷಭ ರಾಶಿ (Taurus)
ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಸುದೀರ್ಘ ಕಾಲದಿಂದ ಬರಬೇಕಿದ್ದ ಹಳೆ ಬಾಕಿ ಹಣ ವಸೂಲಿಯಾಗಲಿದೆ. ನೂತನ ಮನೆ ನಿರ್ಮಾಣದ ಯೋಗವಿದೆ. ಶಿಕ್ಷಣ, ನ್ಯಾಯಾಂಗ ಕ್ಷೇತ್ರ ಮತ್ತು ಹೋಟೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಇಂದು ಅತ್ಯಂತ ಶುಭ ದಿನ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 7

♊ ಮಿಥುನ ರಾಶಿ (Gemini)
ಹಿತಶತ್ರುಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆಯಾದರೂ, ಅಂತಿಮವಾಗಿ ನಿಮ್ಮ ಶ್ರಮಕ್ಕೆ ತಕ್ಕ ನಿರೀಕ್ಷಿತ ಫಲ ದೊರೆಯಲಿದೆ. ಪ್ರೇಮ ವ್ಯವಹಾರಗಳಿಗೆ ಕುಟುಂಬದಲ್ಲಿ ಮನ್ನಣೆ ಸಿಗಲಿದೆ. ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 6

♋ ಕರ್ಕಾಟಕ ರಾಶಿ (Cancer)
ನಿಮ್ಮ ಮೃದು ಮಾತುಗಳಿಂದಲೇ ಕಾರ್ಯ ಸಿದ್ಧಿಯಾಗಲಿದ್ದು, ಲಾಭ ಗಳಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಆನ್‌ಲೈನ್ ವ್ಯಾಪಾರಸ್ಥರಿಗೆ ಅತ್ಯಂತ ಲಾಭದಾಯಕ ದಿನ. ಹಳೆಯ ಆರೋಗ್ಯ ಸಮಸ್ಯೆಗಳು ಅಥವಾ ಕಾಯಿಲೆಗಳು ಮರುಕಳಿಸಿ ಕಿರಿಕಿರಿ ಉಂಟುಮಾಡಬಹುದು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 2

♌ ಸಿಂಹ ರಾಶಿ (Leo)
ನಿಮ್ಮಲ್ಲಿರುವ ಅತಿಯಾದ ಆತ್ಮವಿಶ್ವಾಸವೇ ನಿಮಗದ್ಯ ಪ್ರೇರಕ ಶಕ್ತಿಯಾಗಲಿದ್ದು, ಕಾರ್ಯ ಸಿದ್ಧಿಗೆ ಕಾರಣವಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ವಹಿವಾಟು ನಡೆಯಲಿದೆ. ಸಂತಾನ ಅಪೇಕ್ಷಿಗಳಿಗೆ ಸಂತಾನ ಯೋಗವಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಸ್ಥಾನಮಾನ ಪ್ರಾಪ್ತಿಯಾಗಲಿದೆ.

ಅದೃಷ್ಟ ಬಣ್ಣ: ಆರೆಂಜ್ (ಕಿತ್ತಳೆ)

ಅದೃಷ್ಟ ಸಂಖ್ಯೆ: 1

♍ ಕನ್ಯಾ ರಾಶಿ (Virgo)
ಇಂದು ನಿಮಗೆ ಧನಯೋಗದ ಸಾಧ್ಯತೆಗಳಿದ್ದರೂ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಸರ್ಕಾರಿ ನೌಕರರು ಮತ್ತು ಶಿಕ್ಷಕ ವೃತ್ತಿಯಲ್ಲಿರುವವರಿಗೆ ಪ್ರಗತಿಯ ದಿನ. ಹೊಸ ಮನೆ ಅಥವಾ ಸೈಟ್ ಖರೀದಿಸುವ ಸುವರ್ಣ ಯೋಗ ಒದಗಿಬರಲಿದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 3

♎ ತುಲಾ ರಾಶಿ (Libra)
ದೈನಂದಿನ ಕೆಲಸ ಕಾರ್ಯಗಳಲ್ಲಿ ನೀವು ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಯಶಸ್ಸು ತರಲಿವೆ. ಸರ್ಕಾರಿ ಸೌಲಭ್ಯಗಳು ಹಾಗೂ ಯೋಜನೆಗಳ ಪ್ರಯೋಜನ ನಿಮ್ಮದಾಗಲಿದೆ. ಆದರೆ, ತುರ್ತು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 4

♏ ವೃಶ್ಚಿಕ ರಾಶಿ (Scorpio)
ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಕಬ್ಬಿಣದ ವ್ಯಾಪಾರಿಗಳು ಹಾಗೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಕೆಲಸದಲ್ಲಿ ಶುಭಫಲ ಸಿಗಲಿದೆ. ಆದರೆ, ನೀವು ತೀರಾ ನಂಬಿದವರಿಂದಲೇ ಅಪಾರ್ಥಕ್ಕೆ ಒಳಗಾಗುವ ಸಾಧ್ಯತೆ ಇದೆ, ಎಚ್ಚರ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 9

♐ ಧನುಸ್ಸು ರಾಶಿ (Sagittarius)
ಇಂದು ಇಡೀ ದಿನ ಬಿಡುವಿಲ್ಲದ ಕೆಲಸದ ಒತ್ತಡವಿರಲಿದೆ. ರಿಯಲ್ ಎಸ್ಟೇಟ್ ಹಾಗೂ ಭೂ ಸಂಬಂಧಿ ವಿಚಾರಗಳಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಏರುಪೇರಾಗಿ ಚಿಂತೆ ಕಾಡಬಹುದು. ಆನ್‌ಲೈನ್ ವ್ಯವಹಾರ ನಡೆಸುವವರಿಗೆ ಉತ್ತಮ ಗಳಿಕೆ ಇರಲಿದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 9

♑ ಮಕರ ರಾಶಿ (Capricorn)
ಹಣಕಾಸಿನ ಆದಾಯ ಹೆಚ್ಚಾಗಲಿದ್ದು, ಸರಿಯಾದ ಲೆಕ್ಕಾಚಾರದೊಂದಿಗೆ ಖರ್ಚು ಮಾಡುವುದು ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ಹಳೆಯ ವಿರೋಧಿಗಳು ಮತ್ತು ಶತ್ರುಗಳು ನಿಮ್ಮೊಂದಿಗೆ ಮಿತ್ರರಾಗಲಿದ್ದಾರೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 8

♒ ಕುಂಭ ರಾಶಿ (Aquarius)
ಉದ್ಯೋಗ ಸ್ಥಳದ ವಾತಾವರಣದಿಂದ ಮನಸ್ಸಿನಲ್ಲಿ ಕೊಂಚ ಜಿಗುಪ್ಸೆ ಉಂಟಾಗಬಹುದು. ನಂಬಿಕಸ್ಥರಿಂದಲೇ ಮೋಸ ಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ಎಚ್ಚರದಿಂದಿರಿ. ರಾಜಕೀಯವಾಗಿ ಪ್ರಗತಿ ಸಾಧಿಸಲಿದ್ದು, ಕಾನೂನು ಅಥವಾ ಕೋರ್ಟ್ ವಿಷಯಗಳಲ್ಲಿ ಶುಭ ಫಲ ಸಿಗಲಿದೆ.

ಅದೃಷ್ಟ ಬಣ್ಣ: ಕಪ್ಪು

ಅದೃಷ್ಟ ಸಂಖ್ಯೆ: 8

♓ ಮೀನ ರಾಶಿ (Pisces)
ರಾಜಕೀಯ ಪ್ರವೇಶಕ್ಕೆ ಅಥವಾ ಪ್ರಗತಿಗೆ ಸೂಕ್ತ ದಿನ. ಸಹೋದರರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ತಿಳಿಯಾಗಿ ಉತ್ತಮ ಬಾಂಧವ್ಯ ಏರ್ಪಡಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶಗಳು ದೊರೆಯಲಿವೆ. ರೈತರು ಹಾಗೂ ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ಶುಭ ದಿನ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 6

Leave a Reply

Your email address will not be published. Required fields are marked *