ಕ್ರಿಕೆಟ್‌ ಆಡುವಾಗಲೇ ರತ್ನಗಿರಿಯ ಕ್ರಿಕೆಟಿಗನ ದುರ್ಮರಣ: ಇಲ್ಲಿದೆ ನೋಡಿ ವಿಡಿಯೋ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಂಚಖಾರಿ ಎಂಬಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದ ಪ್ರವೀಣ್ ಪವಾರ್ ಎಂಬ ಆಟಗಾರ ಶುಕ್ರವಾರ ಹೃದಯಾಘಾತದಿಂದ ಪಿಚ್‌ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯು ನೇರ ಪ್ರಸಾರವಾಗುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಮೂಡಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವೀಣ್ ಪವಾರ್ ಅವರು ಪಂದ್ಯದ ವೇಳೆ ಸಕ್ರಿಯರಾಗಿದ್ದರು ಮತ್ತು ಯಾವುದೇ ಮುನ್ಸೂಚನೆ ಇಲ್ಲದೆ ಕುಸಿದು ಬಿದ್ದಿದ್ದಾರೆ.

ಮೊದಲು ತಲೆತಿರುಗಿ ಬಿದ್ದಿದ್ದಾನೆ ಎಂದು ಸಹ ಆಟಗಾರರು ಭಾವಿಸಿದ್ದರು. ಆದರೆ ಆಟಗಾರ ಎದ್ದೇಳದಿದ್ದಾಗ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಆತನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

Advertisement

ಇದನ್ನೂ ಓದಿ: ಹಸಿವು, ಬಳಲಿಕೆ, ಹತಾಶೆ: ಅಪ್ಪನ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಿರುಚಾಡಿದ ಯುವಕ

ಇಲ್ಲಿದೆ ನೋಡಿ ವಿಡಿಯೋ 

Advertisement

ರತ್ನಗಿರಿಯ ಸ್ಥಳೀಯ ಕ್ರಿಕೆಟ್ ವಲಯದಲ್ಲಿ ಸುಪರಿಚಿತರಾಗಿದ್ದ ಪ್ರವೀಣ್ ಪವಾರ್ ಅವರ ಅಕಾಲಿಕ ನಿಧನವು ಕ್ರೀಡಾ ಪ್ರೇಮಿಗಳಲ್ಲಿ ತೀವ್ರ ಶೋಕ ಮೂಡಿಸಿದೆ. ಹಲವು ವರ್ಷಗಳಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಪವಾರ್ ಅವರ ಸಾವು ಕ್ರೀಡಾ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಇತ್ತೀಚೆಗೆ ದೈಹಿಕವಾಗಿ ಸದೃಢರಾಗಿರುವ ಕ್ರೀಡಾಪಟುಗಳು ಕೂಡ ಹಠಾತ್ ಹೃದಯಾಘಾತದಿಂದ ಮೃತಪಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು