Breaking News

WPL: ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಆರ್ಸಿಬಿ

ವಡೋದರ: ಕಿಕ್ಕಿರಿದು ಸೇರಿದ ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಆರ್ಸಿಬಿ ಮಹಿಳೆಯರ ತಂಡ ದಾಖಲೆ ಮೊತ್ತವನ್ನು ಚೇಸ್ ಮಾಡಿ ಎರಡನೇ ಬಾರಿಗೆ ಡಬ್ಲುಪಿಎಲ್ ಟ್ರೋಫಿಗೆ ಮುತ್ತಿಕ್ಕಿತು.

ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರ್ಸಿಬಿ ತಂಡ ದಾಖಲೆಯ ಚೇಸ್ ಮಾಡಿ ಟ್ರೋಫಿಯನ್ನು ಎತ್ತಿ ಹಿಡಿಯಿತು.

Advertisement

ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ಬಿರುಸಿನ ಆಟಕ್ಕೆ ಮೊರೆ ಹೋದ ಡೆಲ್ಲಿ ಆಟಗಾರ್ತಿಯರು ಸತತ ಬೌಂಡರಿಗಳನ್ನು ಬಾರಿಸುತ್ತಾ ಆರ್ಸಿಬಿ ಬೌಲರ್‌ಗಳನ್ನು ಕಾಡಿದರು.

ನಾಯಕಿ ಜೆಮಿಮಾ ರೋಡ್ರಿಗಸ್ 37 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 57 ರನ್, ಲಾರಾ ವೂಲ್ಡ್ವರ್ಟ್ 25 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 44, ಲಿಜಿ ಲೀ 30 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ನೊಂದಿಗೆ 37 ರನ್, ಶಿನೇಲಿ ಹೆನ್ರಿ 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ನೊಂದಿಗೆ ಅಜೇಯ 35 ರನ್ ಮತ್ತು ಶಫಾಲಿ ವರ್ಮಾ 20 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ಸಹಕಿರಿಸಿದರು.

ಇದನ್ನೂ ಓದಿ: T20 Worldcup: ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ

ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಆರ್‌ಸಿಬಿ ಪರ ಸಯಾಲಿ ಸತ್ಗಾರೆ, ಅರುಂಧತಿ ರೆಡ್ಡಿ ಮತ್ತು ನಡಿನಿ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.

ದಾಖಲೆಯ ಮೊತ್ತವನ್ನು ಚೇಸಿಂಗ್ ಆರಂಭಿಸಿದ ಆರ್ಸಿಬಿಗೆ ಶಿನೇಲಿ ಹೆನ್ರಿ ಆಘಾತ ನೀಡಿದರು. ಗ್ರೇಸ್ ಹ್ಯಾರಿಸ್ ವಿಕೆಟ್ ಪಡೆದು ಒತ್ತಡ ಹೇರಿದರು.

ನಂತರ ಜೊತೆಯಾದ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್ 92 ಎಸೆತಗಳಲ್ಲಿ 165 ರನ್‌ಗಳ ಜೊತೆಯಾಟ ಸಂಘಟಿಸಿದರು. ಕೊನೆಯಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ರಾಧಾ ಯಾದವ್ ಗೆಲುವಿನ ರನ್ ಬಾರಿಸಿ ತಂಡಕ್ಕೆ ನೆರವಾದರು.

ಆರ್ಸಿಬಿ ಪರ ಸ್ಮೃತಿ ಮಂದಾನ 41 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ನೊಂದಿಗೆ 87 ರನ್ ಗಳಿಸಿದರು‌. ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 79, ರಾಧಾ ಯಾದವ್ ಅಜೇಯ 12, ಗ್ರೇಸ್ ಹ್ಯಾರಿಸ್ 9, ನಡಿನಿ ಡಿ ಕ್ಲರ್ಕ್ 7_ ರಿಚಾ ಘೋಷ್ 6 ರನ್ ಗಳಿಸಿದರು.

ಡೆಲ್ಲಿ ಪರ ಶಿನೇಲಿ ಹೆನ್ರಿ 2, ನಂದಿನಿ ಶರ್ಮ ಮತ್ತು ಮಿನ್ನು ಮಣಿ ತಲಾ ಒಂದು ವಿಕೆಟ್ ಪಡೆದರು.

ಇದರೊಂದಿಗೆ ನಾಲ್ಕು ಆವೃತ್ತಿಯ ಡಬ್ಲುಪಿಎಲ್ ನಲ್ಲಿ ಆರ್ಸಿಬಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು