Breaking News

ಚೆನ್ನೈ: H5N1 ವೈರಸ್ ಪತ್ತೆ, ಸಾವಿರಾರು ಕಾಗೆಗಳ ಮಾರಣಹೋಮ

ಚೆನ್ನೈ: ಚೆನ್ನೈಯಾದ್ಯಂತ ಹಕ್ಕಿ ಜ್ವರ ತಾರಕಕ್ಕೇರಿದೆ. H5N1 ವೈರಸ್ ಪತ್ತೆಯಾಗಿದ್ದು ನಗರದಾದ್ಯಂತ ಕಾಗೆಗಳು ಸಾವನ್ನಪ್ಪುತ್ತಿವೆ.

ಇದುವರಗೆ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯದಾದ್ಯಂತ ಸರ್ಕಾರ ‘ಹೈ ಅಲರ್ಟ್‌’ ಘೋಷಿಸಿದೆ.

Advertisement

ಇದನ್ನೂ ಓದಿರಾಜಕೀಯದಲ್ಲಿ ಮಹಿಳೆಯರು ಸೈಡ್-ಡಿಶ್: ಮೋಟಮ್ಮ ಹೇಳಿಕೆಗೆ ಬಿಜೆಪಿ ಆಕ್ರೋಶ

ಕಾಗೆಗಳು ಸತ್ತಿರುವುದು ಕಂಡುಬಂದಿದ್ದು, ಪ್ರಯೋಗಾಲಯ ಪರೀಕ್ಷೆಯಿಂದ H5N1 ವೈರಸ್ ಪತ್ತೆಯಾಗಿರುವುದನ್ನು ದೃಢಪಡಿಸಿವೆ. ಇದು ಈ ಪ್ರದೇಶದಲ್ಲಿ ಹಕ್ಕಿ ಜ್ವರ ಹರಡುವಿಕೆಯ ಸೂಚನೆಯಾಗಿದೆ. ಆರೋಗ್ಯ ಅಧಿಕಾರಿಗಳು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಜ್ಜಾಗುತ್ತಿರುವುದರಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಸಾರ್ವಜನಿಕರು ಸತ್ತಿರುವ ಕಾಗೆಗಳನ್ನು ಮುಟ್ಟುವುದಾಗಲಿ ಅಥವಾ ಅವುಗಳನ್ನು ದಹನ ಮಾಡುವುದಾಗಲಿ ಮಾಡಬಾರದೆಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.

ಚೆನ್ನೈನಲ್ಲಿ ಕಾಗೆ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಪಶುಸಂಗೋಪನಾ ಸಚಿವಾಲಯ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತಕ್ಷಣವೇ ಸ್ಥಳದ ಪರಿಶೀಲನೆ ನಡೆಸಿ ಹಕ್ಕಿ ಜ್ವರ ಹೆರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದೆ.

ಏನಿದು H5N1?

H5N1 ಎಂಬುದು Influenza A ವೈರಸ್‌ನ ಅಧಿಕ ರೋಗಕಾರಕ ಸೋಂಕು, ಇದು ಆರಂಭಿಕವಾಗಿ ಪಕ್ಷಿಗಳಿಗೆ, ವಿಶೇಷವಾಗಿ ಕೋಳಿ ಮತ್ತು ಪಕ್ಷಿಗಳಿಗೆ ಸೋಂಕು ಹರಡುತ್ತದೆ. ಇದನ್ನು ಸಾಮಾನ್ಯವಾಗಿ “ಹಕ್ಕಿ ಜ್ವರ” ಎಂದು ಕರೆಯಲಾಗುತ್ತದೆ. ಈ ಎಚ್’ 5ಎನ್1 ಸೋಂಕು ಪಕ್ಷಿ ಸಂಕುಲಕ್ಕೆ ಶೀಘ್ರವಾಗಿ ಹರಡುತ್ತದೆ. ಈ ಸೋಂಕು ತಗುಲಿದ ಹಕ್ಕಿಗಳು ಅನಾರೋಗ್ಯಕ್ಕೆ ಒಳಗಾಗಿ, ಸಾವನ್ನಪ್ಪುತ್ತವೆ.

ಎಚ್ 5ಎನ್1 ಸೋಂಕು ಮುಖ್ಯವಾಗಿ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೊಮ್ಮೆ ಇದು ವಿರಳವಾಗಿ ಮನುಷ್ಯನ ಮೇಲೂ ಪರಿಣಾಮ ಬೀರುತ್ತದೆ. ಈ ಸೋಂಕು ಮನುಷ್ಯನ ಮೇಲೆ ಪರಿಣಾಮ ಬೀರುವುದು ವಿರಳವಾದರು ಕೂಡ ಇದು ಗಂಭೀರ ಸ್ವರೂಪದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಹಕ್ಕಿ ಜ್ವರ ಹರಡದಂತೆ ಸೂಕ್ಷ್ಮವಾಗಿ ನಿಗಾವಹಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು