Breaking News

ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಜತೆಗೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ ವ್ಯಕ್ತಿಯ ಕೊಲೆ

ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಮತ್ತು ಸುಚಿತ್ರಾ ಎಂಬ ಮಹಿಳೆಯ ನಡುವೆ ಅಕ್ರಮ ಸಂಬಂಧದ ಬಗ್ಗೆ ಇದೀಗ ಭಾರೀ ಸುದ್ದಿಯಾಗುತ್ತಿದೆ. ಸುಚಿತ್ರಾ ಅವರ ಮಗಳಿಗೆ ಈ ವಿಚಾರ ತಿಳಿದು, ಆಕೆ ತನ್ನ ತಂದೆ ಮಹೇಶ್ ನಾಯ್ಕ ಅವರಿಗೆ ವಿಷಯ ತಿಳಿಸಿದ್ದಾಳೆ. ಈ ಸಂಬಂಧ ಮಹೇಶ್ ನಾಯ್ಕ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಮೇಲೆ ದೂರು ನೀಡಿದ ಕಾರಣ, ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಇತರ ಸಹಚರರು ಮಹೇಶ್ ನಾಯ್ಕ ಮತ್ತು ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡಿದ್ದ ವಸಂತ್ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಕಮಲಾಕರ ಭಟ್ ಗುರೂಜಿ ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರನ್ನು ಶಿವಮೊಗ್ಗದಲ್ಲಿ ಮತ್ತು ನಾಲ್ವರನ್ನು ಸಿದ್ದಾಪುರದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಸುಚಿತ್ರಾ (A1), ಲೋಕನಾಥ ಚೌಡಪ್ಪ ನಾಯ್ಕ್ (A2) ಮತ್ತು ಕಮಲಾಕರ ಭಟ್ (A4) ರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: ಬೆಂಗಳೂರು: 18 ಕೋಟಿ ಬೆಲೆಯ ಚಿನ್ನ ಕದ್ದ ಕಳ್ಳರ ಭೇಟೆಗೆ ಇಳಿದ ಖಾಕಿ ಪಡೆ

ಸುಚಿತ್ರಾ ಎಂಬಾಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಈಕೆ ಕಳೆದ ಕೆಲವು ಸಮಯದಿಂದ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಮೊದಲು ಗಮನಿಸಿದ ಸುಚಿತ್ರಾ ಮಗಳು, ತನ್ನ ತಂದೆ ಮಹೇಶ್ ನಾಯ್ಕ ಅವರಿಗೆ ವಿಷಯ ತಿಳಿಸಿದ್ದಾಳೆ. ನಾನು ಮತ್ತೆ ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ತಾಯಿ ಹಾಗೂ ಗುರೂಜಿ ಬೇರೆ ರೂಂನಲ್ಲಿ ಮಲಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸುಚಿತ್ರಾ ಮಗಳು ತಂದೆ ಮಹೇಶ್​​ಗೆ ತಿಳಿಸಿದ್ದಳು. ಅಲ್ಲದೆ ತಾಯಿ ತನಗೆ ಹಿಂಸೆ ನೀಡುತ್ತಿದ್ದು, ಪ್ಲೀಸ್​​ ಅಪ್ಪ ನನ್ನನ್ನು ಕರೆದುಕೊಂಡು ಹೋಗು ಎಂದು ಮೆಸೇಜ್​​ ಮಾಡಿದ್ದಳು ಎಂದು ಮಗಳು ಹೇಳಿದ್ದಾಳೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು