Puttur : ಒಂದು ಕಾಲದಲ್ಲಿ “ಯಾರು ಚಪ್ಪಲಿ ಕದಿಯುತ್ತಾರೆ?” ಎನ್ನುವ ಪ್ರಶ್ನೆ ಸಾಮಾನ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದುಬಾರಿ ಬ್ರ್ಯಾಂಡ್ ಚಪ್ಪಲಿ, ಸ್ಪೋರ್ಟ್ಸ್ ಶೂ ಬೆಲೆ ಸಾವಿರಗಳನ್ನು ದಾಟುತ್ತಿರುವುದರಿಂದ ಕಳ್ಳರ ಕಣ್ಣೂ ಅವುಗಳ ಮೇಲೆ ಬಿದ್ದಿದೆ. ನಗರಗಳಷ್ಟೇ ಅಲ್ಲ, ಹಳ್ಳಿಗಳಲ್ಲೂ ಈಗ ಈ ವಿಚಾರ ಸಾಮಾನ್ಯವಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಬ್ಬರ ಚಪ್ಪಲಿಯಾದರೂ ನಾಪತ್ತೆಯಾಗೋದನ್ನು ಕಾಣುತ್ತೇವೆ. ಈ ಕಾರಣಕ್ಕೇ ದೇವಸ್ಥಾನ, ಮಸೀದಿ, ಆಸ್ಪತ್ರೆ, ಕಾಲೇಜು, ಮದುವೆ ಮಂಟಪದ ಹೊರಗಡೆ ಚಪ್ಪಲಿಗಳಿಗೆ ಬೀಗ ಹಾಕಿರುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.
ಇದನ್ನೂ ಓದಿ : Puttur : ಕಟಾರದಲ್ಲಿ ವಾಮಾಚಾರ ಶಂಕೆ: ಸ್ಥಳೀಯರಲ್ಲಿ ಆತಂಕ

ಹೌದು, ಹೆಚ್ಚುತ್ತಿರುವ ಚಪ್ಪಲಿ ಕಳ್ಳತನದಿಂದ ಬೇಸತ್ತ ಜನರು ಈಗ ತಮ್ಮ ಪಾದರಕ್ಷೆಗಳಿಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಪುತ್ತೂರಿನ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಭಾಂಗಣದ ಒಳಗೆ ಹೋದವರೆಲ್ಲರೂ ಚಪ್ಪಲಿ ಹೊರಗಿಟ್ಟು ತೆರಳಿದ್ದರು. ಎಲ್ಲರೂ ಸಭಾ ಭವನದ ಪ್ರವೇಶ ದ್ವಾರದ ಬಳಿ ಚಪ್ಪಲಿ ಇಟ್ಟು ತೆರಳಿದ್ದರು. ಆದರೆ ಇದೇ ಸಭಾಂಗಣದ ಸ್ವಲ್ಪ ದೂರದಲ್ಲಿ ಬೀಗ ಹಾಕಿದ ಚಪ್ಪಲಿಯನ್ನು ಕಂಡು ಒಮ್ಮೆಲೆ ಆಶ್ಚರ್ಯವಾಯಿತು. ಹಳೆಯ ಎರಡು ಚಪ್ಪಲಿಗಳ ಬಾರವನ್ನು ಜೋಡಿಸಿ ಹಳೆಯ ಬೀಗವನ್ನು ಜಡಿಯಲಾಗಿತ್ತು. ಇದು ಚಪ್ಪಲಿ ಕದಿಯದಿರಲಿ ಎಂಬ ಉದ್ದೇಶದಿಂದ ಆ ವ್ಯಕ್ತಿ ಬೀಗ ಹಾಕಿದ್ದಾಗಿದೆ. ಹಲವು ಬಾರಿ ಇವರ ಚಪ್ಪಲಿ ಕಳುವಾದ ಬಳಿಕ ಬೀಗ ಹಾಕುವ ತೀರ್ಮಾನಕ್ಕೆ ಬಂದಿರುವುದಾಗಿದೆ.
ಇದರ ಬಗ್ಗೆ ನಾವು, ಚಪ್ಪಲಿ ಕದಿಯುತ್ತಾರೆ ಎಂದು ಚಪ್ಪಲಿಗೆ ಬೀಗ ಹಾಕುವುದನ್ನು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯಾಗಿ ಚಿತ್ರಣ ನೋಡಿದ್ದೇವೆ ಮತ್ತು ಇದನ್ನು ನೋಡಿ ನಕ್ಕವರೂ ಇದ್ದಾರೆ. ಹೀಗೂ ಇದ್ದಾರ ಎಂದು ಮೂದಲಿಸಿದವರೂ ನಮ್ಮೊಳಗಿದ್ದಾರೆ. ಚಪ್ಪಲಿಗೆ ಬೀಗ ಹಾಕುವುದು ತಮಾಷೆ, ಇದು ನೈಜ ಸಂಗತಿ ಅಲ್ಲ ಎಂದು ಎಲ್ಲರೂ ನಂಬಿದ್ದರು. ಆದರೆ ಈ ಚಿತ್ರದಲ್ಲಿ ಕಾಣುವ ದೃಶ್ಯ ಪುತ್ತೂರಿನದ್ದು ಎಂಬುವುದಕ್ಕೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಮೇತ ಹಾಕಿರುತ್ತಾರೆ.
ಇದನ್ನೂ ಓದಿ :Update: ಪಿಯುಸಿ ಮಕ್ಕಳಿಗಿಲ್ಲ ಸ್ಟಡೀ ಹಾಲಿಡೇಸ್!!
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

