ಕಡಬ: ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ದೈತ್ಯ ಕಾಡುಕೋಣದ ಹತ್ಯೆ!

Kadaba Wild Gaur killed in Subrahmanya forest area

ಕಡಬ: ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯ ಐತ್ತೂರು ಗ್ರಾಮದ ಒಟ್ಟೆ ಕಜೆ ಬಳಿಯ ಅರ್ಬಿಟೋಡು ಎಂಬಲ್ಲಿ ಜನವರಿ 24 ರ ರಾತ್ರಿ ಬೇಟೆಗಾರರು ದೈತ್ಯ ಕಾಡುಕೋಣವನ್ನು ಕ್ರೂರವಾಗಿ ಕೊಂದುಹಾಕಿದ ಘಟನೆ ನಡೆದಿದೆ.

 ಬಂದೂಕಿನಿಂದ ಗುಂಡು ಹಾರಿಸಿ ಕಾಡುಕೋಣವನ್ನು ಬೇಟೆಯಾಡಿದ್ದಾರೆ ಎಂಬ ಖಚಿತ  ಮಾಹಿತಿ ಲಭ್ಯವಾದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಜನವರಿ 25 ರಂದು ದಾಳಿ ನಡೆಸಿದ್ದರು. ಈ ವೇಳೆ ಬೇಟೆಗಾರರು ಕಾಡುಕೋಣದ ಮಾಂಸ ಕತ್ತರಿಸುತ್ತಿದ್ದರು.

Advertisement

ಅಧಿಕಾರಿಗಳ ದಾಳಿ ನಡೆಸುತ್ತಿದ್ದಂತೆ ಆರೋಪಿಗಳು  ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ, ಅರಣ್ಯ ಸಿಬ್ಬಂದಿ ಸುಮಾರು 8 ಕ್ವಿಂಟಾಲ್ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೇಟೆಯಾಡಲು ಬಳಸಲಾದ ವಾಹನಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೃತ್ಯದಲ್ಲಿ ಐದು ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದಾರೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇದನ್ನೂ ಓದಿ: ಕಲ್ಲಡ್ಕ: ಅಡ್ಡ ಬಂದ ದನ: ಡಿವೈಡರ್ ಮೇಲೆ ಹತ್ತಿದ KSRTC ಬಸ್!

Advertisement

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಪಶುವೈದ್ಯಾಧಿಕಾರಿ ಡಾ. ಯಶಸ್ವಿ, ಅರಣ್ಯ ಸಿಬ್ಬಂದಿ ಸೇರಿದಂತೆ ಅರಣ್ಯ ಸಿಬ್ಬಂದಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡೇಟಿನಿಂದಾಗಿ ಸಾವನ್ನಪ್ಪಿದೆ ಎಂದು ದೃಢಪಟ್ಟಿದೆ. “ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸುಬ್ರಹ್ಮಣ್ಯದ ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ  

(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com)

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು