Breaking News

“ಶಾದಿ ಡಾಟ್ ಕಾಮ್ ನಿಂದ ನಾವು ಏನು ಮಾಡಬೇಕು?”: ಇಂತಹ ವೇದಿಕೆಯ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​​​ ಅಸಮಾಧಾನ

ದೆಹಲಿ, ಫೆ.: ಸುಪ್ರೀಂ ಕೋರ್ಟ್ ಫೆಬ್ರವರಿ 3, 2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾದಿ.ಕಾಮ್ (Shaadi.com) ಸಂಸ್ಥಾಪಕ ಅನುಪಮ್ ಮಿತ್ತಲ್ ಅವರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಹೈದರಾಬಾದ್‌ನ ಮಹಿಳಾ ವೈದ್ಯೆಯೊಬ್ಬರು ಶಾದಿ.ಕಾಮ್ ಮೂಲಕ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದರು. ಆ ವ್ಯಕ್ತಿ ತನ್ನದು ಶ್ರೀಮಂತ ಕುಟುಂಬ ಎಂದು ಸುಳ್ಳು ಹೇಳಿ, ಮದುವೆಯಾಗುವುದಾಗಿ ನಂಬಿಸಿ ಸುಮಾರು 11 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದ. ಅಲ್ಲದೆ, ಹಣ ವಾಪಸ್ ಕೇಳಿದಾಗ ಆಕೆಯ ಫೋಟೋಗಳನ್ನು ಮಾರ್ಫ್ ಮಾಡಿ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಶಾದಿ.ಕಾಮ್ ಸರಿಯಾದ ಪರಿಶೀಲನೆ ನಡೆಸಿಲ್ಲ ಎಂದು ಅನುಪಮ್ ಮಿತ್ತಲ್ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದರು.

ಇಂತಹ ವೇದಿಕೆಗಳು ಸೈಬರ್ ಅಪರಾಧಿಗಳಿಗೆ ಸುಲಭವಾಗಿ ಕೆಲಸ ಮಾಡಲು ದಾರಿ ಮಾಡಿಕೊಡುತ್ತಿವೆ” ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಈ ಹಿಂದೆ ತೆಲಂಗಾಣ ಹೈಕೋರ್ಟ್ ಮಿತ್ತಲ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಈ ಪ್ರಕರಣದ ಕಾನೂನು ಅಂಶಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ಆ ಆದೇಶವನ್ನು ರದ್ದುಗೊಳಿಸಿತು.

Advertisement

ಇದನ್ನೂ ಓದಿ: ‘ಹನಿಮೂನ್ ಮರ್ಡರ್ 2.0’: ಪ್ರೀತಿಗಾಗಿ ಸಾಲ ಮಾಡಿ ಪತಿಯನ್ನು ಕೊಲೆ ಮಾಡಿಸಿದ ಪತ್ನಿ

ಈ ಪ್ರಕರಣವನ್ನು ಪುನಃ ವಿಚಾರಣೆ ನಡೆಸಿ, ಶಾದಿ.ಕಾಮ್ ಕೇವಲ ‘ಮಧ್ಯವರ್ತಿ’ (Intermediary) ಆಗಿ ಕೆಲಸ ಮಾಡಿದೆಯೇ ಅಥವಾ ವಂಚನೆಗೆ ಪರೋಕ್ಷವಾಗಿ ಕಾರಣವಾಗಿದೆಯೇ ಎಂಬುದನ್ನು ನಿರ್ಧರಿಸುವಂತೆ ಹೈಕೋರ್ಟ್‌ಗೆ ಸೂಚಿಸಿದೆ. ಅನುಪಮ್ ಮಿತ್ತಲ್ ಅವರಿಗೆ ಮುಂದಿನ 8 ವಾರಗಳ ಕಾಲ ಬಂಧನದಿಂದ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ.ಈ ಪ್ರಕರಣದಲ್ಲಿ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (Safe Harbour) ಅಡಿಯಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ಗಳು ರಕ್ಷಣೆ ಪಡೆಯಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. “ಮದುವೆ ಮಾಡಿಸುವುದು ನಮ್ಮ ಕೆಲಸ, ಆದರೆ ವಂಚನೆ ನಡೆದರೆ ನಾವು ಜವಾಬ್ದಾರರಲ್ಲ” ಎಂಬುದು ಕಂಪನಿಯ ವಾದವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು