Breaking News

U-19 Worldcup: ವೈಭವ್ ಆರ್ಭಟಕ್ಕೆ ದಾಖಲೆಗಳು ಧೂಳಿಪಟ, ಭಾರತಕ್ಕೆ ವಿಶ್ವಕಪ್ ಕಿರೀಟ

ಹರಾರೆ: ಭಾರತದ ಅಂಡರ್ 19 ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವಿನೊಂದಿಗೆ 6 ನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಿತು.

ಇಲ್ಲಿನ ಹರಾರೆ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೆನ್ಸೇಶನ್ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿಂದ ಭಾರತ 411 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

Advertisement

ಇದನ್ನೂ ಓದಿ: ಉಡುಪಿ: 49 ಕೋಟಿ ಲಾಟರಿ ಗೆದ್ದ ಶಂತನು ಮನೆಯಲ್ಲಿ ಸಂತಸ

ಫೈನಲ್ಸ್ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಹಿಂದಿನ ಪಂದ್ಯದ ಶತಕವೀರ ಆರನ್ ಜಾರ್ಜ್ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಜೊತೆಯಾದ ನಾಯಕ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಬಿರುಸಿನ ಆಟ ಪ್ರದರ್ಶಿಸಿ ಎರಡನೇ ವಿಕೆಟ್‌ಗೆ 90 ಎಸೆತಗಳಲ್ಲಿ 142 ರನ್ ಜೊತೆಯಾಟ ನಡೆಸಿದರು.

ಮಿಂಚಿನ ಪ್ರದರ್ಶನ ನೀಡಿದ ವೈಭವ್:

ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಕ್ಷರಶಃ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಚೆಂಡನ್ನು ಮೈದಾನನ ಮೂಲೆ ಮೂಲೆಗೆ ಅಟ್ಟಿದರು. ಕೇವಲ 80 ಎಸೆತಗಳಲ್ಲಿ ಭರ್ಜರಿ 15 ಬೌಂಡರಿ, 15 ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದರು.

ಯೂತ್ ODI ನಲ್ಲಿ 100 ಸಿಕ್ಸರ್ ಗಳಿಸಿದ ಖ್ಯಾತಿಯನ್ನು ಇವರು ಗಳಿಸಿದರು.

ನಾಯಕ ಆಯುಷ್ ಮ್ಹಾತ್ರೆ 51 ಎಸೆತಗಳಲ್ಲಿ 53 ರನ್, ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಕನಿಷ್ಕ್ ಚೌಹಾನ್ 20 ಎಸೆತಗಳಲ್ಲಿ 37, ವೇದಾಂತ್ ತ್ರಿವೇದಿ 32, ವಿಹಾನ್ ಮಲ್ಹೋತ್ರ 30, ಅಂಬರೀಶ್ 18, ಆರನ್ ಜಾರ್ಜ್ 9, ಹೆನಿಲ್ ಪಟೇಲ್ 5, ಕಿಲನ್ ಪಟೇಲ್ 3 ರನ್ ಗಳಿಸಿ ದಾಖಲೆಯ ಮೊತ್ತ ಪೇರಿಸಲು ಸಹಕರಿಸಿದರು.

ಇಂಗ್ಲೆಡ್ ಪರ ಜೇಮ್ಸ್ ಮಿಂಟೊ 3, ಅಲೆಕ್ಸ್ ಗ್ರೀನ್ ಮತ್ತು ಸೆಬಾಸ್ಟಿಯನ್ ಮೊರ್ಗನ್ ತಲಾ 2 ವಿಕೆಟ್‌ ಮತ್ತು ಮ್ಯಾನ್ನಿ ಲಮ್ಸ್‌ಡೆನ್ 1 ವಿಕೆಟ್ ಪಡೆದರು‌.

ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಜೋಸೆಫ್ ಮೂರ್ಸ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇಂಗ್ಲೆಂಡ್ ತಂಡ ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಾ ಹೋದರೂ ಕೆಲೆಬ್ ಫಾಲ್ಕನರ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಶತಕ ಗಳಿಸಿದರು ಕೂಡ ತಂಡವನ್ನು ಗೆಲುವಿನ ಗೆರೆ ದಾಟಿಸಲಾಗಲಿಲ್ಲ.

ಇಂಗ್ಲೆಂಡ್ ಪರ ಕೆಲೆಬ್ ಫಾಲ್ಕನರ್ 67 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ನೊಂದಿಗೆ 115 ರನ್ ಗಳಿಸಿದರು‌. ಬೆನ್ ಡಾಕಿನ್ಸ್ 56 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ನೊಂದಿಗೆ 66 ರನ್, ಬೆನ್ ಮೇಯರ್ಸ್ 28 ಎಸೆತಗಳಲ್ಲಿ 45 ರನ್, ಥಾಮಸ್ ರೀವ್ 18 ಎಸೆತಗಳಲ್ಲಿ 31 ರನ್, ಜೇಮ್ಸ್ ಮಿಂಟೊ 28 ರನ್, ಜೋಸೆಫ್ ಮೂರ್ಸ್ 17 ರನ್, ಮೆನ್ನಿ ಲಮ್ಸ್‌ಡೆನ್ 3 ರನ್ ಗಳಸಿದರು‌. ಇಂಗ್ಲೆಂಡ್ ತಂಡ 40.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 311 ರನ್ ಗಳಿಸಲಷ್ಟೇ ಶಕ್ತವಾಯ್ತು.

ಭಾರತ ಪರ ಅಂಬರೀಶ್ 3 ವಿಕೆಟ್, ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ 2 ವಿಕೆಟ್, ಕಿಲನ್ ಪಟೇಲ್ ಮತ್ತು ಆಯುಷ್ ಮ್ಹಾತ್ರೆ ತಲಾ ಒಂದು ವಿಕೆಟ್ ಪಡೆದು ಮಿಂಚಿದರು‌.

ಅಂತಿಮವಾಗಿ ಭಾರತ ಇಂಗ್ಲೆಡ್ ತಂಡದ ವಿರುದ್ಧ 100 ರನ್‌ಗಳ ಜಯ ಸಾಧಿಸಿ 6ನೇ ವಿಶ್ವಕಪ್ ಎತ್ತಿ ಹಿಡಿಯಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು