Breaking News

ಮನೆಯ ಚಿನ್ನಾಭರಣಗಳನ್ನು ನೀಡಿ ಮೊಮೋಸ್‌ ತಿಂದ ಬಾಲಕ!

Boy gives gold jewellery from home to vendors to eat momos

ಏಳನೇ ತರಗತಿ ಓದುತ್ತಿರುವ ಬಾಲಕನೊಬ್ಬನ ಮೊಮೋಸ್ ತಿನ್ನುವ ಆಸೆಗೆ ಬಿದ್ದು ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವ್ಯಾಪಾರಸ್ಥನಿಗೆ ನೀಡಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಬೆಳಕಿಗೆ ಬಂದಿದೆ. ವಾರಣಾಸಿಯ ದೇವಸ್ಥಾನ ಪೂಜಾರಿಯಾದ ವಿಮ್ಲೇಶ್ ಮಿಶ್ರಾ ಅವರು ತಮ್ಮ ಮನೆಯಲ್ಲಿನ ಚಿನ್ನಾಭರಣ ಕಳವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಈ ಆಭರಣಗಳಲ್ಲಿ ತನ್ನ ಸಹೋದರಿಯ ಚಿನ್ನಾಭರಣಗಳೂ ಸೇರಿವೆ ಎಂದು ಉಲ್ಲೇಖಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಬಯಲಾಗಿರುವಂತೆ, ಬಾಲಕನು ಮೊಮೋಸ್ ತಿನ್ನುವ ಸಲುವಾಗಿ ಹಂತ ಹಂತವಾಗಿ ಚಿನ್ನಾಭರಣಗಳನ್ನು ಮೊಮೋಸ್ ಮಾರಾಟಗಾರರಿಗೆ ನೀಡಿದ್ದಾನೆ. “ಮಗ ಹೀಗೆ ಮಾಡುತ್ತಾನೆ ಅಂತ ನಾವು ಕನಸಲ್ಲೂ ಯೋಚಿಸಿರಲಿಲ್ಲ. ಮೊಮೋಸ್ ಕೊಡುತ್ತಾರೆ ಅಂತ ನಂಬಿ, ಅವನು ಚಿನ್ನ ಕೊಟ್ಟಿದ್ದಾನೆ ಎಂದು ಹೇಳಿದಾಗ ನಮಗೆ ಶಾಕ್‌ ಆಯ್ತು ಎಂದು ಪೋಷಕರು ಹೇಳಿದ್ದಾರೆ.

Advertisement

ಇದನ್ನೂ ಓದಿ: Shocking: ಮಗಳನ್ನೇ ಕೊಲೆ ಮಾಡಿದ ತಂದೆ!

ಮೊಮೋಸ್ ಮಾರಾಟಗಾರರು ಬಾಲಕನ ವಿಶ್ವಾಸ ಗಳಿಸಲು ಮೊದಲಿಗೆ ಉಚಿತವಾಗಿ ಮೊಮೋಸ್ ನೀಡಿದ್ದಾರೆ. ನಂತರ ಮನೆಯಲ್ಲಿನ ಆಭರಣಗಳನ್ನು ತಂದುಕೊಟ್ಟರೆ ಮೊಮೋಸ್ ಸಿಗುತ್ತವೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕನಿಂದ ಹೇಗೆ ಆಭರಣಗಳನ್ನು ಪಡೆದುಕೊಳ್ಳಲಾಗಿದೆ, ಮಾರಾಟಗಾರರ ಪಾತ್ರ ಏನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಚಿನ್ನಾಭರಣಗಳ ಮೌಲ್ಯ ಸುಮಾರು 85 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಪ್ರಕರಣ ಮಿಶ್ರಾ ಅವರ ಸಹೋದರಿ ತನ್ನ ಚಿನ್ನಾಭರಣಗಳನ್ನು ಕೇಳಿದಾಗ ಬೆಳಕಿಗೆ ಬಂದಿದೆ. ಅಲಮಾರಿ ಇಟ್ಟ ಜಾಗದಲ್ಲಿ ಚಿನ್ನಾಭರಣಗಳು ನಾಪತ್ತೆಯಾಗಿರುವುದನ್ನು ತಿಳಿದು ಮನೆ ಮಗನನ್ನು ಪ್ರಶ್ನಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಇದು ತುಂಬಾ ಆತಂಕಕಾರಿ ವಿಷಯವಾಗಿದ್ದು, ಪೋಷಕರು ಎಚ್ಚರಿಕೆಯಿಂದ ಇರಬೇಕಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು