ಮುಂಬೈ: ಟಿ20 ವಿಶ್ವಕಪ್ಗೆ ಸಿದ್ಧತೆಯ ಅಂಗವಾಗಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ ಯುಎಸ್ಎ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ, ದೊಡ್ಡ ಮೊತ್ತ ಕಲೆಹಾಕಿ ಎದುರಾಳಿಗೆ ಕಠಿಣ ಸವಾಲು ನೀಡಿತು.
ಆರಂಭದಲ್ಲಿ ಪ್ರಿಯಾಂಶ್ ಆರ್ಯ ಮತ್ತು ನಾರಾಯಣ್ ಜಗದೀಸನ್ ತಂಡಕ್ಕೆ ವೇಗದ ಆರಂಭ ಒದಗಿಸಿದರು. ಪ್ರಿಯಾಂಶ್ ಔಟಾದ ಬಳಿಕ ಜಗದೀಸನ್ ಆಕ್ರಮಣಕಾರಿ ಆಟ ಮುಂದುವರಿಸಿ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು 105 ರನ್ಗಳ ಅದ್ಭುತ ಇನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ ಚುರುಕಿನ ಬ್ಯಾಟಿಂಗ್ ಮೂಲಕ 38 ರನ್ ಸೇರಿಸಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರು.

ಇದನ್ನೂ ಓದಿ: ಬಲೂಚಿಸ್ತಾನ ಪ್ರಾಂತ್ಯದ ಮೇಲೆ ಪಾಕ್ ಸೇನೆಯಿಂದ ದಾಳಿ; 177 ಉಗ್ರರ ಸಾವು
ನಾಯಕ ಆಯುಷ್ ಬದೋನಿ ಅಂತಿಮ ಓವರ್ಗಳಲ್ಲಿ ಸ್ಫೋಟಕ ಆಟವಾಡಿ ಅಜೇಯ 60 ರನ್ಗಳನ್ನು ದಾಖಲಿಸಿದರು. ಇದರೊಂದಿಗೆ ಭಾರತ ಎ 20 ಓವರ್ಗಳಲ್ಲಿ 238 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಯುಎಸ್ಎ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಆಂಡ್ರಿಸ್ ಗೌಸ್, ಸಂಜಯ್ ಕೃಷ್ಣಮೂರ್ತಿ ಮತ್ತು ಇತರರ ಪ್ರಯತ್ನಗಳಿದ್ದರೂ, ತಂಡ 19.4 ಓವರ್ಗಳಲ್ಲಿ 200 ರನ್ಗಳಿಗೆ ಆಲೌಟ್ ಆಯಿತು. ಪರಿಣಾಮ ಭಾರತ ಎ ತಂಡ 38 ರನ್ಗಳ ಜಯದೊಂದಿಗೆ ಮೇಲುಗೈ ಸಾಧಿಸಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

