24 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ನೊವಾಕ್ ಜೊಕೊವಿಕ್ ವಿರುದ್ಧ 22 ವರ್ಷದ ಸ್ಪ್ಯಾನಿಷ್ ಹೀರೋ ಕಾರ್ಲೋಸ್ ಅಲ್ಕರಾಜ್ ಮೊದಲ ಸೆಟ್ ಸೋತರೂ ಮುಂದಿನ ಮೂರು ಸೆಟ್‌ಗಳಲ್ಲಿ 2-6, 6-2, 6-3, 7-5 ರಿಂದ ಸೋಲಿಸುವ ಮೂಲಕ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.
ಆಸ್ಟ್ರೇಲಿಯನ್ ಓಪನ್ ಹಾರ್ಡ್‌ಕೋರ್ಟ್‌ಗಳಲ್ಲಿ ಇದು ಕಾರ್ಲೋಸ್ ಅಲ್ಕರಾಜ್ ಅವರ ಮೊದಲ ಪ್ರಶಸ್ತಿಯಾಗಿದೆ. ಈ ಗೆಲುವಿನೊಂದಿಗೆ, ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಅತ್ಯಂತ ಕಿರಿಯ ಪುರುಷ ಆಟಗಾರ ಎಂಬ ದಾಖಲೆಯನ್ನು ಅಲ್ಕರಾಜ್ ಹೊಂದಿದ್ದಾರೆ.

ಇದನ್ನೂ ಓದಿ: WPL: ಯುಪಿ ವಾರಿಯರ್ಸ್ ಮಣಿಸಿ ಪ್ಲೇಆಫರ್‌ಗೆ ಲಗ್ಗೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್
ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ. 1 ಆಗಿರುವ ಅಲ್ಕರಾಜ್, ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಸಾಧಿಸಿದ ಹೊಸ ಯುಗದ ಆರನೇ ಆಟಗಾರರಾದರು. 21ನೇ ಶತಮಾನದಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಪೂರ್ಣಗೊಳಿಸಿದ್ದಾರೆ. 2016ರಲ್ಲಿ ಜೊಕೊವಿಕ್ ಈ ಸಾಧನೆ ಮಾಡಿದ್ದರು.
ಅವರಿಗಿಂತ ಮೊದಲು ರಾಫೆಲ್ ನಡಾಲ್ (2010) ಮತ್ತು ರೋಜರ್ ಫೆಡರರ್ (2009). 22ನೇ ವಯಸ್ಸಿನಲ್ಲಿ ಅಲ್ಕರಾಜ್ ಈ ಗಣ್ಯರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಅವರನ್ನು ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಇರಿಸುವ ದಾಖಲೆಯಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

