ಬೆಮಗಳೂರು: ವಾರಾಂತ್ಯದಲ್ಲಿ ಗಣನೀಯ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಹೊಸ ವಾರದ ಆರಂಭವಾದ ಸೋಮವಾರವೂ (ನವೆಂಬರ್ 9) ತಮ್ಮ ಏರುಗತಿಯನ್ನು ಮುಂದುವರಿಸಿವೆ. ಇಂದು ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹95 ಹೆಚ್ಚಳವಾಗಿದ್ದು, ಆಭರಣ ಚಿನ್ನದ (22 ಕ್ಯಾರಟ್) ಬೆಲೆ ಪ್ರತಿ ಗ್ರಾಂಗೆ ₹13,250ರ ಗಡಿ ದಾಟಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹1,32,550 ತಲುಪಿದ್ದರೆ, 24 ಕ್ಯಾರಟ್ನ ಅಪರಂಜಿ ಚಿನ್ನದ ದರ ₹1,44,600 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹20,500 ರಲ್ಲಿ ಮುಂದುವರಿದಿದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ (ಪ್ರತಿ ಗ್ರಾಂಗೆ):

ಬೆಂಗಳೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು:
22 ಕ್ಯಾರಟ್ ಆಭರಣ ಚಿನ್ನ: ₹13,255

24 ಕ್ಯಾರಟ್ ಅಪರಂಜಿ ಚಿನ್ನ: ₹14,460
18 ಕ್ಯಾರಟ್ ಚಿನ್ನ: ₹10,845

ಬೆಳ್ಳಿ ದರ (ಪ್ರತಿ ಗ್ರಾಂಗೆ): ₹205 (100 ಗ್ರಾಂಗೆ ₹20,500)
(ಗಮನಿಸಿ: ಮಂಗಳೂರು, ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ಮಾರುಕಟ್ಟೆ ದರಗಳೇ ಅನ್ವಯವಾಗಲಿವೆ.)
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ):
ಬೆಂಗಳೂರು / ಚೆನ್ನೈ / ಮುಂಬೈ / ಕೋಲ್ಕತಾ / ಭುವನೇಶ್ವರ / ಕೇರಳ: ₹13,255
ಅಹ್ಮದಾಬಾದ್: ₹13,260
ದೆಹಲಿ / ಜೈಪುರ / ಲಕ್ನೋ: ₹13,270
ಇದನ್ನೂ ಓದಿ: ಆಭರಣ ಪ್ರಿಯರಿಗೆ ಭಾರಿ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಎಂಬಿಸಿಎಕ್ಸ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ದರ:
MCX ಗೋಲ್ಡ್ (ಡಿ. 4 ಡೆಲಿವರಿ): 1 ಗ್ರಾಂಗೆ ₹14,336
MCX ಸಿಲ್ವರ್: 1 ಗ್ರಾಂಗೆ ₹187
ಸ್ಪಾಟ್ ಗೋಲ್ಡ್ (ಅಂತಾರಾಷ್ಟ್ರೀಯ): 1 ಗ್ರಾಂಗೆ $131.73 (ಅಂದಾಜು ₹12,369)
ಸ್ಪಾಟ್ ಸಿಲ್ವರ್ (ಅಂತಾರಾಷ್ಟ್ರೀಯ): 1 ಗ್ರಾಂಗೆ $1.690 (ಅಂದಾಜು ₹159)
ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಗರದ ಪ್ರಮುಖ ಆಭರಣ ಮಳಿಗೆಗಳ ದರವನ್ನು ಆಧರಿಸಿವೆ. ಖರೀದಿ ವೇಳೆ ಶೇಕಡಾ 3ರಷ್ಟು ಜಿಎಸ್ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ.



