Breaking News

Belthangady : ಸುಮಂತ್ ಸಾವು ಪ್ರಕರಣ: ಕುಟುಂಬಸ್ಥರ ನೆರವಿಗೆ ದಾವಿಸಿದ ಮೋಂತಿಮಾರು ಆರ್.ಎಸ್.ಬಿ. ಸಂಘ

ಬೆಳ್ತಂಗಡಿ : ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಿ, ಇದು ಕೊಲೆ ಎಂದು ಸಾಬೀತಾದ ಬಳಿಕ ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

ಹೌದು… ಬೆಳೆದು ದೊಡ್ಡವನಾದ ಮೇಲೆ ವಿಜ್ಞಾನಿಯಾಗಬೇಕೆಂಬ ಕನಸು ಹೊತ್ತುಕೊಂಡಿದ್ದ ಗೇರುಕಟ್ಟೆಯ ಬಾಲಕ ಸುಮಂತ್ ನಿಗೂಢ ಸಾವು ಎಲ್ಲರ ಕಣ್ಣುಗಳನ್ನು ಒದ್ದೆ ಮಾಡಿತ್ತು. ಇದೀಗ ಸುಮಂತ್ ಮನೆಯವರ ನೆರವಿಗೆ ದಾವಿಸಿದ ಬಂಟ್ವಾಳ ತಾಲೂಕಿನ‌ ಮಂಚಿ ಗ್ರಾಮದ ಮೋಂತಿಮಾರು ಬಿ.ಆರ್.ಎಸ್.ಬಿ. ಸಂಘದ ಸದಸ್ಯರು ಇಂದು ಸಂಪತ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ, ಬಡ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ.

Advertisement

ಇದನ್ನೂ ಓದಿ : ಮಂಗಳೂರು: ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿ: ರಮಾನಾಥ ರೈ

ಪೊಲೀಸರು ಆದಷ್ಟು ಬೇಗ ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಇಲ್ಲವಾದರೆ ಬಿ‌.ಆರ್.ಎಸ್.ಬಿ ಸಮುದಾಯದಿಂದ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ದಿನೇಶ್ ಪ್ರಭು ಖಂಡಿಗೆ ಮತ್ತು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು. ಆರೋಪಿಗಳ ಬಂಧನ ಆದಷ್ಟು ಬೇಗ ಆಗಲಿ ಎಂದು ಮೋಂತಿಮಾರು ಶ್ರಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ದಿನೇಶ್ ಪ್ರಭು ಹೇಳಿದರು.

ಈ ವೇಳೆ ಕಾರ್ಯದರ್ಶಿ ಪ್ರವೀಣ್ ಕೋಕಾಲ, ಸದಸ್ಯರಾದ ಗಂಗಾಧರ ಶೇಂದ್ರೆಕಾರ್, ರವಿಶಂಕರ್ ಆಳಾಬೆ, ಅತುಲ್ ನಾಯಕ್ ಅಳಾಬೆ, ಸಂತೋಷ್ ಗುಂಡಿಮಜಲು, ಅಕ್ಷಯ್ ಮಂಚಿ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು