Breaking News

Movie : ಧುರಂದರ್ ನಂತರ ಶೂಟ್: ಬಾರ್ಡರ್ 2ರಲ್ಲಿನ ಖನ್ನಾ-ಶೆಟ್ಟಿ ವಿಡಿಯೋ ವೈರಲ್

ಮುಂಬೈ: ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಾರ್ಡರ್ 2 ಪ್ರೇಕ್ಷಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು ಮೂರು ದಶಕಗಳ ಹಿಂದೆ ಜೆ.ಪಿ. ದತ್ತಾ ನಿರ್ದೇಶಿಸಿದ್ದ ‘ಬಾರ್ಡರ್ ‘(1997) ಚಿತ್ರ ಭಾರತೀಯ ಸೈನಿಕರ ಶೌರ್ಯವನ್ನು ವಿಭಿನ್ನವಾಗಿ ಚಿತ್ರಿಸಿತ್ತು. ಅದರಿಂದಲೇ ಬಾರ್ಡರ್ 2 ಮೇಲಿನ ನಿರೀಕ್ಷೆಯೂ ಹೆಚ್ಚಾಗಿತ್ತು.

ಸನ್ನಿ ಡಿಯೋಲ್ ಮುಖ್ಯ ಪಾತ್ರದಲ್ಲಿ, ವರುಣ್ ಧವನ್, ಅಹಾನ್ ಶೆಟ್ಟಿ ಹಾಗೂ ದಿಲ್ಜೀತ್ ದೋಸಾಂಜ್ ಅಭಿನಯದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಮೆಚ್ಚುಗೆ ಗಳಿಸಿದೆ. ಇದರೊಂದಿಗೆ ಎಂಡ್ ಕ್ರೆಡಿಟ್ಸ್ ವೇಳೆ ಕಾಣಿಸಿಕೊಂಡ ವಿಶೇಷ ದೃಶ್ಯ ಅಭಿಮಾನಿಗಳಿಗೆ ದೊಡ್ಡ ಅಚ್ಚರಿ ನೀಡಿದೆ. ಮೊದಲ ಭಾಗದಲ್ಲಿ ವೀರಮರಣ ಹೊಂದಿದ್ದ ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಪುನೀತ್ ಇಸ್ಸಾರ್ ಹಾಗೂ ಸುಧೇಶ್ ಬೆರಿ ಅವರ ಪಾತ್ರಗಳನ್ನು ಸ್ಮರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ : High Court : ಸೆಷನ್ ಕೋರ್ಟ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ : ಹೈಕೋರ್ಟ್

ಧುರಂಧರ್ ಚಿತ್ರದ ಬಳಿಕ ಅಕ್ಷಯ್ ಖನ್ನಾ ಬಾರ್ಡರ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹರಡಿದ್ದರೂ ಅಧಿಕೃತ ದೃಢೀಕರಣ ಇರಲಿಲ್ಲ. ಇದೀಗ ಅಂತಿಮ ದೃಶ್ಯದಲ್ಲಿ ಸನ್ನಿ ಡಿಯೋಲ್ ಅಭಿನಯದ ಫತೇಹ್ ಸಿಂಗ್ ಕಾಲರ್ ಪಾತ್ರ, ಮೊದಲ ಚಿತ್ರದ ಶಹೀದರ ತ್ಯಾಗವನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲೇ ಈ ನಟರ ಮುಖಗಳು ಕಾಣಿಸಿಕೊಳ್ಳುತ್ತವೆ.

 

View this post on Instagram

 

A post shared by Ranveer Singh (@ranveersingh)

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಹ ನಿರ್ಮಾಪಕ ಭೂಷಣ್ ಕುಮಾರ್, ಈ ದೃಶ್ಯವನ್ನು ನಾವು ಕೊನೆಯ ಕ್ಷಣದಲ್ಲಿ ಸೇರಿಸಿದುದಲ್ಲ. ಇದು ಮೊದಲಿನಿಂದಲೇ ಕಥಾಸ್ಕ್ರಿಪ್ಟ್‌ನ ಭಾಗವಾಗಿತ್ತು. ಧುರಂಧರ್ ಬಿಡುಗಡೆಯಾದ ನಂತರ ಅಕ್ಷಯ್ ಖನ್ನಾರ ಭಾಗವನ್ನು ಶೂಟ್ ಮಾಡಿದ್ದೇವೆ. ಆದರೆ ಅವರ ಕುರಿತಾಗಿ ಬಂದ ಹೈಪ್‌ನಿಂದ ಲಾಭ ಪಡೆಯುವ ಉದ್ದೇಶ ನಮ್ಮದಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕ ಅನುರಾಗ್ ಸಿಂಗ್ ಕೂಡ ಮಾತನಾಡಿ, ಡಿಸೆಂಬರ್ 10 ಮತ್ತು 11ರಂದು ಅಕ್ಷಯ್ ಖನ್ನಾರ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಬಾರ್ಡರ್ ಚಿತ್ರಕ್ಕೆ ಗೌರವ ಸೂಚಿಸುವ ಉದ್ದೇಶದಿಂದಲೇ ಅವರನ್ನು ಈ ಚಿತ್ರದಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.

ಸಿನೆಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು