ಪ್ರಸಿದ್ಧ ಟೆಕ್ ದೈತ್ಯ ‘ಶಿಯೋಮಿ’ (Xiaomi) ಸಂಸ್ಥೆಯು ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಿಡ್-ಸೆಗೆಮೆಂಟ್ ಸರಣಿಯ ನೂತನ ‘ರೆಡ್ಮಿ 17C 5G’ (Redmi 17C 5G) ಸ್ಮಾರ್ಟ್ಫೋನ್ ಅನ್ನು ಗುರುವಾರ (ಅಕ್ಟೋಬರ್ 1) ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಸ್ಮಾರ್ಟ್ಫೋನ್, ಆಂಡ್ರಾಯ್ಡ್ 16 (Android 16) ಆಧಾರಿತ ‘ಹೈಪರ್ ಓಎಸ್ 3’ (HyperOS 3) ಕಾರ್ಯಾಚರಣಾ ವ್ಯವಸ್ಥೆ ಹಾಗೂ ‘ಗೂಗಲ್ ಜೆಮಿನಿ AI’ (Google Gemini) ಮತ್ತು ‘ಸರ್ಕಲ್ ಟು ಸರ್ಚ್’ (Circle to Search) ಫೀಚರ್ಗಳೊಂದಿಗೆ ಗ್ರಾಹಕರ ಕೈಸೇರಿದೆ.
‘ರೆಡ್ಮಿ 17C 5G’ ಪ್ರಮುಖ ಫೀಚರ್ಗಳು:
ಡಿಸ್ಪ್ಲೇ ಹಾಗೂ ಡಿಸೈನ್: 6.9-ಇಂಚಿನ ಬೃಹತ್ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ಪಡೆಯಲು IP64 ರೇಟಿಂಗ್ ನೀಡಲಾಗಿದೆ.
ಪ್ರೊಸೆಸರ್ & ‘ಆಂಡ್ರಾಯ್ಡ್ 16’ ಓಎಸ್: ‘ಮೀಡಿಯಾ ಟೆಕ್ ಡೈಮೆನ್ಸಿಟಿ 6300’ (MediaTek Dimensity 6300) ಪ್ರೊಸೆಸರ್ ಚಾಲಿತವಾಗಿದ್ದು, ಇತ್ತೀಚಿನ Android 16 ಆಧಾರಿತ HyperOS 3 ಬೆಂಬಲ ಹೊಂದಿದೆ.
ಬ್ಯಾಟರಿ & ಚಾರ್ಜಿಂಗ್: ಬೃಹತ್ 6000 mAh ಬ್ಯಾಟರಿ ಹೊಂದಿದ್ದು, ಬಾಕ್ಸ್ನೊಂದಿಗೆ 33W ವೇಗದ ಚಾರ್ಜರ್ (33W Fast Charger) ಲಭ್ಯವಿದೆ.
ಕ್ಯಾಮೆರಾ ಸೆಟಪ್: ಹಿಂಭಾಗದಲ್ಲಿ 50 MP ಪ್ರಮುಖ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 8 MP ಕ್ಯಾಮೆರಾ ಒದಗಿಸಲಾಗಿದೆ.
ಮೆಮೊರಿ ಹಾಗೂ ವರ್ಚುವಲ್ ರ್ಯಾಮ್: 6 GB ವರೆಗಿನ ಭೌತಿಕ ರ್ಯಾಮ್ ಜೊತೆಗೆ, ಹೆಚ್ಚುವರಿಯಾಗಿ 12 GB ವರ್ಚುವಲ್ ರ್ಯಾಮ್ (Virtual RAM) ಬಳಸಿಕೊಳ್ಳುವ ಸೌಲಭ್ಯವಿದೆ.
ಇತರ ಫೀಚರ್ಗಳು: ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ (Side-mounted Fingerprint Sensor) ಹಾಗೂ ಸಂಗೀತ ಪ್ರಿಯರಿಗಾಗಿ 3.5mm ಹೆಡ್ಫೋನ್ ಜ್ಯಾಕ್ ನೀಡಲಾಗಿದೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಪ್ರಿಯರಿಗೆ ಸಿಹಿ ಸುದ್ದಿ?: ಮೊಬೈಲ್ ಬೆಲೆ ಇಳಿಕೆಗೆ ಕೇಂದ್ರಕ್ಕೆ ಐಸಿಇಎ ಮಹತ್ವದ ಮನವಿ
ಬಣ್ಣಗಳು ಹಾಗೂ ಬೆಲೆ ವಿವರಗಳು :
ಈ ನೂತನ ಫೋನ್ ‘ಡಾರ್ಕ್ ನೈಟ್’ (Dark Night), ‘ಕಾಫಿ ಬ್ರೂ’ (Coffee Brew) ಮತ್ತು ‘ಪರ್ಪಲ್ ಡಾನ್’ (Purple Dawn) ಎಂಬ ಮೂರು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
4 GB RAM + 128 GB Storage ರೂಪಾಂತರ: ₹20,999
6 GB RAM + 128 GB Storage ರೂಪಾಂತರ: ₹22,999
ಭಾರತೀಯ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಹೈ-ಎಂಡ್ AI ಫೀಚರ್ಗಳನ್ನು ನೀಡುವ ನಿಟ್ಟಿನಲ್ಲಿ ರೆಡ್ಮಿ 17C 5G ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

