ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಧಮಾಕಾ ಗಿಫ್ಟ್: ತುಟ್ಟಿ ಭತ್ಯೆ ಏರಿಕೆ

ಬೆಂಗಳೂರು: ಸರಣಿ ಬೆಲೆ ಏರಿಕೆಯ ಸುಳಿಯಲ್ಲಿ ಸಿಲುಕಿದ್ದ ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ಕಾಂಗ್ರೆಸ್ ಸರ್ಕಾರವು ಸಿಹಿ ಸುದ್ದಿ ನೀಡಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು (Dearness Allowance – DA) ಶೇ. 2.25 ರಷ್ಟು ಹೆಚ್ಚಳ ಮಾಡಿ ಆರ್ಥಿಕ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಈ ದರ ಪರಿಷ್ಕರಣೆಯು 2026ರ ಜುಲೈ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಈ ಹೆಚ್ಚಳದೊಂದಿಗೆ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯು ಪ್ರಸ್ತುತ ಮೂಲ ವೇತನದ ಶೇ. 15.75 ರಷ್ಟಿರುವುದು ಶೇ. 18 ಕ್ಕೆ ಏರಿಕೆಯಾಗಿದೆ. ಸೇವೆಗಳು-2 ವಿಭಾಗದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಮಂಜುನಾಥ್ ಎಸ್. ಅವರು ಈ ಕುರಿತು ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ.

 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ 1ನೇ ಜುಲೈ 2026 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ. 15.75 ರಿಂದ ಶೇ. 18 ಕ್ಕೆ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲಾಗಿದೆ.  ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು (Pensioners) ಹಾಗೂ ಕುಟುಂಬ ನಿವೃತ್ತಿ ವೇತನದಾರರಿಗೂ ಈ ಶೇ. 2.25 ರಷ್ಟು ಡಿಎ ಏರಿಕೆ ಅನ್ವಯವಾಗಲಿದೆ.

Advertisement

ಇದನ್ನೂ ಓದಿ: ‘ರಾಮಾಯಣ’ ಆಫಿಷಿಯಲ್ ಟ್ರೇಲರ್ ಔಟ್: ಶ್ರೀರಾಮನಾಗಿ ರಣಬೀರ್‌ ಕಪೂರ್‌, ರಾವಣನಾಗಿ ಯಶ್‌ ಅಬ್ಬರ

 ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ಸಿಬ್ಬಂದಿ ಹಾಗೂ ಪೆನ್ಷನರ್‌ಗಳಿಗೂ ಸಹ ಜುಲೈ 1 ರಿಂದಲೇ ಮೂಲ ನಿವೃತ್ತಿ ವೇತನದ ಶೇ. 18 ರಷ್ಟು ಡಿಎ ಲಭ್ಯವಾಗಲಿದೆ.

Advertisement

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement