Breaking News

ಪುತ್ತೂರು: ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ

ಪುತ್ತೂರು: ಬಹುನಿರೀಕ್ಷಿತ ಪುತ್ತೂರಿನ ನ್ಯಾಯಾಲಯ ಸಂಕೀರ್ಣ ಶನಿವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟನಾ ಕಾರ್ಯ ನೆರವೇರಿಸಿದರು.

ಇದನ್ನೂ ಓದಿ: Good news: ಕರ್ನಾಟದಲ್ಲಿ ಇದೆ 2 ಸಾವಿರ ಕೆಲಸ, ಇಂದೇ ಕೊನೇ ದಿನ

Advertisement

ಬರೋಬ್ಬರಿ 51.9 ಕೋಟಿ ರೂ. ವೆಚ್ಚದಲ್ಲಿ ಹೈಕೋರ್ಟ್ ಮಾದರಿಯ ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆಗೊಂಡಿತು. ಸುಮಾರು 170 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರಿನ ನ್ಯಾಯಾಲಯವು ಈಗ ಆನೆಮಜಲಿನಲ್ಲಿರುವ ಭವ್ಯ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ಪೊಲೀಸ್ ಗೌರವ ರಕ್ಷೆ ಸ್ವೀಕರಿಸಿ ಆಗಮಿಸಿದ ಅತಿಥಿಗಳು ನೂತನ ನ್ಯಾಯಾಲಯದ ಫಲಕ ಅನಾವರಣ ಮಾಡಿ, ಬಳಿಕ ರಿಬ್ಬನ್ ಕತ್ತರಿಸಿದರು. ಒಳಭಾಗದಲ್ಲಿ ಇಟ್ಟಿದ್ದ ದೀಪವನ್ನು ಬೆಳಗಿಸಿ ನ್ಯಾಯಾಲಯಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿರುವ ಹೈಕೋರ್ಟ್‌ ಕಟ್ಟಡದ ಮಾದರಿಯಲ್ಲೇ ಈ ಕಟ್ಟಡ ನಿರ್ಮಿಸಲಾಗಿದೆ. ಪೂರ್ತಿ ಕೆಂಪು ಬಣ್ಣದಿಂದ ಕೂಡಿದ್ದು, ಬಿಳಿ ಬಣ್ಣದ ಸಮ್ಮಿಶ್ರಣವಿದೆ. 4 ಮಹಡಿಗಳ ಕಟ್ಟಡದಲ್ಲಿ ಮೇಲಿನ 3 ಮಹಡಿಗಳಲ್ಲಿ ತಲಾ 4 ರಂತೆ ಒಟ್ಟು 12 ಕೋರ್ಟ್‌ ಹಾಲ್‌ಗಳಿವೆ. ಪಿ.ಪಿ.ಮತ್ತು ಎಪಿಪಿ ಹಾಲ್‌ಗಳು, 3 ಜೈಲ್‌ ಸೆಲ್‌ಗಳು, ಕಾನ್ಫರೆನ್ಸ್‌ ಕೊಠಡಿ, ದಾಖಲೆಗಳ ಕೊಠಡಿ, ಬ್ಯಾಂಕ್‌, ಅಂಚೆ ಕಚೇರಿ ಇದೆ. ಅಗ್ನಿಶಮನ ವ್ಯವಸ್ಥೆ, ಲಿಫ್ಟ್‌ ಮತ್ತಿತರ ಸೌಕರ್ಯಗಳಿವೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು