ದೇಶದ 4 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 6 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ: ತಮಿಳುನಾಡಿನಲ್ಲಿ ವಿಜಯ್, ಬೆಂಗಾಲ್‌ನಲ್ಲಿ ಸುವೇಂಧುಗೆ ಆಗ್ನಿಪರೀಕ್ಷೆ

ನವದೆಹಲಿ: ದೇಶದ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 6 ಕ್ಷೇತ್ರಗಳಲ್ಲಿ (5 ವಿಧಾನಸಭಾ ಕ್ಷೇತ್ರಗಳು ಹಾಗೂ 1 ಲೋಕಸಭಾ ಕ್ಷೇತ್ರ) ಮಹತ್ವದ ಉಪಚುನಾವಣೆಯ (Byelections) ಮತದಾನ ಮಂಗಳವಾರ ಬಿರುಸಿನಿಂದ ಆರಂಭಗೊಂಡಿದೆ. 2026 ರ ಸಾರ್ವತ್ರಿಕ ಚುನಾವಣೆಗಳ ನಂತರ ಬದಲಾದ ದೇಶದ ರಾಜಕೀಯ ಸಮೀಕರಣಗಳಿಗೆ ಈ ಉಪಚುನಾವಣೆಗಳು ದಿಕ್ಸೂಚಿಯಾಗಲಿದ್ದು, ರಾಜಕೀಯ ಪಕ್ಷಗಳ ಪಾಲಿಗೆ ಬಿಗ್ ಪರೀಕ್ಷೆಯಾಗಿ ಪರಿಣಮಿಸಿವೆ. ಅಕ್ಟೋಬರ್ 06 ರಂದು ನಡೆಯುತ್ತಿರುವ ಈ ಮತದಾನದ ಎಣಿಕೆ ಕಾರ್ಯ ಅಕ್ಟೋಬರ್ 09, 2026 ರಂದು ನಡೆಯಲಿದ್ದು, ಎಲ್ಲಾ ಆರು ಕ್ಷೇತ್ರಗಳ ಸಂಪೂರ್ಣ ಪ್ರಕ್ರಿಯೆಯು ಅಕ್ಟೋಬರ್ 11 ರೊಳಗೆ ಪೂರ್ಣಗೊಳ್ಳಲಿದೆ.

ರಾಜ್ಯವಾರು ಕ್ಷೇತ್ರಗಳು:

ತಮಿಳುನಾಡು: ಸಿಎಂ ಸಿ. ಜೋಸೆಫ್ ವಿಜಯ್ ಸರ್ಕಾರಕ್ಕೆ ಮೊದಲ ಪರೀಕ್ಷೆ

ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಧಿಕಾರಕ್ಕೆ ಬಂದ 4 ತಿಂಗಳಲ್ಲೇ ಎದುರಾಗಿರುವ ಮೊದಲ ಉಪಚುನಾವಣೆ ಇದು. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಜನಪ್ರಿಯತೆಗೆ ಇದು ಅಗ್ನಿಪರೀಕ್ಷೆಯಾಗಿದೆ.

ಮಧುರಾಂತಕಂ : TVK ಯ ಮರಗತಂ ಕುಮಾರವೇಲ್, ಡಿಎಂಕೆ  ಯ ಪರಂದಾಮನ್, ಅಖಿಲ ಭಾರತ ಅಣ್ಣಾ ಡಿಎಂಕೆ (AIADMK) ಯ ಕಣಿತಾ ಸಂಪತ್ ಹಾಗೂ ಸಿಪಿಎಂ ಮತ್ತು ಎನ್‌ಟಿ ಕೆ ಅಭ್ಯರ್ಥಿಗಳು ಸೇರಿದಂತೆ 28 ಮಂದಿ ಸ್ಪರ್ಧೆಯಲ್ಲಿದ್ದಾರೆ.

ಧಾರಾಪುರಂ: TVK ಯ ಪಿ. ಸತ್ಯಭಾಮಾ, ಡಿಎಂಕೆಯ ಸುಗಣ್ಯಾ, ಎಐಎಡಿಎಂಕೆಯ ಭಾನುಮತಿ ಕಣದಲ್ಲಿದ್ದಾರೆ.

ಮತದಾನದ ಟ್ರೆಂಡ್: ಆರಂಭಿಕ 2 ಗಂಟೆಗಳಲ್ಲಿ ಮಧುರಾಂತಕಂನಲ್ಲಿ ಶೇ. 15.99 ಹಾಗೂ ಧಾರಾಪುರಂನಲ್ಲಿ ಶೇ. 17.55 ರಷ್ಟು ಮತದಾನ ದಾಖಲಾಗಿದೆ.

ಪಶ್ಚಿಮ ಬಂಗಾಳ: ನಂದಿಗ್ರಾಮ, ರೇಜಿನಗರದಲ್ಲಿ ಹೈವೋಲ್ಟೇಜ್ ಕದನ

ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಸರ್ಕಾರ ರಚಿಸಿರುವ ಬಿಜೆಗೆ ಇದು ಮೊದಲ ಚುನಾವಣಾ ಸವಾಲು. ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರಿಗೆ ಈ ಕದನ ಅತ್ಯಂತ ಪ್ರತಿಷ್ಠೆಯದ್ದಾಗಿದೆ.

ನಂದಿಗ್ರಾಮ: ಮೇ 6 ರಂದು ಹತ್ಯೆಯಾದ ಮಾಜಿ ಸಚಿವ ಚಂದ್ರನಾಥ್ ರಾಥ್ ಅವರ ತಾಯಿ ಹಸಿರಾಣಿ ರಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿ ಭಾವನಾತ್ಮಕ ಅಲೆ ಎಬ್ಬಿಸಿದೆ. ತೃಣಮೂಲ ಕಾಂಗ್ರೆಸ್ ಶಾಸಕಿ ಅಭ್ಯರ್ಥಿ ಹಿಂಪಡೆದಿದ್ದರಿಂದ ಮಮತಾ ಬ್ಯಾನರ್ಜಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಕಣದಲ್ಲಿದ್ದಾರೆ.

ರೇಜಿನಗರ ಬಿಗ್ ಡ್ರಾಮಾ: ರೇಜಿನಗರ ಉಪಚುನಾವಣೆ ವೇಳೆ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ AJUP ಅಧ್ಯಕ್ಷ ಹುಮಾಯೂನ್ ಕಬೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಚಿವ ಯು.ಟಿ. ಖಾದರ್ ಮಹತ್ವದ ಹೇಳಿಕೆ

ಅಸ್ಸಾಂ: ಏಕೈಕ ನೌಗಾಂವ್ ಲೋಕಸಭಾ ಕ್ಷೇತ್ರ

ಇಂದಿನ 6 ಉಪಚುನಾವಣೆಗಳಲ್ಲಿ ನೌಗಾಂವ್ (Nagaon) ಏಕೈಕ ಲೋಕಸಭಾ ಕ್ಷೇತ್ರವಾಗಿದೆ. ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೋಯ್ ಪಕ್ಷ ತೊರೆದು ಬಿಜೆಪಿ ಸೇರಿ ಡಿಸ್ಪುರ್ ಶಾಸಕರಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಠಿಣ ಶ್ರಮವಹಿಸುತ್ತಿದೆ.

ಪುದುಚೇರಿ: ತಟ್ಟಂಚಾವಡಿ ಶಾಸಕ ಸ್ಥಾನದ ಫೈಟ್

ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ತಟ್ಟಂಚಾವಡಿ ಹಾಗೂ ಮಂಗಲಂ ಎರಡೂ ಕಡೆ ಗೆದ್ದು, ಮಂಗಲಂ ಸ್ಥಾನ ಉಳಿಸಿಕೊಂಡಿದ್ದರಿಂದ ತಟ್ಟಂಚಾವಡಿಗೆ ಉಪಚುನಾವಣೆ ನಡೆಯುತ್ತಿದೆ. ಎನ್‌ಡಿಎ (NDA) ಸರ್ಕಾರದ 4 ತಿಂಗಳ ಆಡಳಿತಕ್ಕೆ ಇದು ಪರೀಕ್ಷೆಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *