ರಾಜಕೀಯದಲ್ಲಿ ಮಹಿಳೆಯರು ಸೈಡ್-ಡಿಶ್: ಮೋಟಮ್ಮ ಹೇಳಿಕೆಗೆ ಬಿಜೆಪಿ ಆಕ್ರೋಶ

ಮಂಗಳೂರು, ಫೆ.6: ಕರ್ನಾಟಕದ ಕಾಂಗ್ರೆಸ್ ನಾಯಕಿ ಸಿ. ಮೋಟಮ್ಮ ಅವರು ರಾಜಕೀಯದಲ್ಲಿ ಮಹಿಳೆಯರ ಮತ್ತು ಗ್ಲಾಮರ್ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ಇದೀಗ ಈ ವಿಚಾರವಾಗಿ ಬಿಜೆಪಿ ಮೋಟಮ್ಮ ಅವರನ್ನು ಟೀಕಿಸಿದೆ. ರಾಜಕೀಯದಲ್ಲಿ, ಮಹಿಳೆಯರು ತಮ್ಮನ್ನು ತಾವು ಗ್ಲಾಮರಸ್ ಆಗಿ ತೋರಿಸಿಕೊಳ್ಳಲು ಬಯಸುತ್ತಾರೆ, ಇದರಿಂದ ನಾಯಕರು ಗುರುತಿಸುತ್ತಾರೆ. ಜತೆಗೆ ಅವರು ನಾಯಕರಿಗೆ ವಿಧೇಯತೆಯನ್ನು ತೋರಿಸುತ್ತಾರೆ ಇಂದು ರಾಜಕೀಯದಲ್ಲಿ ಸಾಮಾನ್ಯ ಎಂದು ಮಂಗಳೂರಿನಲ್ಲಿ ನಡೆದ ಮಹಿಳಾ ಸಾಧಕರನ್ನು ಗುರುತಿಸುವ ಕಾರ್ಯಕ್ರಮವಾದ ಮಹಿಳಾ ವೈಭವ ಕಾರ್ಯಕ್ರಮದಲ್ಲಿ ಮೋಟಮ್ಮ ಹೇಳಿದ್ದಾರೆ.

ಮಹಿಳೆಯರು ಈ ರೀತಿಯ ಮನಸ್ಸಿಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ರಾಜಕೀಯದಲ್ಲಿ ನಿರ್ಧಾರ ತೆಗೆದಿಕೊಳ್ಳುವ ಅಧಿಕಾರ ಮಹಿಳೆಯರಿಗೂ ಇದೆ ಎಂದು ಬಿಜೆಪಿ ಹೇಳಿದೆ. ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಮಹಿಳೆಯರನ್ನು ಕೇವಲ ಒಂದು ವಸ್ತುವಿನಂತೆ ನೋಡುವುದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ ಎಂದು ಬಿಜೆಪಿ ಹೇಳಿದೆ. ಇನ್ನು ಮಹಿಳೆಯರನ್ನು ಇಂತಹ ಕೀಳುಮಟ್ಟದ ಪದಗಳಿಂದ ಸಂಬೋಧಿಸಿರುವುದಕ್ಕೆ ಸಾರ್ವಜನಿಕರು ಮತ್ತು ಮಹಿಳಾ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

Advertisement

ಇದನ್ನೂ ಓದಿ: ಗ್ರಾಮ, ತಾಲ್ಲೂಕು, ಪಂಚಾಯತ್ ಚುನಾವಣೆಗಳಲ್ಲಿ ಇವಿಎಂ ಇಲ್ಲ: ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ

ಈ ಹಿಂದೆಯೂ ಕಾಂಗ್ರೆಸ್​​​​​​ ಕೀಳುಮಟ್ಟದ ಪದಗಳಿಂದ ಹೇಳಿಕೆಯನ್ನು ನೀಡಿದೆ ಎಂದು ಬಿಜೆಪಿ ಆರ್.ವಿ. ದೇಶಪಾಂಡೆ ಅವರ ಉದಾಹರಣೆಯನ್ನು ನೀಡಿದೆ. ಮಹಿಳಾ ಪತ್ರಕರ್ತೆಯೊಬ್ಬರು ಆಸ್ಪತ್ರೆ ಸೌಲಭ್ಯದ ಬಗ್ಗೆ ಕೇಳಿದಾಗ, “ನಿಮ್ಮ ಡೆಲಿವರಿ (ಹೆರಿಗೆ) ನಾನೇ ಮಾಡಿಸುತ್ತೇನೆ” ಎಂಬ ಅರ್ಥದಲ್ಲಿ ಮಾತನಾಡಿದ್ದು ವಿವಾದವಾಗಿತ್ತು. ಗರ್ಭಿಣಿ ಮಹಿಳಾ ಅಧಿಕಾರಿಯೊಬ್ಬರು ಸಭೆಗೆ ಬಾರದಿದ್ದಾಗ, “ಗರ್ಭಿಣಿ ಇರುವುದು ಸಂಬಳ ಪಡೆಯಲು ಒಂದು ನೆಪ” ಎಂಬ ರೀತಿಯಲ್ಲಿ ಶಿವಗಂಗಾ ಬಸವರಾಜ್ ಕೂಡ ಹೇಳಿಕೆಯನ್ನು ನೀಡಿದರು. ಇದರ ನಂತರ ಶಮನೂರು ಶಿವಶಂಕರಪ್ಪ : ಮಹಿಳೆಯರು “ಅಡುಗೆ ಮನೆಗೆ ಸೀಮಿತ” ಎಂಬ ಹೇಳಿಕೆಯನ್ನು ನೀಡಿ ಟೀಕೆಗೆ ಗುರಿಯಾಗಿದ್ದರು.

Advertisement

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು