ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಜ.25 ರಂದು ಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಎಸ್.ಆರ್.ಸತೀಶ್ಚಂದ್ರ ನೇತೃತ್ವದ ತಂಡಕ್ಕೆ ಮೊದಲ ಗೆಲುವು ಸಿಕ್ಕಿದೆ.
ಚುನಾವಣಾ ಕಣದಲ್ಲಿದ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಹಾಲಿ ಉಪಾಧ್ಯಕ್ಷ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಹಿಂದುಳಿದ (2ಎ) ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಸ್‌ಆರ್ ಸತೀಶ್ಚಂದ್ರ ನೇತೃತ್ವದ ತಂಡಕ್ಕೆ ಮೊದಲ ಜಯ ದೊರಕಿದೆ. ಇನ್ನುಳಿದಂತೆ 11 ಸ್ಥಾನಗಳಿಗೆ ಜ.25 ರಂದು ಚುನಾವಣೆ ನಡೆಯಲಿದೆ.

ಅಲ್ಲದೆ, ಚುನಾವಣೆ ಕಣ ರಂಗೇರುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಅಭ್ಯರ್ಥಿಗಳ ಪರ ಬ್ಯಾಟ್ ಬೀಸಲು ಆರಂಭಿಸಿವೆ. ಎಸ್.ಆರ್.ಸತೀಶ್ಚಂದ್ರ ನೇತೃತ್ವದ ತಂಡವನ್ನು ಬೆಂಬಲಿಸುವಂತೆ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಭಾಗದ ಭಾಲಾವಲೀಕರ್ ರಾಜಪುರ ಸಾರಸ್ವತ ಸಂಘ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಎಸ್‌ಆರ್ ಸತೀಶ್ಚಂದ್ರ ನೇತೃತ್ವದ ತಂಡದ ಪರಿಚಯ
ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳ ಪರಿಚಯ
1. ಎಸ್.ಆರ್.ಸತೀಶ್ಚಂದ್ರ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸತೀಶ್ಚಂದ್ರ ಅವರು, ಇತ್ತೀಚೆಗೆ ಕ್ಯಾಂಪ್ಕೋ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾಗಿದ್ದಲ್ಲದೆ, ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರೂ ಆಗಿದ್ದಾರೆ.
2. ಹರೀಶ್ ಬೋರ್ಕರ್ ಕತ್ತಲಕಾನ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು, ಪಾಣಾಜೆ ವ್ಯವಸಾಯ ಸೇವಾ ಸಂಘದ ಮಾಜಿ ಉಪಾಧ್ಯಕ್ಷರು, ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷರು, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಕೋಶಾಧಿಕಾರಿಯಾಗಿದ್ದಾರೆ.
3. ರಾಜಗೋಪಾಲ ಬಾಳೆಗುಳಿ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು, ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರು ಆಗಿದ್ದಾರೆ.
4. ರವೀಶ ಪೊಸವಳಿಕೆ: ನ್ಯಾಯವಾದಿಯಾಗಿರುವ ಇವರು, ಪುಣಚದ ದೇವಿನಗರದಲ್ಲಿರುವ ಶ್ರೀದೇವಿ ವಿದ್ಯಾಕೇಂದ್ರದ ಸಂಚಾಲಕ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
5. ಬಿ.ವಸಂತಶಂಕರ್: ನಿವೃತ್ತ ಲೆಕ್ಕಾಧಿಕಾರಿಯಾಗಿರುವ ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
6. ವೇದವ್ಯಾಸ ಕಟ್ಟೆ, ಬೆಂಗಳೂರು: ಇಂಜಿನಿಯರ್ ಆಗಿರುವ ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
7. ಸಂಜೀವ ನಾಯಕ್ ಸುಳ್ಯ: ಶ್ರೀ ಮಹಾಲಕ್ಷ್ಮೀ ಇಲೆಕ್ಟ್ರಿಕಲ್ಸ್ ಮಾಲಕರೂ ಆಗಿರುವ ಇವರು, ಸರಕಾರದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರು ಆಗಿದ್ದಾರೆ.
8. ಚಂದ್ರಶೇಖರ್ ಭಟ್ ಮುಂಡುಗಾರು: ಪುರೋಹಿತರು, ಬ್ರಹ್ಮವೃಂದ ವೈದಿಕ ವೃಂದ ಮೋಂತಿಮಾರು ಇದರ ಟ್ರಸ್ಟಿ
9. ದಯಾನಂದ ನಾಯಕ್ ಕುಂಟಿಕಾನ: ನಿವೃತ್ತ ಎಎಸ್‌ಐ, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆಗೆ ಮುಹೂರ್ತ ಫಿಕ್ಸ್
ಹಿಂದುಳಿದ ವರ್ಗದ (2ಎ) ಕ್ಷೇತ್ರದಿಂದ ಅವಿರೋಧ ಆಯ್ಕೆ
ಉಮೇಶ್ ಪ್ರಭು ಕುಂಟಿಹಿತ್ಲು: ಹಿಂದುಳಿದ ವರ್ಗದ (2ಎ) ಕ್ಷೇತ್ರದೀಂದ ಸ್ಪರ್ಧಿಸಿದ್ದ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಗಳ ಪರಿಚಯ
1. ದೇವಕಿ ಎಚ್ ನಾಯಕ್ ವಾಗ್ಲೆ ಸಂಟ್ಯಾರ್: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರೂ ಆಗಿರುವ ಇವರು, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ನಿರ್ದೇಶಕರು, ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇದರ ನಿರ್ದೇಶಕರಾಗಿದ್ದಾರೆ.
2. ರಂಜಿತಾ ಆರ್ ಪ್ರಭು ಗೋಳಿತ್ತಡಿ: ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇದರ ಮಾಜಿ ಅಧ್ಯಕ್ಷರಾಗಿದ್ದಾರೆ.
ಈ ಮೇಲಿನ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತಗಳನ್ನು ನೀಡಿ ಗೆಲ್ಲಿಸಬೇಕಾಗಿ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಭಾಗದ ಭಾಲಾವಲೀಕರ್ ರಾಜಪುರ ಸಾರಸ್ವತ ಸಂಘ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

