Breaking News

ಎನ್‌ಸಿಪಿ ಉತ್ತರಾಧಿಕಾರಿ ಅಜಿತ್ ಪತ್ನಿ ಸುನೇತ್ರಾ; ನಾಳೆಯೇ ಡಿಸಿಎಂ ಪವರ್

ಮಹಾರಾಷ್ಟ್ರ: ವಿಮಾನ ಪತನದಲ್ಲಿ ದುರ್ಮಣರ ಹೊಂದಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಪಕ್ಷದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಅಜಿತ್ ಅವರ ಪತ್ನಿ ಸುನೇತ್ರಾ ಪವಾರ್ ಉತ್ತರವಾಗಿದ್ದಾರೆ. ಹೌದು, ಪಕ್ಷದ ಉತ್ತರಾಧಿಕಾರಿಯಾನ್ನಾಗಿ ರಾಜ್ಯಸಭೆ ಸದಸ್ಯೆ ಸುನೇತ್ರಾ ಅವರನ್ನು ನೇಮಿಸಲಾಗಿದ್ದು, ಇದರ ಜೊತೆಗೆ ಉಪಮುಖ್ಯಮಂತ್ರಿಯನ್ನಾಗಿಯೂ ಅವರನ್ನೇ ಆಯ್ಕೆ ಮಾಡಲಾಗಿದೆ. ನಾಳೆ (ಜ.31) ರಂದು ಬೆಳಗ್ಗೆ 11 ಗಂಟೆಗೆ ನೂತಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

1963 ಅಕ್ಟೋಬರ್ 18 ರಂದು ಮಹಾರಾಷ್ಟ್ರದ ಧಾರಾಶಿವ್‌ನಲ್ಲಿ ಜನಿಸಿದ ಸುನೇತ್ರಾ ಅವರು, ಪ್ರಭಾವಿ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ಮಾಜಿ ರಾಜ್ಯ ಸಚಿವ ಪದ್ಮಸಿಂಹ ಪಾಟೀಲ್ ಅವರ ಸಹೋದರಿಯಾಗಿರುವ ಅವರು, 2024 ರಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರು ಬಾರಾಮತಿ ಕ್ಷೇತ್ರದಿಂದ ತಮ್ಮ ಸೊಸೆ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ, ಸುಮಾರು 1.5 ಲಕ್ಷ ಮತಗಳ ಅಂತರದಿಂದ ಸೋಲುಂಡಿದ್ದರು. ಬಳಿಕ, ಪ್ರಫುಲ್ ಪಟೇಲ್ ತೆರವುಗೊಳಿಸಿದ ಸ್ಥಾನಕ್ಕೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

Advertisement

ಇದನ್ನೂ ಓದಿ: KSRTC : ಸಾರಿಗೆ ಬಸ್ ಗಳಲ್ಲಿ ಗುಡ್ಕ, ತಂಬಾಕು ಜಾಹೀರಾತುಗಳಿಗೆ ನಿರ್ಬಂಧ

ಪರಿಸರ ಸಂರಕ್ಷಣೆಯಲ್ಲೂ ಅವರು ಸಕ್ರಿಯರಾಗಿರುವ ಇವರು, ಶಿಕ್ಷಣ ಕ್ಷೇತ್ರದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಕೈಗಾರಿಕಾ ವಲಯದಲ್ಲಿ ಬಾರಾಮತಿ ಟೆಕ್ಸ್‌ಟೈಲ್ ಕಂಪನಿಯ ಅಧ್ಯಕ್ಷೆಯಾಗಿರುವ ಇವರು, ಇದೀಗ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಿಮಾನ ಬುಧವಾರ ಪತನಗೊಂಡು ಅವರು ಮತ್ತು ವಿಮಾನದಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದ್ದರು. ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದಾಗ ವಿಮಾನವು ರಾಜ್ಯ ರಾಜಧಾನಿಯಿಂದ ಸುಮಾರು 254 ಕಿ.ಮೀ (159 ಮೈಲುಗಳು) ದೂರದಲ್ಲಿ ತೆರೆದ ಮೈದಾನದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತ್ತು.

ಎನ್‌ಸಿಪಿ ಉತ್ತರಾಧಿಕಾರಿಯಾನ್ನಾಗಿ ರಾಜ್ಯಸಭೆ ಸದಸ್ಯೆ ಸುನೇತ್ರಾ ಅವರನ್ನು ನೇಮಿಸಲಾಗಿದ್ದು, ಇದರ ಜೊತೆಗೆ ಉಪಮುಖ್ಯಮಂತ್ರಿಯನ್ನಾಗಿಯೂ ಅವರನ್ನೇ ಆಯ್ಕೆ ಮಾಡಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು