Breaking News

KSRTC : ನಾಳೆ ಸಾರಿಗೆ ನೌಕರರ ಮುಷ್ಕರ: ‘ನೋ ವರ್ಕ್ ನೋ ಪೇ’ ಜಾರಿ

ಬೆಂಗಳೂರು : ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಮನಸ್ತಾಪಗಳು ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಇದೀಗ ಜನವರಿ 29ರಂದು ಬೆಂಗಳೂರು ಚಲೋಗೆ ಕರೆ ನೀಡಿದ್ದು, KSRTC ಸೇರಿದಂತೆ ಒಟ್ಟು 4 ನಿಗಮದ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುತ್ತಾರೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಪದೇ ಪದೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಸರ್ಕಾರ ವಿಫಲವಾಗುತ್ತಿದೆ. ಇದರಿಂದಾಗಿ ನೌಕರರು ಜನವರಿ 29ರಂದು ಬೆಂಗಳೂರು ಚಲೋ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಆದರೆ ಇದೀಗ ನೌಕರರಿಗೆ KSRTC ಬಿಗ್‌ ಶಾಕ್‌ ನೀಡಿದೆ.

ಇದನ್ನೂ ಓದಿ : Hosanagara : ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್

Advertisement

ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಒಂದು ವೇಳೆ ಗುರುವಾರ, ಜನವರಿ 29 ರಂದು ಎಂದಿನಂತೆ ಕೆಲಸಕ್ಕೆ ಹಾಜರಾಗದಿದ್ದರೆ, ‘ನೋ ವರ್ಕ್ ನೋ ಪೇ’ ಆದೇಶವನ್ನು ಹೊರಡಿಸಿದೆ. ಅಲ್ಲದೇ ಈ ಬೆಂಗಳೂರು ಚಲೋದಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕೈಗೊಳ್ಳುಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿ ರಜೆ ಮಂಜೂರು ಮಾಡಬಾರದು. ಮುಖ್ಯವಾಗಿ ಅವಶ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು KSRTC ಎಂಡಿ ಅಕ್ರಂ ಪಾಷ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

KSRTC ನೌಕರರ ಪ್ರತಿಭಟನೆ ಮಾಡದಂತೆ ತಡೆಯಲು ಖಡಕ್‌ ಆದೇಶ ಹೊರಡಿಸಿದರೂ ಸಹ ಏನಾದರೂ ನೌಕರರು ಬೆಂಗಳೂರು ಚಲೋ ನಡೆಸಿದ್ದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದು ಖಚಿತ. ಆದರೂ ಜನವರಿ 29ರಂದು ಏನಾದರೂ ನಿಮ್ಮ ಪ್ಲ್ಯಾನ್‌ ಇದ್ದಲ್ಲಿ ಆದಷ್ಟು ಮುಂದೂಡುವುದು ಉತ್ತಮ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು