ಬಂಟ್ವಾಳ: ಮಾಣಿಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಮಹಿಳಾ ಬಂಧುತ್ವ ವೇದಿಕೆ, ಚಿತ್ತಾರ ಮಹಿಳಾ ಮಂಡಳಿ ಹಾಗೂ ಸಾವಿತ್ರಿಬಾಯಿ ಬಾ ಫುಲೆ ಮಹಿಳಾ ಕೌಶಲ್ಯ ಕೇಂದ್ರದ ಸಹಾಭಾಗಿತ್ವದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಪೂರ್ವಚಾರಣೆ ಕಾರ್ಯಕ್ರಮ ಜ.೨ ರಂದು ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ದ.ಕ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ ಅವರು ಸಾವಿತ್ರಿಬಾಯಿ ಬಾ ಫುಲೆರವರ ಸಾಧನೆಯ ಕುರಿತು ಮಾತನಾಡುತ್ತಾ ಮಹಿಳೆಯರಿಗೆ ಸ್ಪೂರ್ತಿ ತುಂಬಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಮತಾಜ್ ಅವರು ಮಹಿಳಾ ಶಿಕ್ಷಣ ಮತ್ತು ಇಲಾಖೆಯ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ: ಉಡುಪಿ ಅಪಘಾತ: ಸುಬ್ರಹ್ಮಣ್ಯದ ಯುವಕ ಮೃತ್ಯು
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜ್ಯೋತಿರಾಜ್‌ರವರು ತಮ್ಮ ಸಂಸ್ಥೆ ವತಿಯಿಂದ ಮಹಿಳೆಯರಿಗೆ ನೀಡಲಾಗುತ್ತಿರುವ ತರಬೇತಿ ಕುರಿತು ವಿವರಿಸಿದರು.

ಸಂಪನ್ಮೂಲ ವ್ಯಕ್ತಿ ರೋಷನ್‌ರವರು ಸಾವಿತ್ರಿಬಾಯಿ ಫುಲೆರವರ ಜನುಮದಿನದಿಂದ ಅವರ ಅಂತಿಮ ದಿನಗಳವರೆಗಿನ ಎಲ್ಲಾ ಸಾಧನೆಗಳ ಬಗ್ಗೆ ತಿಳಿಸಿದರು. ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರು ಮಹಿಳಾ ಶಿಕ್ಷಣದ ಮಹತ್ವದ ಕುರಿತು ತಿಳಿಸಿದರು.
ಇದನ್ನೂ ಓದಿ: ಕ್ರಿಶ್ಚಿಯನ್ ವ್ಯಕ್ತಿಯ ಜೀವ ಉಳಿಸಲು ಅಯ್ಯಪ್ಪ ಮಾಲಾಧಾರಿಗಳ ಅವಿರತ ಶ್ರಮ, ಆದರೆ..
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ, ಪಂಚಾಯತ್ ಸದಸ್ಯರು, ಪಡಿ ಸಂಸ್ಥೆಯ ಪ್ರೇಮ ಡಿ ಸೋಜಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ ಉಪಸ್ಥಿತರಿದ್ದರು. ತಾಲೂಕು ನಿರ್ವಹಣಾ ಘಟಕದ ಸಿಬ್ಬಂದಿಗಳು, ಒಕ್ಕೂಟದ ಸಿಬ್ಬಂದಿಗಳು ಹಾಗೂ ಒಕ್ಕೂಟದ ಸದಸ್ಯರು, ಸಂಘದ ಸದಸ್ಯರು ಪಾಲ್ಗೊಂಡಿದ್ದರು.

