ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಎರಡು ಮಹತ್ವದ ಷರತ್ತುಗಳನ್ನು ಮುಂದಿಟ್ಟಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಲ್ಲದೆ, ತಮ್ಮ ಹೇಳಿಕೆ ಮೂಲಕ ಅವರು ವಿಜಯೇಂದ್ರ ಅವರ ನಾಯಕತ್ವಕ್ಕೆ ನೇರ ಸವಾಲು ಹಾಕಿದ್ದಾರೆ.
ಯತ್ನಾಳ್ ಅವರು ತಮ್ಮ ವಾಗ್ದಾಳಿಯಲ್ಲಿ, “ನಾನು ಮುಂದಿನ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರು ಮತ್ತು ಪ್ರಾಮಾಣಿಕ ರಾಜಕಾರಣಿಗಳಿದ್ದಾರೆ” ಎಂದು ಹೇಳಿದ್ದಾರೆ. ಇದು ವಿಜಯೇಂದ್ರ ಅವರ ಮುಖ್ಯಮಂತ್ರಿ ಮಹತ್ವಾಕಾಂಕ್ಷೆಗಳನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡಂತಿದೆ.
ನಮಗೆ ಕಳಂಕವಿದೆ, ನಾವು ಚಕ್ಕನಿಂದ ಹಣ ಪಡೆದಿದ್ದೇವೆ ಎಂಬ ಕೆಟ್ಟ ಕಳಂಕ ನನಗಿದೆ. ನಮ್ಮ ತಂದೆಯವರ ಸೇವೆ ಮುಖ್ಯಮಂತ್ರಿ ನಾನೇ ಮಾಡಿದ್ದೇನೆ ಎಂಬ ಕಳಂಕ ಇರುವುದರಿಂದ, ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ” ಎಂದು ಯತ್ನಾಳ್ ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. ಈ ಹೇಳಿಕೆಗಳು ಬ್ಲಾಕ್ಮೇಲ್ ಪ್ರಯತ್ನಗಳು ವಿಫಲವಾದರೆ ವಿಜಯೇಂದ್ರ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತವೆ.
ಬಿಜೆಪಿ ಉಳಿಬೇಕು, ಆದರೆ ಅದು ಕಳಂಕಿತರ ಕೈಯಲ್ಲಿ ಉಳಿಯಬಾರದು” ಎಂಬುದು ಯತ್ನಾಳ್ ಅವರ ಹೇಳಿಕೆಗಳ ಮೂಲ ತಿರುಳಾಗಿದೆ.
ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಿಕೊಳ್ಳಲು ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. “ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಉಳಿಸಿ. ಮುಂದಿನ ದಿನಗಳಲ್ಲಿ ನಾನು ನಿಮಗೆ ಟೋಪಿ ಹಾಕುತ್ತೇನೆ ಎಂದು ಯಡಿಯೂರಪ್ಪ ದೇವೇಗೌಡ ಮತ್ತು ಪ್ರಧಾನಿ ಮೋದಿಯವರಿಗೆ ಹೇಳಿ ಬಂದಿದ್ದಾರೆ” ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ, ದೇವೇಗೌಡರು, “ನಿನ್ನ ಟೋಪಿಯನ್ನು ಬಹಳ ಹಿಂದೆಯೇ ನೋಡಿದ್ದೇನೆ, ನೀನು ಎಷ್ಟು ಯೋಗ್ಯನಿದ್ದೀಯಾ ಎಂದು ನನಗೆ ಗೊತ್ತಿದೆ” ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಯಡಿಯೂರಪ್ಪ ದೇವೇಗೌಡರ ಬಳಿ ನಾಟಕವಾಡಿದ್ದಾರೆ ಎಂದು ಯತ್ನಾಳ್ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ ಎಂದು ಹೇಳಿದ್ದ ಯಡಿಯೂರಪ್ಪ, ಇದೀಗ ವಿಜಯೇಂದ್ರ ಅವರನ್ನು ಉಳಿಸಿಕೊಳ್ಳುವ ಸಲುವಾಗಿ, “ಬಿಜೆಪಿ-ಜೆಡಿಎಸ್ ಒಂದಾಗಿ ಹೋಗುತ್ತೇವೆ” ಎಂದು ಹೇಳಿಕೆ ನೀಡಿರುವುದು ಅವರ ನಿಲುವಿನ ದ್ವಂದ್ವತೆಯನ್ನು ಎತ್ತಿ ತೋರಿಸುತ್ತದೆ ಎಂದು ಯತ್ನಾಳ್ ಆಪಾದಿಸಿದ್ದಾರೆ.
ಇದನ್ನೂ ಓದಿ: ‘ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಸಂವಿಧಾನವೇ ನನ್ನ ಧರ್ಮ!’: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಗೋಷ್ಠಿ
ಯತ್ನಾಳ್ ಅವರ ಪ್ರಕಾರ, ಯಡಿಯೂರಪ್ಪ ಮತ್ತು ದೇವೇಗೌಡರ ನಡುವಿನ ಈ ರಾಜಕೀಯ ನಾಟಕವು ಮುಂದುವರಿಯಲಿದೆ. “ಮುಂದಿನ ದಿನಗಳಲ್ಲಿ ದೇವೇಗೌಡರಿಗೆ ಇವರು ಟಾಂಗ್ ಕೊಡುತ್ತಾರೆ, ಅವರಿಗೆ ಇವರು ಟಾಂಗ್ ಕೊಡುತ್ತಾರೆ” ಎಂದು ಭವಿಷ್ಯ ನುಡಿದಿದ್ದಾರೆ. “ಇಬ್ಬರಿಗೂ ಒಳಗೆ ಹಾಕಿ ಕಾಲು ಎಳೆಯುವ ಚಟವಿದೆ, ಇಬ್ಬರೂ ಈ ಚಟವನ್ನು ಉಪಯೋಗಿಸಿಕೊಳ್ಳುತ್ತಾರೆ” ಎಂದು ಹೇಳುವ ಮೂಲಕ ಯತ್ನಾಳ್, ರಾಜ್ಯ ರಾಜಕೀಯದಲ್ಲಿ ಹಿರಿಯ ನಾಯಕರ ನಡುವಿನ ಪೈಪೋಟಿ ಮತ್ತು ಕುತಂತ್ರದ ರಾಜಕಾರಣದ ಮೇಲೆ ಬೆಳಕು ಚೆಲ್ಲಿದ್ದಾರೆ. ಯತ್ನಾಳ್ ಅವರ ಈ ನೇರ ವಾಗ್ದಾಳಿಗಳು ಕರ್ನಾಟಕ ಬಿಜೆಪಿಯ ಭವಿಷ್ಯದ ನಾಯಕತ್ವ ಮತ್ತು ರಾಜಕೀಯ ಸಮೀಕರಣಗಳ ಮೇಲೆ ದೊಡ್ಡ ಪರಿಣಾಮ ಬೀರಬಹುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

