ಚಿನ್ನದ ಗ್ರಾಹಕರಿಗೆ ಮತ್ತೆ ಶಾಕ್​​​ ನೀಡಿದ ಬಂಗಾರ: ಇಂದಿನ ಬೆಲೆ ಇಲ್ಲಿದೆ ನೋಡಿ

ಮಧ್ಯಪ್ರಾಚ್ಯದಲ್ಲಿ (ಅಮೆರಿಕ ಮತ್ತು ಇರಾನ್ ನಡುವೆ) ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು (ಫೆಬ್ರವರಿ 4, 2026) ಭಾರಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ ಕಂಡಿದ್ದು, ಇಂದು ಪ್ರತಿ ಕೆಜಿಗೆ 3,20,000 ರೂ. ತಲುಪಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ ಕೆಜಿಯ ಮೇಲೆ 40,000 ರೂ. ಹೆಚ್ಚಳವಾಗಿದೆ. ಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಚಿನ್ನದ ಬೆಲೆ (10 ಗ್ರಾಂ):

24 ಕ್ಯಾರೆಟ್ (ಅಪರಂಜಿ ಚಿನ್ನ): 1,60,530 ರೂ. (ಇಂದು 6,600 ರೂ. ಏರಿಕೆಯಾಗಿದೆ).

22 ಕ್ಯಾರೆಟ್ (ಆಭರಣ ಚಿನ್ನ): 1,47,150 ರೂ.(ಇಂದು 6,050 ರೂ. ಏರಿಕೆಯಾಗಿದೆ).

18 ಕ್ಯಾರೆಟ್: 1,20,400 ರೂ (ಇಂದು 4,950 ರೂ. ಏರಿಕೆಯಾಗಿದೆ).

ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಗರದಿಂದ ನಗರಕ್ಕೆ ಕೆಲವು ಕಾರಣಗಳಿಂದಾಗಿ ವ್ಯತ್ಯಾಸವಾಗುತ್ತವೆ. ರಾಜ್ಯ ಸರ್ಕಾರಗಳು ವಿಧಿಸುವ ವಿವಿಧ ತೆರಿಗೆ ದರಗಳಿಂದ ಈ ಬದಲಾವಣೆಗಳು ಆಗುತ್ತದೆ. ಚಿನ್ನವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ಸಾಗಿಸುವ ವೆಚ್ಚ ಕೂಡ ಇರುತ್ತದೆ. ತಿ ನಗರದ ಚಿನ್ನದ ವ್ಯಾಪಾರಿಗಳ ಸಂಘವು ಆ ದಿನದ ಮಾರುಕಟ್ಟೆ ಸ್ಥಿತಿಗತಿ ನೋಡಿ ಬೆಲೆಯನ್ನು ನಿರ್ಧರಿಸುತ್ತದೆ.

ಬೆಂಗಳೂರಿನ ಇಂದಿನ ಅಂದಾಜು ಬೆಲೆಗೆ ಹೋಲಿಸಿದರೆ, ಮೈಸೂರು, ಮಂಗಳೂರು ಅಥವಾ ಬೆಳಗಾವಿಯಂತಹ ನಗರಗಳಲ್ಲಿ ಸಣ್ಣ ಮಟ್ಟದ (10 ರೂ. ರಿಂದ 100 ರೂ. ರವರೆಗೆ) ವ್ಯತ್ಯಾಸವಿರಬಹುದು. ನೀವು ಜ್ಯುವೆಲ್ಲರಿ ಶಾಪ್‌ಗೆ ಹೋದಾಗ, ಈ ಮೂಲ ಬೆಲೆಯ ಜೊತೆಗೆ 3% GST ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಮೇಕಿಂಗ್ ಚಾರ್ಜ್‌ಗಳು (ಮಜೂರಿ) ಸೇರ್ಪಡೆಯಾಗುತ್ತವೆ. ಹಾಗಾಗಿ ಅಂತಿಮ ಬಿಲ್ ನೀವು ನೋಡುವ ಮಾರುಕಟ್ಟೆ ಬೆಲೆಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಭಾರತ ಯುರೋಪ್ ವ್ಯಾಪಾರ ಒಪ್ಪಂದ: ಪಾಕಿಸ್ತಾನಕ್ಕೆ ಸಂಕಷ್ಟ

24 ಕ್ಯಾರೆಟ್ ಚಿನ್ನದ ಬೆಲೆ

24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆಯು 16,053 ರೂ. ಆಗಿದೆ.

10 ಗ್ರಾಂನ 24 ಕ್ಯಾರೆಟ್‌ನ ಚಿನ್ನದ ಬೆಲೆಯು 1,60,530 ರೂ. ಆಗಿದೆ.

24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 660 ರೂಪಾಯಿ ಹಾಗೂ 10 ಗ್ರಾಂನ ಮೇಲೆ 6,600 ರೂಪಾಯಿ ಭರ್ಜರಿ ಹೆಚ್ಚಳವಾಗಿದೆ.

22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,715 ರೂ.

10 ಗ್ರಾಂನ ಚಿನ್ನದ ಬೆಲೆಯು 1,47,150 ರೂ. ಇದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು