ದೆಹಲಿ: ‘ಒಂದು ದೇಶ, ಒಂದು ಚುನಾವಣೆ’ (One Nation, One Election) ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (JPC) ಮತ್ತು ಭಾರತೀಯ ಸುಪ್ರೀಂ ಕೋರ್ಟ್ ನಾಯಕರ ನಡುವೆ ಸಭೆ ನಡೆಯಲಿದೆ ಎಂಬ ವರದಿಗಳನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ನಿರಾಕರಿಸಿದೆ. ಅಂತಹ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಆಡಳಿತ ಮಂಡಳಿ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ‘ಒಂದು ದೇಶ, ಒಂದು ಚುನಾವಣೆ’ ಕುರಿತ ಸಂಸದೀಯ ಸಮಿತಿಯು ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (CJI) ಹಾಗೂ ಇತರೆ ನ್ಯಾಯಾಧೀಶರನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಇವಳು ಯಾರು ಗೊತ್ತಾಯ್ತಾ? ಇವಳು ನನ್ನ ಹೆಂಡತಿ; ಮಾಫಿ ಸಾಕ್ಷಿ ಪ್ರದೋಶ್ ಬಿಚ್ಚಿಟ್ಟ ಸತ್ಯ
ಸುಪ್ರೀಂ ಕೋರ್ಟ್ ನೀಡಿದ ಸ್ಪಷ್ಟನೆ ಏನು?:
ಸುಪ್ರೀಂ ಕೋರ್ಟ್ ಮೂಲಗಳ ಪ್ರಕಾರ, ಜಂಟಿ ಸಂಸದೀಯ ಸಮಿತಿಯು (JPC) ಮುಖ್ಯ ನ್ಯಾಯಮೂರ್ತಿಗಳು ಅಥವಾ ಸುಪ್ರೀಂ ಕೋರ್ಟ್ನ ಇತರ ನ್ಯಾಯಾಧೀಶರೊಂದಿಗೆ ಯಾವುದೇ ರೀತಿಯ ಅಧಿಕೃತ ಅಥವಾ ಅನಧಿಕೃತ ಸಭೆಯನ್ನು ನಡೆಸುತ್ತಿಲ್ಲ. ಶಾಸಕಾಂಗದ ಸಮಿತಿಯೊಂದು ಪ್ರಸ್ತುತ ಜಾರಿಯಲ್ಲಿರುವ ಅಥವಾ ಭವಿಷ್ಯದಲ್ಲಿ ತಿದ್ದುಪಡಿಯಾಗಲಿರುವ ಕಾನೂನುಗಳ ಕುರಿತು ನ್ಯಾಯಾಂಗದ ಮುಖ್ಯಸ್ಥರನ್ನು ಭೇಟಿ ಮಾಡಿ ಸಮಾಲೋಚಿಸುವುದು ಸಂವಿಧಾನಿಕವಾಗಿ ಸೂಕ್ತವೇ ಎಂಬ ಪ್ರಶ್ನೆಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಕ್ಷಣವೇ ಈ ಕುರಿತು ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

