ಲಕ್ನೋ : ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಚಿರತೆ ದಾಳಿಯ ಪ್ರಕರಣದಲ್ಲಿ, ಮನೆಯೊಳಗೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ.
ಈ ದುರ್ಘಟನೆ ಕಟರ್ನಿಯಾಗಾಟ್ ವನ್ಯಜೀವಿ ಸಂರಕ್ಷಿತ ಪ್ರದೇಶದ ನಿಶಾಂಗಢ ಶ್ರೇಣಿಗೆ ಒಳಪಡುವ ಮುಖಿಯಾ ಫಾರ್ಮ್ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಮಾಹಿತಿಯಂತೆ, ಚಿರತೆ ಮನೆಯೊಳಗೆ ನುಗ್ಗಿ ಅನುಷ್ಕಾ ಎಂಬ ಬಾಲಕಿಯನ್ನು ಎತ್ತಿಕೊಂಡು ಸಮೀಪದ ಕಬ್ಬಿನ ತೋಟದತ್ತ ಎಳೆದೊಯ್ದಿದೆ. ಕುಟುಂಬಸ್ಥರ ಸಹಾಯ ಕೂಗು ಕೇಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೂಗಾಟ ನಡೆಸಿದಾಗ, ಚಿರತೆ ಬಾಲಕಿಯನ್ನು ಬಿಟ್ಟು ಕಬ್ಬಿನ ತೋಟದೊಳಗೆ ಪರಾರಿಯಾಗಿದೆ.

ಇದನ್ನೂ ಓದಿ : ರಬ್ಬರ್ ಬೆಳೆಗೆ ಬೆಂಬಲ ಬೆಲೆ ಘೋಷಿಸಿ: ಸರ್ಕಾರಕ್ಕೆ ಭಾಗೀರಥಿ ಮುರುಳ್ಯ ಒತ್ತಾಯ
ನಂತರ ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಕಬ್ಬಿನ ಹೊಲದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಅರಣ್ಯ ವಲಯಾಧಿಕಾರಿ ಸುರೇಂದ್ರ ಶ್ರೀವಾಸ್ತವ ಅವರು, ಘಟನೆಯ ನಂತರ ಪ್ರದೇಶದಲ್ಲಿ ನಿಗಾ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಲಕಿಗೆ ಕುತ್ತಿಗೆ ಹಾಗೂ ಮುಖ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

