ಯುಪಿಎಸ್‌ಸಿ NDA ಪರೀಕ್ಷೆಯಲ್ಲಿ ದೇಶಕ್ಕೇ 1ನೇ ರ್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ

ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಶ್ರೇಯಾ ಎನ್. ಗೌಡ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (All India Rank 1) ಗಳಿಸಿ ಇಡೀ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಶ್ರೇಯಾ ಅವರ ಈ ಅಸಾಧಾರಣ ಸಾಧನೆಯನ್ನು ಗೌರವಿಸಲು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೇಯಾ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಶ್ರೇಯಾ ಅವರ ತಂದೆ ಜೆ. ನಾಗೇಂದ್ರ ಅವರು ಭದ್ರಾವತಿಯ ವಿಐಎಸ್‌ಎಲ್ (VISL) ಸಂಸ್ಥೆಯ ನಿವೃತ್ತ ನೌಕರರಾಗಿದ್ದು, ತಾಯಿ ಬಿ.ಎಂ. ಆಶಾ ಅವರು ಉಪನ್ಯಾಸಕಿಯಾಗಿದ್ದಾರೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದರೂ ಶ್ರೇಯಾ ಅವರು ತೋರಿದ ಅಪಾರ ಶ್ರಮ ಮತ್ತು ಪ್ರತಿಭೆಯನ್ನು ಸಂಸದ ರಾಘವೇಂದ್ರ ಕೊಂಡಾಡಿದರು. “ಶ್ರೇಯಾ ಅವರ ಈ ಐತಿಹಾಸಿಕ ಸಾಧನೆ ದೇಶಭಕ್ತಿಯ ಪ್ರತೀಕವಾಗಿದ್ದು, ಭಾರತೀಯ ಸೇನೆಗೆ ಸೇರಬಯಸುವ ಯುವ ಪೀಳಿಗೆಗೆ ಮತ್ತು ಯುವತಿಯರಿಗೆ ದೊಡ್ಡ ಸ್ಪೂರ್ತಿಯಾಗಲಿದೆ” ಎಂದು ಸಂಸದರು ಬಣ್ಣಿಸಿದರು.

Advertisement

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಅಡ್ಡಾದಿಡ್ಡಿ ಕೆಮಿಕಲ್ ಅಡಿಕೆ ಜಾಲ ಭೇದಿಸಿದ ಅಧಿಕಾರಿಗಳು: ‘ಕ್ಯಾನ್ಸರ್’ ತರಿಸುವ ಅಪಾಯಕಾರಿ ಬಣ್ಣ ಹಚ್ಚಿ ಮೋಸ

“ದೇಶಕ್ಕೆ ಶಕ್ತಿಶಾಲಿಯಾದ ಯುವ ಸೇನಾನಿಗಳನ್ನು ಸಿದ್ಧಗೊಳಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಶ್ರೇಯಾ ಅವರ ಈ ಯಶಸ್ಸು ಮತ್ತಷ್ಟು ಬಲ ತುಂಬಿದೆ” ಎಂದು ರಾಘವೇಂದ್ರ ಹೇಳಿದರು.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement