ಲಕ್ನೋ : ವಯಸ್ಸಿಗೆ ಯಾವುದೂ ಅಡ್ಡಿ ಬರೋದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಾ, ಉತ್ತರ ಪ್ರದೇಶದ 70 ವರ್ಷದ ವಿನೋದ್ ಕುಮಾರ್ ಶರ್ಮಾ ಅವರು ತಮ್ಮ ಮೊದಲ ವ್ಲಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಹಿಂದಿನಿಂದ ಮಾಡಿಕೊಂಡು ಬಂದಿರುವ ವ್ಲಾಗ್ ನ ಅನುಭವವಿಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಅವರ ಮೊದಲ ವೀಡಿಯೊ 72 ಗಂಟೆಗಳಲ್ಲಿ ಸುಮಾರು 2.9 ಕೋಟಿ ಬಾರಿ ವೀಕ್ಷಣೆಯಾಗಿದೆ.
ವೀಡಿಯೊದಲ್ಲಿ ಸರಳವಾಗಿ ತಮ್ಮನ್ನು ಪರಿಚಯಿಸಿಕೊಂಡ ಅವರು, “70 ವರ್ಷ ವಯಸ್ಸಿನಲ್ಲಿ ನನ್ನ ಮೊದಲ ವ್ಲಾಗ್ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ. ನಿವೃತ್ತಿಯ ನಂತರ ಸಮಯವನ್ನು ಅರ್ಥಪೂರ್ಣವಾಗಿ ಕಳೆಯಲು ಈ ಪ್ರಯತ್ನ ಆರಂಭಿಸಿರುವುದಾಗಿ ತಿಳಿಸಿದ ಅವರು, ತಮಗೆ ವ್ಲಾಗಿಂಗ್ ಬಗ್ಗೆ ಹೆಚ್ಚು ಅರಿವು ಇಲ್ಲದಿದ್ದರೂ ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ‘ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ವ್ಲಾಗ್ ಮಾಡೋದು ಬರೋದಿಲ್ಲ, ಆದರೂ ಸಮಯ ಕಳೆಯಲು ಈ ಕೆಲಸ ಮಾಡುತ್ತಿದ್ದೇನೆ. ನಿಮಗೆ ನನ್ನ ವ್ಲಾಗ್ ಇಷ್ಟವಾದರೆ ಮುಂದುವರಿಸಲು ಪ್ರೇರಣೆ ಸಿಗುತ್ತದೆ,’ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

View this post on Instagram
ಇದನ್ನೂ ಓದಿ : ಕಡಬ: ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ದೈತ್ಯ ಕಾಡುಕೋಣದ ಹತ್ಯೆ!
ಈ ವೀಡಿಯೊಗೆ ಇದುವರೆಗೆ 20 ಲಕ್ಷಕ್ಕೂ ಅಧಿಕ ಲೈಕ್‌ಗಳು ಹಾಗೂ ಸಾವಿರಾರು ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಲಭಿಸಿವೆ. ವೈರಲ್ ಆದ ನಂತರ ವಿನೋದ್ ಕುಮಾರ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 64 ಸಾವಿರಕ್ಕಿಂತ ಹೆಚ್ಚಾಗಿದೆ. ಅವರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಹಲವರು ಮೆಚ್ಚಿಕೊಂಡಿದ್ದು, ಇದು ಅನೇಕರಿಗೆ ತಮ್ಮ ತಂದೆ-ತಾಯಿ ಮತ್ತು ಅಜ್ಜ-ಅಜ್ಜಿಯರನ್ನು ನೆನಪಿಸಿದೆ.
ನಟರಾದ ಅನುಪಮ್ ಖೇರ್ ಮತ್ತು ಜಯ್ ಭಾನುಶಾಲಿ ಸೇರಿದಂತೆ ಹಲವು ಸಿನಿತಾರೆಯರೂ ಅವರ ವ್ಲಾಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಿಮ್ಮ ಮುಂದಿನ ವ್ಲಾಗ್‌ಗಾಗಿ ಕಾಯುತ್ತಿದ್ದೇನೆ. ಮೊದಲ ವ್ಲಾಗ್ ತುಂಬಾ ಚೆನ್ನಾಗಿದೆ,” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವೀಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

