ಸಿನೆಮಾ : ಜನವರಿ 27ರಂದು ಹಿನ್ನೆಲೆ ಗಾಯನದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ ಗಾಯಕ ಅರ್ಜಿತ್ ಸಿಂಗ್ ಅವರ ನಿರ್ಧಾರ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ವೃತ್ತಿಜೀವನದ ಶಿಖರದಲ್ಲಿರುವಾಗಲೇ ಅವರು ಈ ತೀರ್ಮಾನ ಕೈಗೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ನಿವೃತ್ತಿಯ ಬಳಿಕ ಬಿಡುಗಡೆಯಾಗುತ್ತಿರುವ ಅರ್ಜಿತ್ ಅವರ ಮೊದಲ ಹಾಡು ‘ಒ’ ರೋಮಿಯೋ’ ಚಿತ್ರದ ಪ್ರೇಮ ಗೀತೆ ‘ಇಶ್ಕ್ ಕಾ ಫೀವರ್’, ಈ ಹಾಡು ಫೆಬ್ರವರಿ 1ರಂದು ಬಿಡುಗಡೆ ಆಗಲಿದೆ. ರೊಮ್ಯಾಂಟಿಕ್ ಗೀತೆಯನ್ನು ಶಾಹಿದ್ ಕಪೂರ್ ಹಾಗೂ ತ್ರಿಪ್ತಿ ದಿಮ್ರಿ ಮೇಲೆ ಚಿತ್ರಿಸಲಾಗಿದೆ.
‘ಒ’ ರೋಮಿಯೋ’ ಚಿತ್ರವನ್ನು ಖ್ಯಾತ ನಿರ್ದೇಶಕ ವಿಷಾಲ್ ಭಾರದ್ವಾಜ್ ನಿರ್ದೇಶಿಸುತ್ತಿದ್ದು, ಇದು ಗ್ಯಾಂಗ್‌ಸ್ಟಾರ್ ಹುಸೇನ್ ಉಸ್ತಾರಾ ಮತ್ತು ಸಪ್ನಾ ದಿದಿ ಅವರ ಕಥೆಯನ್ನು ಆಧರಿಸಿದೆ. ಇತ್ತೀಚೆಗೆ ಹಾಡಿನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶುಕ್ರವಾರ ವಿಷಾಲ್ ಭಾರದ್ವಾಜ್ ಅವರು ಅರ್ಜಿತ್ ಜೊತೆಗಿನ ಬಿಹೈಂಡ್ ದಿ ಸೀನ್ಸ್ ವಿಡಿಯೋವನ್ನು ಹಂಚಿಕೊಂಡು, ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : BJP: 25 ಲಕ್ಷಕ್ಕೆ ವೈದ್ಯಕೀಯ ಸೀಟ್ ಮಾರಾಟ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ಮುಂದೆ ಏನು?
ಹತ್ತು ವರ್ಷಕ್ಕೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅರ್ಜಿತ್ ಸಿಂಗ್ ಇದೀಗ ನಿರ್ದೇಶನ ಕ್ಷೇತ್ರಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ವರದಿಗಳ ಪ್ರಕಾರ, ಅವರು ತಮ್ಮ ಮೊದಲ ನಿರ್ದೇಶನದ ಅರಣ್ಯ ಸಾಹಸ ಸಿನಿಮಾ ಚಿತ್ರೀಕರಣ ಆರಂಭಿಸಿದ್ದು, ಇದರಲ್ಲಿ ನಟ ನವಾಜುದ್ದೀನ್ ಸಿದ್ದೀಖಿ ಅವರ ಪುತ್ರಿ ಶೋರಾ ನಟನೆಯ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಶಾಂತಿನಿಕೇತನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಕಥೆಯನ್ನು ಅರ್ಜಿತ್ ಹಾಗೂ ಅವರ ಪತ್ನಿ ಕೋಯಲ್ ಸಿಂಗ್ ಬರಹ ಮಾಡಿದ್ದಾರೆ. ಇದರ ಜೊತೆಗೆ, ಪಶ್ಚಿಮ ಬಂಗಾಳದಲ್ಲಿ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಈ ಕುರಿತು ಅರ್ಜಿತ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಸಿನೆಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

