Breaking News

ರಾತ್ರೋರಾತ್ರಿ ಉಡುಪಿ ಯುವಕನಿಗೆ ಒಲಿದ ಅದೃಷ್ಟ: ಅಬುದಾಬಿ ಲಾಟರಿಯಲ್ಲಿ 49 ಕೋಟಿ ರೂ. ಪಡೆದ ಶಂತನು

ಉಡುಪಿ ಮೂಲದ ಯುವಕನಿಗೆ ಅಬುದಾಬಿಯ ಲಕ್ಕಿ ಡ್ರಾನಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ಲಾಟರಿ ಹೊಡೆದ ವಿಷಯ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಉಡುಪಿ ಜಿಲ್ಲೆಯ ಉದ್ಯಾವರದ ಶಂತನು ಶೆಟ್ಟಿಗಾರ್ (33 ವರ್ಷ) ಎಂಬುವವರಿಗೆ ಈ ಅದೃಷ್ಟ ಒಳಿದಿದೆ. ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ (Retail Sales) ವಿಭಾಗದಲ್ಲಿ ಕೆಲಸ ಮಾಡುತ್ತಿದ್​ದ ಶಂತನು ಅವರಿಗೆ ಅಬುದಾಬಿಯ ಪ್ರಸಿದ್ಧ ‘ಬಿಗ್ ಟಿಕೆಟ್’ (Big Ticket) ಲಕ್ಕಿ ಡ್ರಾ ಆಗಿದೆ.

ಜನವರಿ 20ರಂದು 305810 ಸಂಖ್ಯೆಯ ಟಿಕೆಟ್ ಖರೀದಿಸಿದ್ದರು. ಫೆಬ್ರವರಿ 3ರಂದು ನಡೆದ ಡ್ರಾನಲ್ಲಿ ಇವರಿಗೆ ಪ್ರಥಮ ಬಹುಮಾನ ಬಂದಿದೆ. 20 ಮಿಲಿಯನ್ ದಿರಮ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 49 ಕೋಟಿ ರೂಪಾಯಿ. ವಿಶೇಷವೆಂದರೆ, ಶಂತನು ಅವರು ಈ ಟಿಕೆಟ್ ಅನ್ನು ಒಬ್ಬರೇ ಖರೀದಿಸಿರಲಿಲ್ಲ. ತಮ್ಮ ಸ್ನೇಹಿತನೊಂದಿಗೆ ಸೇರಿ ಜಂಟಿಯಾಗಿ ಹಣ ಹೂಡಿ ಖರೀದಿಸಿದ್ದರು. ಆದ್ದರಿಂದ, ಈ ಭಾರಿ ಮೊತ್ತವನ್ನು ಇಬ್ಬರೂ ಸಮನಾಗಿ (ತಲಾ 24.5 ಕೋಟಿ ರೂ.) ಹಂಚಿಕೊಳ್ಳಲಿದ್ದಾರೆ.

Advertisement

ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಬೋಟ್‌ ಆಂಬುಲೆನ್ಸ್‌ ಸೇವೆ ಆರಂಭಸಿದ ಉಳ್ಳಾಲ ಮೀನುಗಾರರು

ಕಷ್ಟಪಟ್ಟು ದುಡಿಯುತ್ತಿದ್ದ ಸಾಮಾನ್ಯ ಉದ್ಯೋಗಿಗೆ ಒಂದೇ ರಾತ್ರಿಯಲ್ಲಿ ಇಷ್ಟು ದೊಡ್ಡ ಮೊತ್ತದ ಅದೃಷ್ಟ ಒಲಿದಿರುವುದು ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು