ಬೆಂಗಳೂರು: ಸೈಬರ್ ಅಪರಾಧಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ತಡೆ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಅತ್ಯಾಧುನಿಕ ಒಗ್ಗೂಡಿಸಿದ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಮುಂದಾಗಿದೆ. ಸೈಬರ್ ಕಮಾಂಡ್ ಯುನಿಟ್ (CCU) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಹೊಸ ಕೇಂದ್ರಕ್ಕೆ ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್ (K4C) ಎಂದು ಹೆಸರು ನೀಡಲು ಪ್ರಸ್ತಾವಿಸಲಾಗಿದೆ.
ಗೃಹ ಇಲಾಖೆ ಮೂಲಗಳ ಪ್ರಕಾರ, ಕೆ4ಸಿ ಕೇಂದ್ರದ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಣ್ಣ ಮಟ್ಟದ ‘ಮಿನಿ ಹಬ್‌ಗಳು’ ಕಾರ್ಯನಿರ್ವಹಿಸಲಿವೆ. ಕಳೆದ ವರ್ಷದ ಮಧ್ಯಭಾಗದಲ್ಲಿ ಸ್ಥಾಪನೆಯಾದ CCUನಲ್ಲಿ ಸೈಬರ್ ಕ್ರೈಂ, ಸೈಬರ್ ಸೆಕ್ಯೂರಿಟಿ ಹಾಗೂ ಮಾಹಿತಿ ಅಸ್ತವ್ಯಸ್ತತೆ ತಡೆ ಘಟಕ (IDTU) ಸೇರಿವೆ. ಆದರೆ, ಬದಲಾಗುತ್ತಿರುವ ಸೈಬರ್ ಅಪರಾಧಗಳ ಸ್ವರೂಪಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಅಗತ್ಯವಿರುವ ಆಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ. ಸದ್ಯಕ್ಕೆ CCUಗೆ ಸ್ವಂತ ಕಚೇರಿಯೂ ಇಲ್ಲ.

ಇದನ್ನೂ ಓದಿ : Government : 25 ಲಕ್ಷಕ್ಕೆ ವೈದ್ಯಕೀಯ ಸೀಟ್ ಮಾರಾಟ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ಈ ಹಿನ್ನೆಲೆಯಲ್ಲಿ, ಪ್ರತ್ಯೇಕ ಹಾಗೂ ಸುಸಜ್ಜಿತ ಕಮಾಂಡ್ ಸೆಂಟರ್ ಸ್ಥಾಪಿಸುವ ಜೊತೆಗೆ, ಆಂತರಿಕ ತಂತ್ರಜ್ಞಾನ ಅಭಿವೃದ್ಧಿ ಘಟಕ, ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ವಿಶೇಷ ಘಟಕ, ಹಾಗೂ ಕೌಶಲ್ಯಾಭಿವೃದ್ಧಿ ಘಟಕಗಳನ್ನು ಸೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಯೋಜನೆಯ ಅಂದಾಜು ವೆಚ್ಚ ಸುಮಾರು ₹400 ಕೋಟಿ ಆಗಿದ್ದು, ಮುಂದಿನ ಮೂರು ತಿಂಗಳೊಳಗೆ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ.
ಯೋಜನೆಯ ಮುಖ್ಯ ಅಂಶಗಳು ;
ತಜ್ಞರ ನೇಮಕ ಮತ್ತು ತರಬೇತಿ, ಎಐ ಆಧಾರಿತ ಇನೊವೇಷನ್ ಲ್ಯಾಬ್‌ಗಳ ಸ್ಥಾಪನೆ, 24×7 ಭದ್ರತಾ ಮತ್ತು ನೆಟ್ವರ್ಕ್ ಕಾರ್ಯಾಚರಣೆ ಕೇಂದ್ರ, 11 ವಿಶೇಷ ವಿಭಾಗಗಳಲ್ಲಿ 176 ತಜ್ಞರು ಕಾರ್ಯನಿರ್ವಹಿಸುವ ಗುಪ್ತಚರ ಆಧಾರಿತ ಹಬ್ 45 ಸಿಇಎನ್ (CEN) ಠಾಣೆಗಳಲ್ಲಿ 270 ಸಿಬ್ಬಂದಿಗೆ ಎಐ ನೆರವು, ಫಾರೆನ್ಸಿಕ್ ಸೌಲಭ್ಯಗಳಿರುವ ಜಿಲ್ಲಾ ಮಿನಿ ಹಬ್‌ಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪೋರ್ಟಲ್‌ಗಳ ಜೋಡಣೆ ಇದಲ್ಲದೆ, ಕರ್ನಾಟಕ-ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (K-CERT) ಅನ್ನು ಕೇಂದ್ರದೊಳಗೆ ಸೇರಿಸಿ, 14C ಹಾಗೂ CERT-In ಜೊತೆಗೆ ಸಮನ್ವಯ ಸಾಧಿಸುವ ಯೋಜನೆಯೂ ಇದೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

