ಮಗನ ಜತೆಗೆ ಹುಡುಗಿಯೊಬ್ಬಳನ್ನು ನೋಡಿ ತಾಯಿ ಮಾಡಿದ್ದೇನು ಗೊತ್ತಾ? ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನೆಟ್ಟಗರು “ಅಲ್ಟ್ರಾ-ಲೆಜೆಂಡ್ ಮದರ್” ಕರೆದಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಮಗ ತನ್ನ ಗೆಳತಿಯೊಂದಿಗೆ ಸಿಕ್ಕಿಬಿದ್ದಾಗ, ಆ ತಾಯಿ ಪ್ರತಿಕ್ರಿಯಿಸಿದ ರೀತಿ ನಿಜಕ್ಕೂ ಸಿನೆಮಾ ಶೈಲಿಯಲ್ಲಿದೆ! ಮಗನನ್ನು ಗೆಳತಿಯ ಜೊತೆ ನೋಡಿದ ತಕ್ಷಣ ಆ ತಾಯಿ ಕೋಪಗೊಳ್ಳುವ ಬದಲು, ಇಬ್ಬರನ್ನೂ ನಿಲ್ಲಿಸಿ ಅಲ್ಲೇ ಜನರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಸಿದ್ದಾರೆ.
ಮಗ ನೀನು ಇನ್ನು ಮುಂದೆ “ಫ್ರೆಂಡ್ ಜೊತೆ ಇದ್ದೆ”, “ಪ್ರಾಜೆಕ್ಟ್ ಕೆಲಸ ಇತ್ತು” ಎಂದು ಸುಳ್ಳು ಹೇಳುವ ಅವಶ್ಯಕತೆಯನ್ನೇ ಇಲ್ಲ. “ನಿಮಗೆ ಮದುವೆ ಆಗೋ ಇಷ್ಟ ಇದೆಯಲ್ಲವೇ? ಹಾಗಾದರೆ ಈಗಲೇ ಮಾತುಕತೆ ಮುಗಿಯಲಿ” ಎಂದು ಹೇಳಿದ್ದಾರೆ. ತಾಯಿ ಅಂದ್ರೆ ಹೀಗಿರಬೇಕು, ಮಗನಿಗೆ ಎಸ್ಕೇಪ್ ಆಗಲು ದಾರಿಯೇ ಬಿಟ್ಟಿಲ್ಲ!” ಎಂದು ಹಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು “ಇದು ಮಗನಿಗೆ ಸಿಕ್ಕಿದ ಸ್ವೀಟ್ ಶಿಕ್ಷೆ” ಎಂದು ತಮಾಷೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಏಜ್ ಜಸ್ಟ್ ಎ ನಂಬರ್: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ 96ರ ಅಜ್ಜಿ
ವಿಡಿಯೋ ಇಲ್ಲಿದೆ ನೋಡಿ:

🚨 Mother caught her son with his girlfriend at a metro station.
She immediately arranged his engagement on spot 😂
Intelligent Mom settled the issue in one go, ending the need for excuses or secret meetings. pic.twitter.com/xyk3lYdgqu
— News Algebra (@NewsAlgebraIND) February 7, 2026
ಇದು ನೋಡಲು ತಮಾಷೆಯಾಗಿ ಕಂಡರೂ, ಆ ತಾಯಿಯ ಸಮಯಪ್ರಜ್ಞೆ (Presence of Mind) ಅದ್ಭುತವಾಗಿದೆ. ಮಗನನ್ನು ಸಾರ್ವಜನಿಕವಾಗಿ ಅವಮಾನಿಸುವ ಬದಲು ಅಥವಾ ಮನೆಯಲ್ಲಿ ದೊಡ್ಡ ಗಲಾಟೆ ಮಾಡುವ ಬದಲು, ಆಕೆ ಪರಿಸ್ಥಿತಿಯನ್ನು ಅತ್ಯಂತ ಪ್ರಬುದ್ಧವಾಗಿ ಮತ್ತು ಬುದ್ಧಿವಂತಿಕೆಯಿಂದ ನಿಭಾಯಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಇಂದಿನ ಕಾಲದ ಪೋಷಕರು ಮಕ್ಕಳ ಸಂಬಂಧಗಳ ಬಗ್ಗೆ ಎಷ್ಟು ಪ್ರಾಕ್ಟಿಕಲ್ ಆಗಿ ಯೋಚಿಸುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

