ಪುತ್ತೂರು: ಇಂದು (ಫೆ.7) ಕುರಿಯ ಕಿನ್ನಿಮಜಲು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ನೆಮೋತ್ಸವದ ಪ್ರಯುಕ್ತ ಗಯಾಪದ ಕಲಾವಿದೆರ್ ಉಬಾರ್ ತಂಡದಿಂದ ನೂತನ ಕಲಾ ಕಾಣಿಕೆ ತುಳು ಹಾಸ್ಯಮಯ, ಸಾಮಾಜಿಕ ನಾಟಕ ʼಓಲು ತತ್ತ್oಡ್…?ʼ ಪ್ರದರ್ಶನಗೊಳ್ಳಲಿದೆ.
ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದಲ್ಲಿ ತುಳುನಾಡ ಕಲಾ ತಪಸ್ವಿ, ಕಲಾ ಮಾಣಿಕ್ಯ ರವಿಶಂಕರ ಶಾಸ್ತ್ರಿ ಮಣಿಲ ಪುಣಚ ರಚಿಸಿ ನಿರ್ದೇಶಿಸಿರುವ ನಾಟಕಕ್ಕೆ ಕಾರ್ತಿಕ್ ಶಾಸ್ತ್ರಿ ಮಣಿಲ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಫೆ.7-8 ರಂದು ಕೋಡಿoಬಾಡಿಯಲ್ಲಿ ಸತ್ಯನಾರಾಯಣ ಪೂಜೆ
ಕಲಾವಿದರಾದ ಎ.ಯನ್. ಕೊಳಂಬೆ ರಾಮಕುಂಜ, ರವಿಶಂಕರ್ ಶಾಸ್ತ್ರಿ ಮಣಿಲ, ಕಿಶೋರ್ ಜೋಗಿ ಉಬಾರ್, ರಾಜೇಶ್ ಶಾಂತಿನಗರ, ದಿವಾಕರ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ ಹಿರೇಬಂಡಾಡಿ, ರಾಜಶೇಖರ್ ಶಾಂತಿನಗರ, ಸುನೀಲ್ ಪೆರ್ನೆ, ಉದಯ್ ಆರ್ ಪುತ್ತೂರು, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಜಗದೀಶ್ ಶಿಬರ, ಅನುಷಾ ಜೋಗಿ ಪುರುಷರಕಟ್ಟೆ, ವಸಂತ್ ಪೆರ್ನೆ, ಅನೀಶ್ ನೆಕ್ಕಿಲಾಡಿ, ಭರತ್ ಶಾಂತಿನಗರ, ರಂಜಿತ್ ಬೂಡಿಯಾರ್ ಹಾಗೂ ಯಜ್ಞಶ್ರೀ ಹಿರೇಬಂಡಾಡಿ ನಟಿಸಲಿದ್ದಾರೆ.
ಈ ಕಲಾ ಕಾಣಿಕೆಗೆ ಪ್ರದೀಪ್ ಕಾವು ವರ್ಣಾಲಂಕಾರ, ರಾಜೇಶ್ ಶಾಂತಿನಗರ ಸಲಹೆ ಸಹಕಾರ, ಗುಣಕರ ಅಗ್ನಾಡಿ ನಿರ್ವಹಣೆ, ಕೃಷ್ಣ ಮುಂಡ್ಯ ಹಾಗೂ ಸುಕೇಶ್ ಸುಂಕದಕಟ್ಟೆ ಧ್ವನಿ ಬೆಳಕು ಹಾಗೂ ಸಿದ್ದು ಬೆದ್ರ ರಂಗಾಲಂಕಾರದಲ್ಲಿ, ವಿಜಯ್ ಶಾಂತಿನಗರ, ಭರತ್ ಶಾಂತಿನಗರ ರಂಗ ಸಜ್ಜಿಕೆಯಲ್ಲಿ ಸಹಕರಿಸಲಿದ್ದಾರೆ ಎಂದು ತಂಡದ ಸಂಚಾಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ–ಮೇಲ್- g1newsdpt@gmail.com

