ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆ ಜ.25 ರಂದು ನಡೆಯಲಿದ್ದು, ಸಮಾಜ ಸಂಘಟಕ ಸುನಿಲ್ ಬೋರ್ಕರ್ ಮಂಡಕೊಚ್ಚಿ ನೇತೃತ್ವದ ತಂಡ ಕಣಕ್ಕಿಳಿಯುವ ಮೂಲಕ ಚುನಾವಣೆ ಕಾವು ಹೆಚ್ಚಿಸಿದಂತಾಗಿದೆ. ಅದರಂತೆ 12 ಸ್ಥಾನಗಳ ಆಡಳಿತ ಮಂಡಳಿಗೆ ಸುನಿಲ್ ಬೋರ್ಕರ್ ಸೇರಿದಂತೆ ಒಟ್ಟು ಏಳು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸುನಿಲ್ ಬೋರ್ಕರ್ ನೇತೃತ್ವದ ತಂಡದ ಅಭ್ಯರ್ಥಿಗಳ ಪರಿಚಯ

1. ಸುನಿಲ್ ಬೋರ್ಕರ್ ಮುಂಡಕೊಚ್ಚಿ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿರುವ ಇವರು 48 ಸಂಘಟನೆಗಳ ನಿರ್ಮಾಣ ಮತ್ತು ಸಂಘಟನೆಯ ಪ್ರಮುಖ ಕಾರಣಕರ್ತರಾಗಿದ್ದಾರೆ.
2. ಸುಬ್ರಮಣ್ಯ ಕೆ.: ಗ್ರೇಸ್ ಅಕಾಡೆಮಿಯ ಸಂಸ್ಥಾಪಕರಾಗಿರುವ ಇವರು, ಜೀವನ ವಿಜ್ಞಾನ ಮತ್ತು ಆರ್ಥಿಕತೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ತರಬೇತುದಾರರಾಗಿದ್ದಾರೆ. ಸಾರಸ್ವತ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಇವರು, Apex Bank, DCC Bank, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆಗಳ ಅತಿಥಿ ತರಬೇತುದಾರರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹಾಗೂ CAMPCO ಸಂಸ್ಥೆಗೆ ನಿರಂತರ ತರಬೇತಿ ನೀಡುತ್ತಿದ್ದಾರೆ.
3. ಎಸ್. ರಾಧಾಕೃಷ್ಣ ನಾಯಕ್ ದಾಸನಕಜೆ: ನಿವೃತ್ತ ಕಾರ್ಪೋರೇಷನ್ ಬ್ಯಾಂಕ್ ಮ್ಯಾನೇಜರ್ ಆಗಿರುವ ಇವರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಾಜಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಇದನ್ನೂ ಓದಿ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆಗೆ ಮುಹೂರ್ತ ಫಿಕ್ಸ್
4. ಜಯರಾಮ್ ಪಿ.: ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಇವರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಹಾಲಿ ನಿರ್ದೇಶಕರಾಗಿದ್ದಾರೆ.
5. ಪ್ರಕಾಶ್ ಪಂಜಿಗಾರು: ಪ್ರಗತಿಪರ ಕೃಷಿಕರಾಗಿರುವ ಇವರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಹಾಲಿ ನಿರ್ದೇಶಕರಾಗಿದ್ದಾರೆ.
6. ಶ್ರೀಧರ್ ಪಿ.: ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
7. ಅರುಣಾ ಎಸ್.: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಾಜಿ ನಿರ್ದೇಶಕಿಯಾಗಿರುವ ಇವರು, ಸರಸ್ವತಿ ಮಹಿಳಾ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ.
ಈ ಮೇಲಿನ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತಗಳನ್ನು ನೀಡಿ ಗೆಲ್ಲಿಸಬೇಕಾಗಿ ಸುನಿಲ್ ಬೋರ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

