ಬೆಂಗಳೂರು: ಇತ್ತೀಚೆಗಷ್ಟೇ ಪ್ರಯಾಣಿಕರ ಬಸ್ ಟಿಕೆಟ್ ದರಗಳನ್ನು ಏರಿಕೆ ಮಾಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಇದೀಗ ಸಾಂದರ್ಭಿಕ ಒಪ್ಪಂದದ (Casual Contract) ಬಸ್ ಬಾಡಿಗೆ ದರಗಳನ್ನೂ ಪರಿಷ್ಕರಿಸಿ ಸಾರ್ವಜನಿಕರಿಗೆ ಮತ್ತೊಂದು ಶಾಕ್ ನೀಡಿದೆ.
ಮದುವೆ ಸಮಾರಂಭಗಳು, ಶೈಕ್ಷಣಿಕ ಪ್ರವಾಸ, ತೀರ್ಥಯಾತ್ರೆ ಹಾಗೂ ಇತರೆ ಖಾಸಗಿ ಕಾರ್ಯಕ್ರಮಗಳಿಗಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು ಬಾಡಿಗೆಗೆ ಪಡೆಯುವವರಿಗೆ ಈ ದರ ಏರಿಕೆ ನೇರವಾಗಿ ಅನ್ವಯವಾಗಲಿದೆ. ರಾಜ್ಯದೊಳಗೆ ಮತ್ತು ಅಂತರಾಜ್ಯ ಸಂಚಾರಕ್ಕೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದ್ದು, ಬಸ್ ಮಾದರಿಯ ಆಧಾರದ ಮೇಲೆ ಪ್ರತಿ ಕಿಲೋಮೀಟರ್ಗೆ ಬಾಡಿಗೆ ದರವನ್ನು ನಿರ್ಧರಿಸಲಾಗಿದೆ. ಅಲ್ಲದೆ, ವಾರಾಂತ್ಯದ ದಿನಗಳಲ್ಲಿ (Weekends) ಬಸ್ ಬಾಡಿಗೆ ದರಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ನಿಗಮ ತಿಳಿಸಿದೆ.

ಇದನ್ನೂ ಓದಿ: ಕೆಎಸ್ಆರ್ಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ: ಗರಿಷ್ಠ 9 ರೂಪಾಯಿ ಬಸ್ ಟಿಕೆಟ್ ದರ ಹೆಚ್ಚಳ
ಕೆಎಸ್ಆರ್ಟಿಸಿ ಬಸ್ಗಳ ಪರಿಷ್ಕೃತ ಬಾಡಿಗೆ ದರ ಪಟ್ಟಿ (ಪ್ರತಿ ಕಿಲೋಮೀಟರ್ಗೆ):

| ಬಸ್ ಮಾದರಿ (Bus Type) | ರಾಜ್ಯದೊಳಗೆ (ಪ್ರತಿ ಕಿ.ಮೀ.ಗೆ) | ಅಂತರಾಜ್ಯ ಸಂಚಾರಕ್ಕೆ (ಪ್ರತಿ ಕಿ.ಮೀ.ಗೆ) |
| ಸಾಮಾನ್ಯ ಬಸ್ (Ordinary) | ₹ 62 | ₹ 66 |
| ಅಶ್ವಮೇಧ (Ashwamedha) | ₹ 67 | ₹ 70 |
| ರಾಜಹಂಸ (Rajahamsa) | ₹ 68 | ₹ 72 |
| ನಾನ್-ಎಸಿ ಸ್ಲೀಪರ್ (Non-AC Sleeper) | ₹ 80 | ₹ 85 |
| ಪಲ್ಲಕ್ಕಿ (Pallakki) | ₹ 85 | ₹ 90 |
| ಐರಾವತ (Airavat) | ₹ 85 | ₹ 90 |
| ಐರಾವತ ಕ್ಲಬ್ ಕ್ಲಾಸ್ 2.0 (Airavat Club Class 2.0) | ₹ 125 | ₹ 130 |
| ಅಂಬಾರಿ ಉತ್ಸವ ಸ್ಲೀಪರ್ (Ambaari Utsav Sleeper) | ₹ 160 | ₹ 160 |
ಬಸ್ ಮಾದರಿಗೆ ಅನುಗುಣವಾಗಿ ಕನಿಷ್ಠ ಕಿಲೋಮೀಟರ್ ಮಿತಿಯೊಂದಿಗೆ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ವಾರಾಂತ್ಯದಲ್ಲಿ ಬಸ್ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಮಾನ್ಯ ದಿನಗಳಿಗಿಂತ ವಾರಾಂತ್ಯದಲ್ಲಿ ಬಾಡಿಗೆ ದರಗಳು ದುಬಾರಿಯಾಗಿರಲಿವೆ. ಸದ್ಯ ರಾಜ್ಯದಲ್ಲಿ ಮದುವೆ ಹಾಗೂ ಪ್ರವಾಸದ ಸೀಸನ್ ಆರಂಭವಾಗಿರುವ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಾಡಿಗೆ ದರ ಏರಿಕೆ ಮಾಡಿರುವುದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


