ಪುತ್ತೂರು: ಎಪಿಎಂಸಿ ರಸ್ತೆಯ ಐಸಿಐಸಿಐ ಬ್ಯಾಂಕ್ ಮುಂಭಾಗದಲ್ಲಿ ತಲೆ ಎತ್ತಿರುವ ಗೋಶನ್ ಕಾಂಪ್ಲೆಕ್ಸ್ ಜ.21ರಂದು ಲೋಕಾರ್ಪಣೆಗೊಂಡಿತು.
ಆನಂದ ರಾವ್ ಅಜೇಯನಗರ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಕಾಂಪ್ಲೆಕ್ಸ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ರೊನಾಲ್ಡ್ ಹಾಗೂ ಒಫೀಲಿಯ ರೊನಾಲ್ಡ್ ದಂಪತಿ ದೀಪ ಬೆಳಗಿಸಿದರು.

ಮುಖ್ಯ ಅತಿಥಿ ಪುತ್ತೂರು ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಮಾತನಾಡಿ, ಕಟ್ಟಡ ನಿರ್ಮಿಸಲು ಶ್ರಮಪಟ್ಟಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕಂತೆ ದೇವರು ಪ್ರತಿಫಲವನ್ನು ಅನುಗ್ರಹಿಸಲಿ ಎಂದು ಶುಭಹಾರೈಸಿದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ಇದೊಂದು ಉತ್ತಮವಾದ ಉದ್ಯಮವಾಗಿದೆ ಎಂದು ಹೇಳಿ ಶುಭಹಾರೈಸಿದರು.


ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ ಮಾತನಾಡಿದ ಒಫೀಲಿಯ ರೊನಾಲ್ಡ್, ಮನೆಯನ್ನು ದೊಡ್ಡ ಕನಸಿನೊಂದಿಗೆ ವಾಣಿಜ್ಯ ಕಟ್ಟಡವನ್ನಾಗಿ ಪರಿವರ್ತಿಸಿದ್ದೇವೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು.
ಮಾಲಕ ರೊನಾಲ್ಡ್ ಮಾತನಾಡಿ, ಮನೆಯನ್ನು ವಾಣಿಜ್ಯ ಸಂಕೀರ್ಣವನ್ನಾಗಿ ಮಾಡುವ ಮೂಲಕ ಆದಾಯನ್ನು ಗಳಿಸಬಹುದು ಎಂದರು.
ಆರೋಗ್ಯ ನಿರೀಕ್ಷಕಿ ಶ್ವೇತ, ನಗರಸಭೆಯ ನಾಮನಿರ್ದೇಶಿತ ಸದಸ್ಯ ಮಹೇಶ್ ರಾವ್ ಕಲ್ಲೇಗ, ಕಟ್ಟಡ ಮಾಲಕರ ಪುತ್ರ ರಾಯನ್ ಬರೆಟ್ಟೊ, ಮಾಜಿ ಸೈನಿಕ ರಾಧಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಇಲೆಕ್ಟ್ರಿಕಲ್ಸ್ ಮಾಲಕ ದಿನೇಶ್ ಕುಲಾಲ್ ಸಹಕರಿಸಿದರು. ಹೇಮ ಜಯರಾಮ್ ನಿರೂಪಿಸಿ ವಂದಿಸಿದರು.
ಇದನ್ನೂ ಓದಿ : Shocking: ಮಹಿಳೆಯರ ಒಳ ಉಡುಪು ಕದಿಯುವುದೇ ಇವನ ಕೆಲಸ! ಮುಂದೇನಾಯ್ತು?
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

