ಏಜ್ ಜಸ್ಟ್ ಎ ನಂಬರ್: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡ್ಯಾನ್ಸ್​ ಮಾಡಿದ 96ರ ಅಜ್ಜಿ

ಅಬ್ಬಾ! 96 ವರ್ಷದ ವಯಸ್ಸಿನಲ್ಲೂ ಈ ಅಜ್ಜಿಯ ಉತ್ಸಾಹ ಮತ್ತು ನೃತ್ಯದ ಲಯ ನಿಜಕ್ಕೂ ಅದ್ಭುತ. VTVO Chennai ಆಯೋಜಿಸಿದ ‘ಮುದಿಯೋರ್ ತಿರುವಿಳಾ’ (Mudhiyor Thiruvizha) ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.ಆ ಅಜ್ಜಿಯ ‘ಗ್ರೇಸ್‌ಫುಲ್’ ಸ್ಟೆಪ್ಸ್ ಮಾತ್ರ ಎಲ್ಲರ ಗಮನವನ್ನೂ ಸೆಳೆಯುವಂತಿತ್ತು. 96ನೇ ವಯಸ್ಸಿನಲ್ಲಿ ಅನೇಕರು ಓಡಾಡಲೂ ಕಷ್ಟಪಡುತ್ತಾರೆ.

ಆದರೆ ಈ ಅಜ್ಜಿ ಸೀರೆ ಉಟ್ಟು, ಅಷ್ಟೇ ಲೀಲಾಜಾಲವಾಗಿ ಹೆಜ್ಜೆ ಹಾಕುತ್ತಿರುವುದು ನೋಡಿದರೆ ಏಜ್ ಜಸ್ಟ್ ಎ ನಂಬರ್ ಎಂಬ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಅವರ ನೃತ್ಯದಲ್ಲಿ ಯಾವುದೇ ಗಡಿಬಿಡಿ ಇಲ್ಲ, ಬದಲಿಗೆ ಪ್ರತಿ ಹೆಜ್ಜೆಯಲ್ಲೂ ಒಂದು ಘನತೆ ಮತ್ತು ಸಂಭ್ರಮವಿದೆ. ಅವರ ಬಾಡಿ ಲ್ಯಾಂಗ್ವೇಜ್‌ನಿಂದಲೇ ತಿಳಿಯುತ್ತದೆ ಬಹುಶಃ ಅವರು ಚಿಕ್ಕ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರು ಎಂದು ನೆಟ್ಟಿಗರು ಹೇಳಿದ್ದಾರೆ.

Advertisement

ಇದನ್ನೂ ಓದಿ: ಜೇನುನೊಣಗಳ ದಾಳಿಯಿಂದ ತನ್ನ ಪ್ರಾಣ ಒತ್ತೆ ಇಟ್ಟು ಮಕ್ಕಳ ರಕ್ಷಿಸಿದ ಅಂಗನವಾಡಿ ಸಹಾಯಕಿ

ಇಲ್ಲಿದೆ ನೋಡಿ ವಿಡಿಯೋ:

ಹಿರಿಯ ನಾಗರಿಕರಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ, ಅವರು ತಮ್ಮ ಒಂಟಿತನವನ್ನು ಮರೆತು ಸಂಭ್ರಮಿಸುತ್ತಾರೆ. ಆ ಅಜ್ಜಿಯ ಮುಖದ ಮೇಲಿನ ನಗು ಮತ್ತು ಅವರ ಎನರ್ಜಿ ಯುವ ಪೀಳಿಗೆಗೂ ದೊಡ್ಡ ಸ್ಫೂರ್ತಿ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು