ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ರ‍್ಯಾಪ್ ಸಂಗೀತ ಕ್ಷೇತ್ರದಲ್ಲಿ ಸದಾ ಸುದ್ದಿಯಲ್ಲಿರುವ ಚಂದನ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ‘ಮೈಮಾಟ’ (Maimata) ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಾಡಿನ ಸಾಲುಗಳು ಹಾಗೂ ಅದಕ್ಕೆ ಅವರ ಮಾಜಿ ಪತ್ನಿ ನಿವೇದಿತಾ ಗೌಡ ನೀಡಿರುವ ಪ್ರತಿಕ್ರಿಯೆ/ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
‘ಮೈಮಾಟ’ ಸಾಂಗ್ ಸಾಲುಗಳು ಚಂದನ್-ನಿವೇದಿತಾ ವಿಚಾರಕ್ಕೆ ಲಿಂಕ್?:
ಚಂದನ್ ಶೆಟ್ಟಿ ಅವರ ಹೊಸ ಹಾಡಿನಲ್ಲಿ ಬರುವ “ಏನೇ ನಿನ್ನ ಮೈಮಾಟಾದಾಟ… ಇನ್ನೇಳು ಜನುಮಕೆ ಕಲಿಸಿದಿಯ ಪಾಠ…” ಎಂಬ ಸಾಲುಗಳನ್ನು ಕೇಳಿದ ತಕ್ಷಣವೇ ನೆಟ್ಟಿಗರು ಇದು ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಉದ್ದೇಶಿಸಿ ಬರೆದ ಸಾಲುಗಳೇ ಇರಬೇಕು ಎಂದು ಕಮೆಂಟ್ ಬಾಕ್ಸ್‌ನಲ್ಲಿ ಕಲ್ಪನೆ ಮಾಡಿ ಚರ್ಚಿಸಲು ಪ್ರಾರಂಭಿಸಿದ್ದರು.
View this post on Instagram
ನಿವೇದಿತಾ ಗೌಡ ಮೊದಲ ಬಾರಿಗೆ ತಿರುಗೇಟು?
ಹಾಡು ರಿಲೀಸ್ ಆದ ಬೆನ್ನಲ್ಲೇ ನಿವೇದಿತಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಬರೆದುಕೊಂಡಿರುವ ಸಾಲುಗಳು ಚಂದನ್ ಶೆಟ್ಟಿಗೆ ಕೊಟ್ಟ ನೇರ ಕೌಂಟರ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. “ನಾನು ಎಲ್ಲೋ ಓದಿದ್ದೆ—ಮಹತ್ವಾಕಾಂಕ್ಷೆ ಇರೋ ಹುಡುಗಿ ಅದ್ಭುತ ಸ್ನೇಹಿತರನ್ನ ಹೊಂದಿರುತ್ತಾಳೆ ಮತ್ತು ದುರಾದೃಷ್ಟದ ಪ್ರೇಮ ಜೀವನವನ್ನು ಹೊಂದಿರುವುದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತರಹ. ಆದರೆ ನನ್ನದು ಒಂದು ಭಯಾನಕ ಕಥೆಯಾಗಿತ್ತು! ಹಳೆಯ ನೆನಪುಗಳು/ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ… ಆ ಹಳೆಯ ದೆವ್ವ ಇನ್ನು ನನ್ನ ಬಿಟ್ಟು ಹೋಗುತ್ತಿಲ್ಲ.” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ :
ದಿಢೀರ್‌ನೆ ಇಬ್ಬರ ಕಡೆಯಿಂದ ಬಂದಿರುವ ಈ ಸಾಂಗ್ ಹಾಗೂ ಕೌಂಟರ್ ಪೋಸ್ಟ್‌ನಿಂದಾಗಿ ಸ್ಯಾಂಡಲ್‌ವುಡ್ ಮಂದಿ ಹಾಗೂ ನೆಟ್ಟಿಗರು ಬೆರಗಾಗಿದ್ದಾರೆ. ವಿಚ್ಛೇದನದ ನಂತರವೂ ಇಬ್ಬರ ಮಧ್ಯೆ ಅಪೂರ್ಣಗೊಂಡ ಹಳೆಯ ವೈಮನಸ್ಸಿನ ನೆನಪುಗಳು ಮತ್ತೆ ಕಾಡುತ್ತಿವೆಯಾ ಅಥವಾ ಇದು ಬರಿ ಕಾಕತಾಳೀಯವೇ ಎಂಬ ಚರ್ಚೆಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಿಸಿಯೇರಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

